AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SS Rajamouli: ಅಮೇಜಾನ್ ಕಾಡುಗಳಲ್ಲಿ ಶೂಟ್ ಆಗಲಿದೆ ರಾಜಮೌಳಿ ಮುಂದಿನ ಸಿನಿಮಾ; ಈ ಕಥೆಗೆ ಸ್ಫೂರ್ತಿ ಏನು?

ಮಹೇಶ್ ಬಾಬು ನಟನೆಯ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದವು. ಇದೇ ಮೊದಲ ಬಾರಿಗೆ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರಲಿದ್ದಾರೆ.

SS Rajamouli: ಅಮೇಜಾನ್ ಕಾಡುಗಳಲ್ಲಿ ಶೂಟ್ ಆಗಲಿದೆ ರಾಜಮೌಳಿ ಮುಂದಿನ ಸಿನಿಮಾ; ಈ ಕಥೆಗೆ ಸ್ಫೂರ್ತಿ ಏನು?
ಮಹೇಶ್ ಬಾಬು-ರಾಜಮೌಳಿ
ರಾಜೇಶ್ ದುಗ್ಗುಮನೆ
|

Updated on: Apr 13, 2023 | 7:21 AM

Share

ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಸರಿಯಾದ ರೀತಿಯಲ್ಲಿ ಸ್ಕ್ರಿಪ್ಟ್ ಕೆಲಸ ಪೂರ್ಣಗೊಳಿಸಿದ ಬಳಿಕವೇ ಅವರು ಶೂಟಿಂಗ್​ಗೆ ಇಳಿಯುತ್ತಾರೆ. ಸಿನಿಮಾ ಸಂಖ್ಯೆಗಿಂತ ಗುಣಮಟ್ಟ ಮುಖ್ಯ ಎಂದು ನಂಬಿಕೊಂಡು ಬಂದ ನಿರ್ದೇಶಕ ರಾಜಮೌಳಿ. ‘ಆರ್​ಆರ್​ಆರ್​’ ರಿಲೀಸ್ ಆಗಿ ಒಂದು ವರ್ಷದವರೆಗೂ ರಾಜಮೌಳಿ ಬ್ಯುಸಿ ಇದ್ದರು. ಬಾಕ್ಸ್ ಆಫೀಸ್ ಕಲೆಕ್ಷನ್, ಆಸ್ಕರ್ ಪ್ರಶಸ್ತಿ ಹೀಗೆ ‘ಆರ್​ಆರ್​ಆರ್​’ ಗೆಲುವನ್ನು ಅವರು ವಿವಿಧ ರೀತಿಯಲ್ಲಿ ಸಂಭ್ರಮಿಸಿದರು. ಈಗ ಅವರು ಮುಂದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕನಿಷ್ಠ ಆರು ತಿಂಗಳ ಕಾಲ ಸಿನಿಮಾದ ಸ್ಕ್ರಿಪ್ಟ್ ಕೆಲಸ ನಡೆಯಲಿದೆ. ವಿಶೇಷ ಎಂದರೆ ಈ ಸಿನಿಮಾ ಆಫ್ರಿಕಾದ ಅಮೇಜಾನ್ ಕಾಡಿನಲ್ಲಿ ಶೂಟಿಂಗ್ ಆಗಲಿದೆ.

ಮಹೇಶ್ ಬಾಬು ನಟನೆಯ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದವು. ಅವರು ಎಂದಿಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರಲಿದ್ದಾರೆ. ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ಸಿದ್ಧಗೊಳ್ಳಲಿದೆ.

ಕಥೆಗೆ ಸ್ಫೂರ್ತಿ ರಾಮಾಯಣ

ಭಾರತದ ಸಂಸ್ಕೃತಿ ಬಗ್ಗೆ ರಾಜಮೌಳಿಗೆ ಎಲ್ಲಿಲ್ಲದ ಪ್ರೀತಿ. ತಮ್ಮ ಸಿನಿಮಾಗಳಲ್ಲಿ ಈ ಬಗ್ಗೆ ಅವರು ಉಲ್ಲೇಖ ಮಾಡುತ್ತಲೇ ಇರುತ್ತಾರೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ಬರುವ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್​ ಪಾತ್ರಗಳಿಗೆ ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ರಾಮ ಹಾಗೂ ಭೀಮ ಪಾತ್ರಗಳ ಸ್ಫೂರ್ತಿ ಇದೆ ಎನ್ನಲಾಗಿದೆ. ಈಗ ಹೊಸ ಚಿತ್ರಕ್ಕೆ ರಾಮಾಯಣವನ್ನು ಸ್ಫೂರ್ತಿಯಾಗಿ ಪಡೆಯುತ್ತಿದ್ದಾರೆ ರಾಜಮೌಳಿ. ಮಹೇಶ್ ಬಾಬು ಪಾತ್ರಕ್ಕೂ ಹನುಮಂತನ ಗುಣಲಕ್ಷಣಕ್ಕೂ ಸಾಕಷ್ಟು ಸಾಮ್ಯತೆ ಇರಲಿದೆಯಂತೆ.

ಇದನ್ನೂ ಓದಿ: Rajamouli: ಆಸ್ಕರ್ ಹಾಲ್​ನ ಕೊನೆ ಸಾಲಲ್ಲಿ ಕೂರಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ

ಆಫ್ರಿಕಾದಲ್ಲಿ ಶೂಟಿಂಗ್

ಆಫ್ರಿಕಾದಲ್ಲಿರುವ ಅಮೇಜಾನ್ ಕಾಡಿನ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಇದು ವಿಶ್ವದ ಅತಿ ಭಯಾನಕ ಹಾಗೂ ಅತಿ ದೊಡ್ಡ ಕಾಡು. ಇದರಲ್ಲಿ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾ ಶೂಟ್ ಆಗಲಿದೆ. ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ.

ಶೂಟಿಂಗ್ ಯಾವಾಗ?

ಮಹೇಶ್ ಬಾಬು ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಹೊಸ ಸಿನಿಮಾ ಕೆಲಸಗಳು ನಡೆಯುತ್ತಿವೆ. ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆ ಮಹೇಶ್ ಬಾಬು ಅವರು ರಾಜಮೌಳಿ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. 2025ರ ವೇಳೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಇದಕ್ಕೆ ಯಾವ ಶೀರ್ಷಿಕೆ ಇಡಲಾಗುತ್ತದೆ, ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನುವುದು ಇನ್ನೂ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ