AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾರಿ ತಪ್ಪಿದ ಮುಸ್ಲಿಮರು; ದೆಹಲಿ ಸ್ಫೋಟದ ಆರೋಪಿ ವಿಡಿಯೋಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯೆ

ದಾರಿ ತಪ್ಪಿದ ಮುಸ್ಲಿಮರು; ದೆಹಲಿ ಸ್ಫೋಟದ ಆರೋಪಿ ವಿಡಿಯೋಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯೆ

ಸುಷ್ಮಾ ಚಕ್ರೆ
|

Updated on: Nov 18, 2025 | 8:14 PM

Share

ನೀವು ಮುಗ್ಧ ಜನರನ್ನು ಕೊಲ್ಲುತ್ತಿದ್ದೀರಿ, ಇಸ್ಲಾಂ ಈ ರೀತಿಯ ಹಿಂಸೆಯನ್ನು ಎಂದೂ ಕಲಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ರಾಜಕೀಯ ಸಂಚಲನವನ್ನು ಹುಟ್ಟುಹಾಕಿದೆ. ದೆಹಲಿಯ ದಾಳಿಗೂ ಮುನ್ನ ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್ ನಬಿ ಮಾಡಿದ್ದ ಅವರ ವೀಡಿಯೊಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಇಮ್ರಾನ್, "ಆ ವೀಡಿಯೊವನ್ನು ನಾನು ಒಪ್ಪುವುದಿಲ್ಲ. ಅದು ಆತ್ಮಹತ್ಯಾ ದಾಳಿಯನ್ನು ಸಮರ್ಥಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಸಂದರ್ಭದಲ್ಲೂ ಇಸ್ಲಾಂನಲ್ಲಿ ಆತ್ಮಹತ್ಯೆ ಸ್ವೀಕಾರಾರ್ಹವಲ್ಲ. ನಮ್ಮ ಧರ್ಮದಲ್ಲಿ ಅದನ್ನು ನಿಷೇಧಿಸಲಾಗಿದೆ. ನೀವು ಮುಗ್ಧ ಜನರನ್ನು ಕೊಲ್ಲುತ್ತಿದ್ದೀರಿ, ಅವರು ದಾರಿ ತಪ್ಪಿದ ಜನರು. ಅವರ ಕಾರ್ಯಗಳು ಇಸ್ಲಾಂ ಅನ್ನು ಪ್ರತಿಬಿಂಬಿಸುವುದಿಲ್ಲ ಅಥವಾ ಇದು ಇಸ್ಲಾಂನ ಮಾರ್ಗವೂ ಅಲ್ಲ" ಎಂದು ಅವರು ಹೇಳಿದ್ದಾರೆ.

ನವದೆಹಲಿ, ನವೆಂಬರ್ 18: ದೆಹಲಿಯಲ್ಲಿ ನಡೆದ ಬಾಂಬ್ ದಾಳಿಗೆ (Delhi Car Blast Case) ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ದಾಳಿಕೋರರನ್ನು ದಾರಿ ತಪ್ಪಿದ ಯುವಕರು ಎಂದು ಹೇಳಿದ್ದಾರೆ. “ನೀವು ಮುಗ್ಧ ಜನರನ್ನು ಕೊಲ್ಲುತ್ತಿದ್ದೀರಿ, ಇಸ್ಲಾಂ ಈ ರೀತಿಯ ಹಿಂಸೆಯನ್ನು ಎಂದೂ ಕಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ರಾಜಕೀಯ ಸಂಚಲನವನ್ನು ಹುಟ್ಟುಹಾಕಿದೆ.

ದೆಹಲಿಯ ದಾಳಿಗೂ ಮುನ್ನ ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್ ನಬಿ ಮಾಡಿದ್ದ ಅವರ ವೀಡಿಯೊಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಇಮ್ರಾನ್, “ಆ ವೀಡಿಯೊವನ್ನು ನಾನು ಒಪ್ಪುವುದಿಲ್ಲ. ಅದು ಆತ್ಮಹತ್ಯಾ ದಾಳಿಯನ್ನು ಸಮರ್ಥಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಸಂದರ್ಭದಲ್ಲೂ ಇಸ್ಲಾಂನಲ್ಲಿ ಆತ್ಮಹತ್ಯೆ ಸ್ವೀಕಾರಾರ್ಹವಲ್ಲ. ನಮ್ಮ ಧರ್ಮದಲ್ಲಿ ಅದನ್ನು ನಿಷೇಧಿಸಲಾಗಿದೆ. ನೀವು ಮುಗ್ಧ ಜನರನ್ನು ಕೊಲ್ಲುತ್ತಿದ್ದೀರಿ, ಅವರು ದಾರಿ ತಪ್ಪಿದ ಜನರು. ಅವರ ಕಾರ್ಯಗಳು ಇಸ್ಲಾಂ ಅನ್ನು ಪ್ರತಿಬಿಂಬಿಸುವುದಿಲ್ಲ ಅಥವಾ ಇದು ಇಸ್ಲಾಂನ ಮಾರ್ಗವೂ ಅಲ್ಲ” ಎಂದು ಅವರು ಹೇಳಿದ್ದಾರೆ.

“ನಮ್ಮ ಧರ್ಮವು ನಮ್ಮ ದೇಶವನ್ನು ಪ್ರೀತಿಸಲು ನಮಗೆ ಕಲಿಸುತ್ತದೆ. ಆದ್ದರಿಂದ, ಈ ರೀತಿ ದಾಳಿ ಮಾಡುವ ಮೂಲಕ ನೀವು ದೇಶಕ್ಕೆ ವಿರುದ್ಧವಾಗಿದ್ದೀರಿ. ಇದಕ್ಕೂ ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ. ಇವರು ದಾರಿ ತಪ್ಪಿದ ಜನರು. ಈ ದಾರಿ ತಪ್ಪಿದ ಜನರ ಮಾತುಗಳು ಇಸ್ಲಾಂನ ಚಿತ್ರಣವನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ