AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲ್ವೆಜಿ ವಿಮಾನ ನಿಲ್ದಾಣದಲ್ಲಿ ಕಾಂಗೋ ಸಚಿವರಿದ್ದ ಚಾರ್ಟರ್ಡ್ ಜೆಟ್ ಬೆಂಕಿಗೆ ಆಹುತಿ

ಕೊಲ್ವೆಜಿ ವಿಮಾನ ನಿಲ್ದಾಣದಲ್ಲಿ ಕಾಂಗೋ ಸಚಿವರಿದ್ದ ಚಾರ್ಟರ್ಡ್ ಜೆಟ್ ಬೆಂಕಿಗೆ ಆಹುತಿ

ಸುಷ್ಮಾ ಚಕ್ರೆ
|

Updated on: Nov 18, 2025 | 3:11 PM

Share

ರನ್‌ವೇ ಸ್ಕಿಡ್ ಆದ ನಂತರ ಕಾಂಗೋ ಸಚಿವರನ್ನು, ಇತರ 19 ಜನರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ವಿಮಾನ ಬೆಂಕಿಗೆ ಆಹುತಿಯಾಗಿದೆ. ಈ ಅಪಘಾತದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಬೆಂಕಿಯ ಜ್ವಾಲೆಗಳು ವಿಮಾನದ ಹಿಂಭಾಗವನ್ನು ಆವರಿಸುವ ಕೆಲವೇ ಸೆಕೆಂಡುಗಳ ಮೊದಲು ಎಲ್ಲಾ ಪ್ರಯಾಣಿಕರು ಕೆಳಗೆ ಇಳಿದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಂಗೋ, ನವೆಂಬರ್ 18: ಕೊಲ್ವೆಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಗಣಿ ಸಚಿವ ಲೂಯಿಸ್ ವಾಟಮ್ ಕಬಾಂಬಾ ಮತ್ತು ಅವರ ನಿಯೋಗವನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ಎಂಬ್ರೇರ್ ವಿಮಾನವು ರನ್‌ವೇಯಿಂದ ಜಾರಿ ಬೆಂಕಿಗೆ (Fire Accident) ಆಹುತಿಯಾಯಿತು. ಬೆಂಕಿಯ ಜ್ವಾಲೆಗಳು ವಿಮಾನದ ಹಿಂಭಾಗವನ್ನು ಆವರಿಸುವ ಕೆಲವೇ ಸೆಕೆಂಡುಗಳ ಮೊದಲು ಎಲ್ಲಾ ಪ್ರಯಾಣಿಕರು ಕೆಳಗೆ ಇಳಿದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋಗಳಲ್ಲಿ ಕೆಲವು ಪ್ರಯಾಣಿಕರು ಹೊರಗೆ ಓಡುವುದನ್ನು ನೋಡಬಹುದು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಹಿನ್ನೆಲೆಯಲ್ಲಿ ಜನರು ಜೋರಾಗಿ ಕೂಗುವುದನ್ನು ಕೇಳಬಹುದು. ರಾಜಧಾನಿ ಕಿನ್ಶಾಸಾದಿಂದ ಲುವಾಲಾಬಾ ಪ್ರಾಂತ್ಯಕ್ಕೆ ಹಾರಿದ್ದ ವಿಮಾನವು ಬೆಳಿಗ್ಗೆ 11 ಗಂಟೆ ಸುಮಾರಿಗೆ (ಸ್ಥಳೀಯ ಸಮಯ) ರನ್‌ವೇಯಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡಿತು. ತಕ್ಷಣ ಅದರ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಕ್ಯಾಬಿನ್‌ನಲ್ಲಿ ಹೊಗೆ ತುಂಬಿದ್ದರಿಂದ ಹಿರಿಯ ಸರ್ಕಾರಿ ಅಧಿಕಾರಿಗಳು, ಸಚಿವರು ಸೇರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೂಡಲೆ ಕೆಳಗೆ ಇಳಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ