AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ. 20ರಂದು ಬಿಹಾರದ ಸಿಎಂ ಆಗಿ 10ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ

ಬಿಹಾರದಲ್ಲಿ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 20ರಂದು ನಿತೀಶ್ ಕುಮಾರ್ ಎನ್​ಡಿಎ ಸರ್ಕಾರದ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. 10ನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆಯಲಿರುವ ಬಿಹಾರದಲ್ಲಿ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ಪರಿಶೀಲಿಸಿದ್ದಾರೆ.

ನ. 20ರಂದು ಬಿಹಾರದ ಸಿಎಂ ಆಗಿ 10ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ
Cm Nitish Kumar
ಸುಷ್ಮಾ ಚಕ್ರೆ
|

Updated on: Nov 18, 2025 | 11:11 PM

Share

ಪಾಟ್ನಾ, ನವೆಂಬರ್ 18: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Elections) ಎನ್‌ಡಿಎಯ ನಿರ್ಣಾಯಕ ಗೆಲುವಿನ ನಂತರ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನವೆಂಬರ್ 20ರ ಗುರುವಾರ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಯ ಹಲವಾರು ಉನ್ನತ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನವೆಂಬರ್ 20ರಂದು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆಯಲಿರುವ ಬಿಹಾರದಲ್ಲಿ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ಪರಿಶೀಲಿಸಿದರು. ದಾಖಲೆಯ ಹತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್ ಅವರ ಜೊತೆ ಬೇರೆ ಯಾರೆಲ್ಲ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.

ಇದನ್ನೂ ಓದಿ: ಬಿಹಾರದ ಐತಿಹಾಸಿನ ಗೆಲುವಿನ ಬಳಿಕ 1,800 ಶಾಸಕರ ಗುರಿಯತ್ತ ಕಣ್ಣಿಟ್ಟ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಲವಾರು ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಿಹಾರ ರಾಜಧಾನಿ ಮತ್ತು ಗಾಂಧಿ ಮೈದಾನದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 20ರವರೆಗೆ ಗಾಂಧಿ ಮೈದಾನಕ್ಕೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಂಪುಟ ಸ್ಥಾನಗಳ ಹಂಚಿಕೆಯನ್ನು ಅಂತಿಮಗೊಳಿಸಲು ಮತ್ತು ವಿಧಾನಸಭಾ ಸ್ಪೀಕರ್ ಹುದ್ದೆಯ ಬಗ್ಗೆ ಒಮ್ಮತ ಮೂಡಿಸಲು ಎನ್‌ಡಿಎ ಪಾಲುದಾರರಲ್ಲಿ ತೀವ್ರ ಲಾಬಿ ನಡೆಯುತ್ತಿದೆ.

ಇದನ್ನೂ ಓದಿ: ಬಿಹಾರದಲ್ಲಿ ಸಿಎಂ ಗಾದಿಗೆ ಟಿಕೆಟ್ ವಿತರಣೆ ಸೂತ್ರ? ಜೆಡಿಯುಗೆ ಸಿಎಂ; ಬಿಜೆಪಿ, ಎಲ್​ಜೆಪಿಗೆ ಡಿಸಿಎಂ ಸ್ಥಾನ?

ಎನ್‌ಡಿಎಯ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ಅಭೂತಪೂರ್ವ ಫಲಿತಾಂಶಗಳನ್ನು ದಾಖಲಿಸಿದ್ದು, ಅವರು ಸ್ಪರ್ಧಿಸಿದ ಸ್ಥಾನಗಳಲ್ಲಿ ಸುಮಾರು ಶೇ. 85ರಷ್ಟು ಸ್ಥಾನವನ್ನು ಗೆದ್ದಿವೆ. ಬಿಜೆಪಿ 89 ಸ್ಥಾನಗಳನ್ನು ಗೆದ್ದಿದೆ, ಇದು 2020ರ 74 ಸ್ಥಾನಗಳಿಗಿಂತ ಹೆಚ್ಚಾಗಿದೆ. ಆದರೆ ಜೆಡಿಯು 85 ಸ್ಥಾನಗಳನ್ನು ಗೆದ್ದಿದೆ. ಮಹಾಘಟಬಂಧನ್ ಕೇವಲ 34 ಸ್ಥಾನಗಳನ್ನು ಗಳಿಸಿದ್ದು, ಆರ್‌ಜೆಡಿ 25 ಮತ್ತು ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ