ಆಸ್ಕರ್ ಕ್ಯಾಂಪೇನ್​ಗೆ ಅಸಲಿಗೆ ಖರ್ಚಾದ ಹಣವೆಷ್ಟು? ಕೊನೆಗೂ ಮೌನ ಮುರಿದ ರಾಜಮೌಳಿ ಮಗ

ಆಸ್ಕರ್ ಗೆಲ್ಲಲು ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎನ್ನಲಾಗಿತ್ತು. ಈಗ ಕಾರ್ತಿಕೇಯ ಅವರು ಅಸಲಿ ಲೆಕ್ಕ ನೀಡಿದ್ದಾರೆ.

ಆಸ್ಕರ್ ಕ್ಯಾಂಪೇನ್​ಗೆ ಅಸಲಿಗೆ ಖರ್ಚಾದ ಹಣವೆಷ್ಟು? ಕೊನೆಗೂ ಮೌನ ಮುರಿದ ರಾಜಮೌಳಿ ಮಗ
ಕಾರ್ತಿಕೇಯ-ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Mar 27, 2023 | 2:24 PM

‘ಆರ್​ಆರ್​ಆರ್​’ (RRR Movie) ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದು ಹೊಸ ದಾಖಲೆ ಬರೆದಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಹಲವು. ಹಾಡು ಆಸ್ಕರ್ ಗೆದ್ದ ವಿಚಾರದಲ್ಲಿ ಕೆಲ ಚರ್ಚೆಗಳು ಹುಟ್ಟಿಕೊಂಡಿವೆ. ಆಸ್ಕರ್ ಕ್ಯಾಂಪೇನ್​ಗೆ ರಾಜಮೌಳಿ 80 ಕೋಟಿ ರೂಪಾಯಿ ವ್ಯಯಿಸಿದ್ದಾರೆ ಎಂದೆಲ್ಲ ವರದಿ ಆಗಿತ್ತು. ಇದರ ಜೊತೆಗೆ ‘ಆರ್​ಆರ್​ಆರ್​’ ಚಿತ್ರದ ನಿರ್ಮಾಪಕ ದಾನಯ್ಯ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ತಂಡದ ಜೊತೆ ಅವರು ವೈಮನಸ್ಸು ಹೊಂದಿದ್ದಾರೆ ಎಂದೆಲ್ಲ ಸುದ್ದಿ ಬಿತ್ತರ ಆಗಿತ್ತು. ಈಗ ಆಸ್ಕರ್ ಕ್ಯಾಂಪೇನ್ ಬಗ್ಗೆ ರಾಜಮೌಳಿ ಮಗ ಎಸ್ಎಸ್​ ಕಾರ್ತಿಕೇಯ (SS Karthikeya) ಅವರು ಮಾತನಾಡಿದ್ದಾರೆ. ಅವರು ಅಸಲಿ ಲೆಕ್ಕ ನೀಡಿದ್ದಾರೆ.

ಆಸ್ಕರ್​, ಗೋಲ್ಡನ್ ಗ್ಲೋಬ್ಸ್ ಮೊದಲಾದ ಪ್ರಶಸ್ತಿಗಳು ಹಾಲಿವುಡ್​ ಅವಾರ್ಡ್​ಗಳು. ಇಲ್ಲಿ ಭಾರತದ ಸಿನಿಮಾಗಳು ರೇಸ್​ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ, ‘ಆರ್​ಆರ್​ಆರ್​’ ಸಿನಿಮಾ ಸಾಲು ಸಾಲು ಪ್ರಶಸ್ತಿಗಳನ್ನು ಗೆಲ್ಲುತ್ತಿದೆ. ‘ಹಾಲಿವುಡ್​ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್​’, ‘ಗೋಲ್ಡನ್​ ಗ್ಲೋಬ್ ಅವಾರ್ಡ್’, ಆಸ್ಕರ್​ ಅವಾರ್ಡ್​​​​ಗಳನ್ನು ಚಿತ್ರ ಪಡೆದಿದೆ. ಇದಕ್ಕಾಗಿ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎನ್ನಲಾಗಿತ್ತು. ಈಗ ಕಾರ್ತಿಕೇಯ ಅವರು ಅಸಲಿ ಲೆಕ್ಕ ನೀಡಿದ್ದಾರೆ.

ಇದನ್ನೂ ಓದಿ: MM Keeravani: ‘ನನಗೆ ಆಸ್ಕರ್​ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ

ಆಸ್ಕರ್ ಕ್ಯಾಂಪೇನ್​ಗೆ ಖರ್ಚಾದ ಮೊತ್ತ ಕೇವಲ 8 ಕೋಟಿ ರೂಪಾಯಿ ಅಂತೆ. ‘ಆರಂಭದಲ್ಲಿ ನಾವು 5 ಕೋಟಿ ರೂಪಾಯಿಯಲ್ಲಿ ಸಿನಿಮಾಗೆ ಕ್ಯಾಂಪೇನ್ ಮಾಡಬಹುದು ಎಂದುಕೊಂಡಿದ್ದೆವು. ಆದರೆ, ನಾವು ಅಂದುಕೊಂಡಿದ್ದಕ್ಕಿಂತ 3.5 ಕೋಟಿ ರೂಪಾಯಿ ಹೆಚ್ಚಾಗಿ ಖರ್ಚಾಯಿತು. ಹಲವು ಕಡೆಗಳಲ್ಲಿ ಸಿನಿಮಾ ಸ್ಕ್ರೀನಿಂಗ್ ಮಾಡಬೇಕಿತ್ತು. ಒಟ್ಟಾರೆ ಖರ್ಚಾದ ಹಣ 8.5 ಕೋಟಿ ರೂಪಾಯಿ. ಇದಕ್ಕೆ ಯಾರ ಸಹಾಯವನ್ನೂ ನಾವು ಪಡೆದಿಲ್ಲ. ನಮ್ಮ ಜೇಬಿನಿಂದ ಖರ್ಚು ಮಾಡಿದ್ದೇವೆ’ ಎಂದು ಕಾರ್ತಿಕೇಯ ಹೇಳಿದ್ದಾರೆ.

ಇದನ್ನೂ ಓದಿ: Oscar: ಆಸ್ಕರ್ ಹಿಂದಿನ ಕರಾಳ ಸತ್ಯ, ಕೋಟಿಗಟ್ಟಲೆ ಸುರಿಯದೆ ಪ್ರಶಸ್ತಿ ಸಿಗದು

‘ಜನರ ಪ್ರೀತಿಯನ್ನು ಖರೀದಿಸಲು ಸಾಧ್ಯವಿಲ್ಲ. ಜೇಮ್ಸ್ ಕ್ಯಾಮೆರೂನ್ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ ಅಂತಹ ಖ್ಯಾತ ನಾಮರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬೆಲೆಕಟ್ಟಲಾಗದು. ಈ ರೀತಿ ಮಾತನಾಡಲು ದುಡ್ಡು ಕೊಡೋಕೆ ಆಗಲ್ಲ. ನಾವು ಆ ಗೌರವವನ್ನು ಗಳಿಸಿದ್ದಕ್ಕಾಗಿ ನನಗೆ ಸಂತೋಷವಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ