ಶಾಸಕ ರವಿಶಂಕರ್ರಿಂದ ಹಲ್ಲೆ ಆರೋಪ: ಸಂತ್ರಸ್ತ ಎನ್ನಲಾದ ವ್ಯಕ್ತಿಯಿಂದಲೇ ಸ್ಪಷ್ಟನೆ
ಕೆ.ಆರ್. ನಗರ ಶಾಸಕ ರವಿಶಂಕರ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಕುಡ್ಲೂರು ಪಂಚಾಯತಿ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದ ವ್ಯಕ್ತಿ ನಿರಾಕರಿಸಿದ್ದಾರೆ. ಶಾಸಕರು ಕೇವಲ ಗೊಂದಲ ಕಡಿಮೆ ಮಾಡಲು ತಮ್ಮನ್ನು ಪಕ್ಕಕ್ಕೆ ಕೂರಿಸಿದ್ದಾಗಿ ಅವರು ತಿಳಿಸಿದ್ದು, ಯಾವುದೇ ಹಲ್ಲೆ ನಡೆದಿಲ್ಲ ಎಂದಿದ್ದಾರೆ. ಈ ಆರೋಪಗಳು ಬೇಕು ಎಂದು ಮಾಡುತ್ತಿರುವ ಅಪಪ್ರಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು, ನವೆಂಬರ್ 18: ವ್ಯಕ್ತಿ ಮೇಲೆ ಕೆ.ಆರ್.ನಗರ ಶಾಸಕ ರವಿಶಂಕರ್ ಅವರಿಂದ ಹಲ್ಲೆ ಆರೋಪ ಸಂಬಂಧ ಹೊಡೆಸಿಕೊಂಡ ಎನ್ನಲಾದ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಕೆ.ಆರ್.ನಗರದ ಮಹದೇವ್, ಅಂದು ಸಭೆಯಲ್ಲಿ ನಾನು ಡೈರಿ ವಿಚಾರವಾಗಿ ಸಮಸ್ಯೆ ಹೇಳುತ್ತಿದ್ದೆ. ಬೇರೆಯವರು ಬೇರೆ ಬೇರೆ ಸಮಸ್ಯೆ ಹೇಳುತ್ತಿದ್ದರು. ಎಲ್ಲವೂ ಗೊಂದಲಮಯವಾಗಿತ್ತು, ಶಾಸಕರಿಗೆ ಏನೂ ಕೇಳಿಸುತ್ತಿರಲಿಲ್ಲ. ನಾನು ಪಕ್ಕದಲ್ಲೇ ನಿಂತಿದ್ದೆ ಬೆನ್ನು ತಟ್ಟಿ ಕುಳಿತುಕೊಳ್ಳಲು ಹೇಳಿದರು. ಯಾವುದೇ ಹಲ್ಲೆ ಮಾಡಿಲ್ಲ, ಅದು ಸತ್ಯಕ್ಕೆ ದೂರವಾದ ಆರೋಪ. ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕೂರಿಸಿದ್ದನ್ನು ಬಿಟ್ಟರೆ ಯಾವ ಗಲಾಟೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
