‘ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ ರಣಾವತ್

‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರ ರಾಜಕೀಯದ ಆರಂಭಿಕ ದಿನಗಳಿಂದ ಹಿಡಿದು ಅವರ ಹತ್ಯೆವರೆಗೆ ಎಲ್ಲವನ್ನೂ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ಸತೀಶ್ ಶಾ, ಶ್ರೇಯಸ್ ತಲ್ಪಡೆ, ಮಹಿಮಾ ಚೌಧರಿ ನಟಿಸಿದ್ದಾರೆ. ಈಗ ಕಂಗನಾ ಅವರು ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

‘ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ ರಣಾವತ್
ಕಂಗನಾ

Updated on: Aug 24, 2024 | 7:28 AM

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ನಟಿ, ಸಂಸದೆ ಕಂಗನಾ ರಣಾವತ್ ಅವರು ಸಿನಿಮಾ ಮಾಡಿದ್ದು, ಅದಕ್ಕೆ ‘ಎಮರ್ಜೆನ್ಸಿ’ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಕುರಿತಾದ ವಿಚಾರಗಳನ್ನು ಹೇಳಲಾಗಿದೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ಅವರೇ ಮಾಡಿದ್ದಾರೆ. ಅವರು ಕಂಗನಾ ಅವರನ್ನು ಹೊಗಳಿದ್ದಾರೆ. ಕೆಲವು ವಿಚಾರಗಳಲ್ಲಿ ಅವರನ್ನು ತೆಗಳಿದ್ದಾರೆ.

‘ಇಂದಿರಾ ಗಾಂಧಿ ಅವರು ಸವಲತ್ತು ಪಡೆದಿದ್ದರು. ಅವರು ಅವರು ಪ್ರಧಾನಿಯ ಮಗಳು. ತಮ್ಮ ತಂದೆಯ ಅಧಿಕಾರದ ಅವಧಿಯಲ್ಲಿ ಅಧಿಕೃತ ಸ್ಥಾನಗಳನ್ನು ಹೊಂದಿದ್ದರು. ಇಷ್ಟೆಲ್ಲ ಸವಲತ್ತು ಇದ್ದರೂ ತಮ್ಮನ್ನು ತಾವು ಸಾಬೀತುಪಡಿಸಬೇಕು ಎಂಬ ಸಂಕಲ್ಪವನ್ನು ಹೊಂದಿದ್ದರು. ಇದು ನನಗೆ ಅವರಲ್ಲಿ ಇಷ್ಟವಾದ ಗುಣ. ಅವರು ಸಾಕಷ್ಟು ಸವಲತ್ತುಗಳನ್ನು ಪಡೆದಿರಬಹುದು. ಆದರೆ ಅವರನ್ನು ಟೀಕಿಸಿದಾಗಲೆಲ್ಲಾ ಅವರು ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಅವರು ನಿಜಕ್ಕೂ ವಿನ್ನರ್’ ಎಂದಿದ್ದಾರೆ ಕಂಗನಾ.

‘ಇಂದಿರಾ ಗಾಂಧಿ ಬಗ್ಗೆ ನೆಗೆಟಿವ್ ವಿಚಾರಗಳೂ ಇವೆ. ಅವರು ತಮ್ಮ ಜೀವನದಲ್ಲಿ ಯಾವುದೇ ಸ್ವಾಭಾವಿಕ ಹೋರಾಟವನ್ನು ಎದುರಿಸಲಿಲ್ಲ. ಯಾರೋ ಮಾಡಿದ ಹೋರಾಟವು ನಿಜವಾಗಿರಲು ಸಾಧ್ಯವಿಲ್ಲ. ನೀವು ಪಿಎಂ ಕುರ್ಚಿಯಲ್ಲಿದ್ದಾಗ, ನೀವು ನಿಸ್ವಾರ್ಥವಾಗಿರಬೇಕು. ನೀವು ಅಹಂಕಾರದಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: ‘ಎಮರ್ಜೆನ್ಸಿ’ ಟ್ರೇಲರ್: ಇಂದಿರಾ ಗಾಂಧಿ ಪಾತ್ರ ಮಾಡಿದ ಕಂಗನಾಗೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿದ ಫ್ಯಾನ್ಸ್

‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರ ರಾಜಕೀಯದ ಆರಂಭಿಕ ದಿನಗಳಿಂದ ಹಿಡಿದು ಅವರ ಹತ್ಯೆವರೆಗೆ ಎಲ್ಲವನ್ನೂ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್, ಸತೀಶ್ ಶಾ, ಶ್ರೇಯಸ್ ತಲ್ಪಡೆ, ಮಹಿಮಾ ಚೌಧರಿ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 6ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us