‘ಕರುಪ್ಪು’ ಚಿತ್ರ ಥಿಯೇಟರ್​​​ನಲ್ಲಿ ಹಿಟ್​, ಒಟಿಟಿಯಲ್ಲಿ ಫ್ಲಾಪ್

ಸೂರ್ಯ-ತ್ರಿಷಾ ನಟನೆಯ 'ಕರುಪ್ಪು' ಚಿತ್ರ ಥಿಯೇಟರ್‌ಗಳಲ್ಲಿ 300 ಕೋಟಿ ಗಳಿಸಿ ಭಾರಿ ಯಶಸ್ಸು ಕಂಡಿತ್ತು. ಆದರೆ, ಒಟಿಟಿಯಲ್ಲಿ ಈ ಚಿತ್ರ ಫ್ಲಾಪ್ ಆಗಿದೆ. ಸೂರ್ಯನ ಪಾತ್ರ 30 ನಿಮಿಷ ಮಾತ್ರ ಕಾಣಿಸಿಕೊಂಡಿದ್ದು, ಸಾಯಿ ಅಭಯಂಕರ್ ಅದ್ಭುತ ಸಂಗೀತದ ಥಿಯೇಟರ್ ಅನುಭವ ಒಟಿಟಿಯಲ್ಲಿ ಸಿಗದಿರುವುದು ಇದಕ್ಕೆ ಮುಖ್ಯ ಕಾರಣ. ಅಭಿಮಾನಿಗಳಿಗೆ ಇದು ನಿರಾಶೆ ಮೂಡಿಸಿದೆ.

‘ಕರುಪ್ಪು’ ಚಿತ್ರ ಥಿಯೇಟರ್​​​ನಲ್ಲಿ ಹಿಟ್​, ಒಟಿಟಿಯಲ್ಲಿ ಫ್ಲಾಪ್
ಸೂರ್ಯ

Updated on: Jun 15, 2026 | 11:51 AM

ಸೂರ್ಯ ಹಾಗೂ ತ್ರಿಷಾ ನಟನೆಯ ‘ಕರುಪ್ಪು’ ಸಿನಿಮಾ (Karuppu Movie) ಥಿಯೇಟರ್​​​ನಲ್ಲಿ ರಿಲೀಸ್ ಆಗಿ ಬರೋಬ್ಬರಿ 300 ಕೋಟಿ ರೂಪಾಯಿ ಬಾಚಿಕೊಂಡಿತು. ರಿಲೀಸ್ ಆದ ಒಂದೇ ತಿಂಗಳಿಗೆ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರ ಥಿಯೇಟರ್​​ನಲ್ಲಿ ಹಿಟ್ ಆಗಿತ್ತು ನಿಜ, ಆದರೆ, ಒಟಿಟಿಯಲ್ಲಿ ಈ ಚಿತ್ರ ಫ್ಲಾಪ್ ಆಗಿದೆ. ಈ ಚಿತ್ರವನ್ನು ಒಟಿಟಿಯಲ್ಲಿ ನೋಡಿದ ಅನೇಕರು ಚಿತ್ರದ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಕರುಪ್ಪು ಚಿತ್ರವನ್ನು ಆರ್​​ಜೆ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೇ ವಿಲನ್ ಪಾತ್ರ ಕೂಡ ಮಾಡಿದ್ದಾರೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಹಾಡಿ ಹೊಗಳಿದ್ದರು. ಬಾಯ್ಮಾತಿನ ಪ್ರಚಾರದಿಂದ ಸಿನಿಮಾ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಒಟಿಟಿಗೆ ಬರುತ್ತಿದ್ದಂತೆ ಜನರು ಚಿತ್ರವನ್ನು ತೆಗಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

‘ಕರುಪ್ಪು’ ಸಿನಿಮಾದಲ್ಲಿ ಸೂರ್ಯ ಪಾತ್ರ ಕಾಣಿಸಿಕೊಳ್ಳೋದು ಕೇವಲ 30 ನಿಮಿಷ ಮಾತ್ರ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನು, ಚಿತ್ರಕ್ಕೆ ಸಿಕ್ಕ ಸಾಯಿ ಅಭಯಂಕರ್ ಮ್ಯೂಸಿಕ್ ಅದ್ಭುತವಾಗಿದೆ. ಇಡೀ ಚಿತ್ರವನ್ನು ಮೇಲಕ್ಕೆ ಎತ್ತೋದು ಅವರ ಮ್ಯೂಸಿಕ್. ಇದು ಚಿತ್ರಮಂದಿರಗಳಲ್ಲಿ ಒಳ್ಳೆಯ ಫೀಲ್ ಕೊಟ್ಟಿದೆ ನಿಜ. ಆದರೆ, ಒಟಿಟಿಯಲ್ಲಿ ಥಿಯೇಟರ್​ ಫೀಲ್ ಸಿಗಲು ಸಾಧ್ಯವಿಲ್ಲ. ಹೀಗಾಗಿ, ಜನರಿಗೆ ಸಿನಿಮಾ ಇಷ್ಟ ಆಗಿಲ್ಲ.

ಇದನ್ನೂ ಓದಿ: ‘ಕರುಪ್ಪು’ ಸಿನಿಮಾಕ್ಕೆ ಹೀಗಿತ್ತು ನಟ ಸೂರ್ಯ ತಯಾರಿ: ವಿಡಿಯೋ

ಇನ್ನು, ಸೂರ್ಯ ಹಾಗೂ ತ್ರಿಷಾ ಅವರನ್ನು ಹೆಚ್ಚು ಹೊತ್ತು ತೋರಿಸಿಲ್ಲ ಎಂಬ ಬೇಸರವೂ ಅಭಿಮಾನಿಗಳಿಗೆ ಕಾಡುತ್ತಾ ಇದೆ. ಈ ಎಲ್ಲಾ ಕಾರಣದಿಂದ ‘ಕರುಪ್ಪು’ ಸಿನಿಮಾ ಒಟಿಟಿಯಲ್ಲಿ ಫ್ಲಾಪ್ ಆಗುವ ಲಕ್ಷಣ ಗೋಚರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us