Video: ದೆಹಲಿ ಸ್ಫೋಟಕ್ಕೂ ಮುನ್ನ ಆತ್ಮಾಹುತಿ ಬಾಂಬ್ ದಾಳಿಯನ್ನು ಉಗ್ರ ಉಮರ್ ಹೇಗೆ ಸಮರ್ಥಿಸಿಕೊಂಡಿದ್ದ ನೋಡಿ
ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದ ಭಯೋತ್ಪಾದಕ ಮೊಹಮ್ಮದ್ ಉಮರ್ ನಬಿಯ ಹಳೆಯ ವಿಡಿಯೋವೊಂದು ಈಗ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಉಮರ್ ನಬಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಆತ್ಮಹತ್ಯಾ ಬಾಂಬ್ ದಾಳಿಯನ್ನು ಸಮರ್ಥಿಸಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಉಮರ್ ನಬಿ ಒಬ್ಬನೇ ಕ್ಯಾಮೆರಾ ಮುಂದೆ ಕುಳಿತು ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.
ನವದೆಹಲಿ, ನವೆಂಬರ್ 18: ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ ಭಯೋತ್ಪಾದಕ ಮೊಹಮ್ಮದ್ ಉಮರ್ ನಬಿಯ ಹಳೆಯ ವಿಡಿಯೋವೊಂದು ಈಗ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಉಮರ್ ನಬಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ ಆತ್ಮಹತ್ಯಾ ಬಾಂಬ್ ದಾಳಿಯನ್ನು ಸಮರ್ಥಿಸಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಉಮರ್ ನಬಿ ಒಬ್ಬನೇ ಕ್ಯಾಮೆರಾ ಮುಂದೆ ಕುಳಿತು ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.
ಈ ವಿಡಿಯೋದಲ್ಲಿ, ಭಯೋತ್ಪಾದಕ ಉಮರ್ ಆತ್ಮಹತ್ಯಾ ಬಾಂಬ್ ದಾಳಿಯನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ಹೇಳುತ್ತಾನೆ. ಜನರು ಮಾಡುವ ದೊಡ್ಡ ತಪ್ಪು ಎಂದರೆ ಬಾಂಬ್ ದಾಳಿ ಅಥವಾ ಆತ್ಮಹತ್ಯಾ ಬಾಂಬ್ ದಾಳಿಯ ಕಲ್ಪನೆ ನಿಜವಾಗಿಯೂ ಏನೆಂದು ಅರ್ಥಮಾಡಿಕೊಳ್ಳಲು ವಿಫಲವಾಗುವುದು.
ಭಯೋತ್ಪಾದಕ ಡಾ. ಉಮರ್ ಮೂಲತಃ ಪುಲ್ವಾಮಾದ ಕೊಯಿಲ್ ಗ್ರಾಮದವನು. ಅವನಿಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಇತ್ತೀಚಿನ ತಿಂಗಳುಗಳಲ್ಲಿ ಉಮರ್ ನ ನಡವಳಿಕೆ ಬದಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಕ್ಟೋಬರ್ 30 ರಿಂದ ಫರಿದಾಬಾದ್ ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ತನ್ನ ಕರ್ತವ್ಯವನ್ನು ತೊರೆದು ಫರಿದಾಬಾದ್ ಮತ್ತು ದೆಹಲಿ ನಡುವೆ ಪ್ರಯಾಣಿಸಲು ಪ್ರಾರಂಭಿಸಿದ್ದ.
ಅವನು ಆಗಾಗ ರಾಮಲೀಲಾ ಮೈದಾನ ಮತ್ತು ಸುನ್ಹೇರಿ ಮಸೀದಿ ಬಳಿಯ ಮಸೀದಿ ಬಳಿ ಓಡಾಡುತ್ತಿದ್ದ.ನವೆಂಬರ್ 9 ರಂದು ಫರಿದಾಬಾದ್‌ನಲ್ಲಿ ನಡೆದ ದಾಳಿಯ ನಂತರ ಆತ ನಾಪತ್ತೆಯಾಗಿದ್ದ. ನಂತರ ಗೋದಾಮೊಂದರಿಂದ ಸುಮಾರು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಆತನ ಕೆಲವು ಸಹಚರರನ್ನು ಬಂಧಿಸಲಾಗಿತ್ತು. ನವೆಂಬರ್ 10ರಂದು ದೆಹಲಿಯಲ್ಲಿ ಉಗ್ರ ಉಮರ್ ಆತ್ಮಾಹುತಿ ದಾಳಿ ನಡೆಸಿದ್ದ, ಘಟನೆಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

