ಹಾಡಿನ ಮೂಲಕ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾದ ಖುಷಿ ಹಂಚಿಕೊಂಡ ಮೈಥಿಲಿ ಠಾಕೂರ್
ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ 25 ವರ್ಷದ ಮೈಥಿಲಿ ಠಾಕೂರ್ ದೇಶದ ಅತಿ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈಥಿಲಿ ಠಾಕೂರ್ ಅವರು ಬಿಹಾರದ ಅಲಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ 84,915 ಮತಗಳನ್ನು ಪಡೆದು ಆರ್ಜೆಡಿಯ ವಿನೋದ್ ಮಿಶ್ರಾ ಅವರನ್ನು ಸೋಲಿಸಿದ್ದಾರೆ.
ಪಾಟ್ನಾ, ನವೆಂಬರ್ 19: ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Elections) ಬಿಜೆಪಿಯಿಂದ ಟಿಕೆಟ್ ಪಡೆದು ಅಲಿನಗರ ವಿಧಾನಸಭಾ ಸ್ಥಾನದಿಂದ ಗೆದ್ದ ಜಾನಪದ ಗಾಯಕಿ ಮೈಥಿಲಿ ಠಾಕೂರ್, ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುವುದಕ್ಕೂ ಮುನ್ನ ಹಾಡಿನ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಮೈಥಿಲಿ ಠಾಕೂರ್ ಜಾನಪದ ಗೀತೆಯ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನಾಳೆ ಬಿಹಾರದಲ್ಲಿ ನೂತನ ಸರ್ಕಾರ ರಚನೆಯಾಗಲಿದೆ. ನಿತೀಶ್ ಕುಮಾರ್ 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ 25 ವರ್ಷದ ಮೈಥಿಲಿ ಠಾಕೂರ್ ದೇಶದ ಅತಿ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈಥಿಲಿ ಠಾಕೂರ್ ಅವರು ಬಿಹಾರದ ಅಲಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ 84,915 ಮತಗಳನ್ನು ಪಡೆದು ಆರ್ಜೆಡಿಯ ವಿನೋದ್ ಮಿಶ್ರಾ ಅವರನ್ನು ಸೋಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ