ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್​ ಹೊಸ ಕಂಡೀಷನ್​!

ವೀಕೆಂಡ್​ನಲ್ಲಿ ಸುದೀಪ್​ ಅವರು ಅರವಿಂದ್​ಗೆ, ಬಾತ್​ರೂಂನಲ್ಲಿ ಅತಿ ಹೆಚ್ಚು ಸಮಯ ಕಳೆಯುವವರು ಯಾರು? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅರವಿಂದ್​, ದಿವ್ಯಾ ಅವರ ಹೆಸರನ್ನು ತೆಗೆದುಕೊಂಡಿದ್ದರು.

ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್​ ಹೊಸ ಕಂಡೀಷನ್​!
ದಿವ್ಯಾ ಉರುಡುಗ-ಅರವಿಂದ್ ಕೆಪಿ

Updated on: Mar 28, 2021 | 9:36 PM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಭಾರೀ ಚರ್ಚೆ ಆಗುತ್ತಿದೆ. ವೀಕ್ಷಕರ ವಲಯದಲ್ಲೂ ಈ ವಿಚಾರ ಈಗ ಹಾಟ್​ ಟಾಪಿಕ್​. ಹೀಗಿರುವಾಗಲೇ ಒಂದು ವಾರ ಅರವಿಂದ್ ಜತೆ ಮಾತಾಡಬಾರದು ಎನ್ನುವ ಕಂಡೀಷನ್​ ಅನ್ನು ದಿವ್ಯಾಗೆ ಸುದೀಪ್​ ಹಾಕಿದ್ದಾರೆ!

ಅರವಿಂದ್​ ಮತ್ತು ದಿವ್ಯಾ ಉರುಡುಗ ನಡುವೆ ಪ್ರೀತಿ ಚಿಗುರಿದೆ ಎಂಬುದು ಬಹುತೇಕರ ಅಭಿಪ್ರಾಯ. ಅವರಿಬ್ಬರ ಮಧ್ಯೆ ಇರುವ ಆಪ್ತತೆ ನೋಡಿದರೆ ಎಂಥವರಿಗೂ ಈ ಅನುಮಾನ ಬಂದೇ ಬರುತ್ತದೆ. ಅಷ್ಟೇ ಅಲ್ಲದೇ, ಮನೆ ಮಂದಿ ಎಲ್ಲರೂ ಈ ವಿಚಾರವನ್ನು ಪದೇ ಪದೇ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಆಪ್ತತೆ ಬೆಳೆದಿರುವ ವಿಚಾರವನ್ನು ಇಬ್ಬರೂ ಒಪ್ಪಿಕೊಂಡಿದ್ದರು.

ವೀಕೆಂಡ್​ನಲ್ಲಿ ಸುದೀಪ್​ ಅವರು ಅರವಿಂದ್​ಗೆ, ಬಾತ್​ರೂಂನಲ್ಲಿ ಅತಿ ಹೆಚ್ಚು ಸಮಯ ಕಳೆಯುವವರು ಯಾರು? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅರವಿಂದ್​, ದಿವ್ಯಾ ಉರುಡುಗ ಮತ್ತು ವೈಷ್ಣವಿ ನಡುವೆ ಈ ವಿಚಾರಕ್ಕೆ ಕಾಂಪಿಟೇಷನ್​ ಇದೆ. ಇಬ್ಬರೂ ಬಾತ್​ರೂಂಗೆ ಹೋದರೆ ಬೇಗ ಬರುವುದೇ ಇಲ್ಲ ಎಂದಿದ್ದರು. ಇಬ್ಬರಲ್ಲಿ ಅತಿ ಹೆಚ್ಚು ಸಮಯ ಕಳೆಯುವವರು ಯಾರು ಎಂದು ಕೇಳಿದರು ಸುದೀಪ್​. ಆಗ ದಿವ್ಯಾ ಹೆಸರನ್ನು ಎತ್ತಿಕೊಂಡರು ಅರವಿಂದ್​.

ಇದಕ್ಕೆ ದಿವ್ಯಾ ಹಾಗೆಲ್ಲ ಇಲ್ಲವೇ ಇಲ್ಲ ಎಂದರು. ಅದಕ್ಕೆ ಉತ್ತರಿಸಿದ ಸುದೀಪ್​, ಹೌದು, ಇದೆಲ್ಲ ಬರೀ ಸುಳ್ಳು. ನಾಳೆಯಿಂದ ನೀವು ಅರವಿಂದ ಪಕ್ಕ ಕೂರಬೇಡಿ. ಜಾಗ ಬದಲಿಸಿ. ಇಷ್ಟೆಲ್ಲ ಸುಳ್ಳು ಹೇಳುತ್ತಾರೆ ಎಂದು ಪಕ್ಕ ಕೂರಲೇಬೇಡಿ. ಅವರ ಜತೆ ಮಾತಾಡಬೇಡಿ. ಅರವಿಂದ್​ ಜತೆ ನೀವು ಒಂದು ವಾರಗಳ ಕಾಲ ಒಂದೇ ಒಂದು ಶಬ್ದ ಕೂಡ ಮಾತನಾಡಬಾರದು ಎಂದು ಕಂಡೀಷನ್​ ಹಾಕಿದರು. ಇದನ್ನು ಕೇಳಿ ಈ ಜೋಡಿ ಕಂಗಾಲಾಗಿತ್ತು. ನಂತರ ಸುದೀಪ್​ ಹಾಗೆ ಮಾಡಲ್ಲ ಎಂದು ಹೇಳುವ ಮೂಲಕ ಇಬ್ಬರನ್ನೂ ನಿರಾಳ ಮಾಡಿದರು.

ಇದನ್ನೂ ಓದಿ: ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?

Published On - 9:00 pm, Sun, 28 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us