SS Rajamouli : ರಾಜಮೌಳಿ ಜೊತೆ ಸೇರಿ ಕೆಲಸ ಮಾಡಿ ಗೆದ್ದ ಹೀರೋಗಳು ಇವರೇ ನೋಡಿ..

ರಾಜಮೌಳಿ ಜೊತೆ ಕೆಲಸ ಮಾಡಿದ ಅನೇಕ ಹೀರೋಗಳ ವೃತ್ತಿ ಜೀವನಕ್ಕೆ ಮೈಲೇಜ್​ ಸಿಕ್ಕಿದೆ. ನಿರ್ಮಾಪಕರು ಕೂಡ ದೊಡ್ಡ ಲಾಭ ಕಂಡಿದ್ದಾರೆ. ರಾಜಮೌಳಿ ಜೊತೆ ಕೆಲಸ ಮಾಡಿ ಗೆದ್ದ ಹೀರೋಗಳ ಪಟ್ಟಿ ಇಲ್ಲಿದೆ.  

SS Rajamouli : ರಾಜಮೌಳಿ ಜೊತೆ ಸೇರಿ ಕೆಲಸ ಮಾಡಿ ಗೆದ್ದ ಹೀರೋಗಳು ಇವರೇ ನೋಡಿ..
ರಾಜಮೌಳಿ ಜೊತೆ ಸೇರಿ ಕೆಲಸ ಮಾಡಿ ಗೆದ್ದ ಹೀರೋಗಳು

Updated on: Apr 28, 2023 | 7:44 AM

ಮುಖ್ಯಾಂಶಗಳು

  • ಎಸ್​ಎಸ್​ ರಾಜಮೌಳಿ ಅವರದ್ದು ಚಿತ್ರರಂಗದಲ್ಲಿ ದೊಡ್ಡ ಹೆಸರು
  • ಹಲವು ಹೀರೋಗಳು ರಾಜಮೌಳಿ ಜೊತೆ ಕೆಲಸ ಮಾಡಿ ಗೆದ್ದಿದ್ದಾರೆ
  • ಆ ಸಾಲಿನಲ್ಲಿ ಹಲವು ಸ್ಟಾರ್ ಹೀರೋಗಳು ಇದ್ದಾರೆ

ಭಾರತೀಯ ಚಿತ್ರರಂಗದಲ್ಲಿ ಎಸ್​ಎಸ್​ ರಾಜಮೌಳಿ (SS Rajamouli) ಅವರದ್ದು ದೊಡ್ಡ ಹೆಸರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ‘ಆರ್​ಆರ್​ಆರ್​’ ಚಿತ್ರದ (RRR Movie) ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದ ಬಳಿಕ ರಾಜಮೌಳಿ ಅವರಿಗೆ ಬೇಡಿಕೆ ಹೆಚ್ಚಿದೆ. ಅವರ ಜೊತೆ ಕೆಲಸ ಮಾಡಿದ ಅನೇಕ ಹೀರೋಗಳ ವೃತ್ತಿ ಜೀವನಕ್ಕೆ ಮೈಲೇಜ್​ ಸಿಕ್ಕಿದೆ. ನಿರ್ಮಾಪಕರು ಕೂಡ ದೊಡ್ಡ ಲಾಭ ಕಂಡಿದ್ದಾರೆ. ರಾಜಮೌಳಿ ಜೊತೆ ಕೆಲಸ ಮಾಡಿ ಗೆದ್ದ ಹೀರೋಗಳ ಪಟ್ಟಿ ಇಲ್ಲಿದೆ.

ರಾಮ್ ಚರಣ್: ರಾಜಮೌಳಿ ನಿರ್ದೇಶನದ ‘ಮಗಧೀರ’ ಹಾಗೂ ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆಗಿವೆ. ಈ ಎರಡೂ ಚಿತ್ರಗಳಲ್ಲಿ ರಾಮ್ ಚರಣ್ ನಟಿಸಿದ್ದಾರೆ. ಈ ಎರಡೂ ಚಿತ್ರಗಳಿಂದ ರಾಮ್ ಚರಣ್ ವೃತ್ತಿಜೀವನಕ್ಕೆ ಮೈಲೇಜ್ ಸಿಕ್ಕಿದೆ.

ಸುದೀಪ್​: ‘ಈಗ’ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಇತ್ತು. ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿ ಸುದೀಪ್ ಗಮನ ಸೆಳೆದರು. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿತು. ಅವರು ವಿಲನ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದರು. ಈ ಚಿತ್ರದಲ್ಲಿ ನಟಿಸಿದ ನಾನಿ ಕೂಡ ಗೆದ್ದರು.

ಪ್ರಭಾಸ್: ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳು ಭಾರತೀಯ ಸಿನಿಮಾ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಎರಡೂ ಚಿತ್ರಗಳು ಒಳ್ಳೆಯ ಬಿಸ್ನೆಸ್ ಮಾಡಿದ್ದವು. ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರದಿಂದ ಪ್ರಭಾಸ್ ವೃತ್ತಿಜೀವನಕ್ಕೆ ಮೈಲೇಜ್ ಸಿಕ್ಕಿದೆ.

ಜೂ.ಎನ್​ಟಿಆರ್: ‘ಸ್ಟೂಡೆಂಟ್ ನಂಬರ್ 1’, ‘ಸಿಂಹಾದ್ರಿ’, ‘ಯಮದೊಂಗ’, ‘ಆರ್​ಆರ್​ಆರ್​’ ಸಿನಿಮಾಗಳಲ್ಲಿ ಜೂ.ಎನ್​ಟಿಆರ್​ ಹಾಗೂ ರಾಜಮೌಳಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರಗಳಿಂದ ಜೂ.ಎನ್​​ಟಿಆರ್ ಖ್ಯಾತಿ ಹೆಚ್ಚಿದೆ. ‘ಆರ್​ಆರ್​ಆರ್​’ ಚಿತ್ರದಲ್ಲಿ ಜೂ.ಎನ್​ಟಿಆರ್ ಮಾಡಿದ ಪಾತ್ರ ಜನರಿಗೆ ಹೆಚ್ಚು ಇಷ್ಟ ಆಗಿದೆ.

ರವಿ ತೇಜ: ಟಾಲಿವುಡ್​ನಲ್ಲಿ ರವಿ ತೇಜ ಅವರು ಖ್ಯಾತಿ ಪಡೆದರು. ‘ವಿಕ್ರಮಾರ್ಕುಡು’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. 2006ರಲ್ಲಿ ಈ ಚಿತ್ರ ತೆರೆಗೆ ಬಂತು.

ಇದನ್ನೂ ಓದಿ:  ಅಮೇಜಾನ್ ಕಾಡುಗಳಲ್ಲಿ ಶೂಟ್ ಆಗಲಿದೆ ರಾಜಮೌಳಿ ಮುಂದಿನ ಸಿನಿಮಾ; ಈ ಕಥೆಗೆ ಸ್ಫೂರ್ತಿ ಏನು?

ರಾಣಾ ದಗ್ಗುಬಾಟಿ: ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ ರಾಣಾ ದಗ್ಗುಬಾಟಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಕರಿಯರ್​ಗೆ ಭದ್ರಬುನಾದಿ ಹಾಕಿದ ಖ್ಯಾತಿ ರಾಜಮೌಳಿಗೆ ಸಿಗುತ್ತದೆ.

ಇತರರು..

ರಾಜಮೌಳಿ ಚಿತ್ರದಲ್ಲಿ ಕಾಣಿಸಿಕೊಂಡ ಅನೇಕ ನಟಿಯರು ಗಮನ ಸೆಳೆದಿದ್ದಾರೆ. ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ಸಮಂತಾ ಮೊದಲಾದ ಹೀರೋಯಿನ್​ಗಳು ಮಾಡಿದ ಪಾತ್ರಗಳಿಗೂ ಜನರ ಮನಸ್ಸಲ್ಲಿ ವಿಶೇಷ ಸ್ಥಾನ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us