AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR Movie: ‘ಆರ್​ಆರ್​ಆರ್​’ ರಿಲೀಸ್ ಆಗಿ ಇಂದಿಗೆ ಒಂದು ವರ್ಷ; ರಾಜಮೌಳಿ ಸಿನಿಮಾ ಮಾಡಿದ ಸಾಧನೆಯ ವಿವರ ಇಲ್ಲಿದೆ

‘ಆರ್​ಆರ್​ಆರ್​’ ಸಿನಿಮಾ ಬಾಲಿವುಡ್​ನಲ್ಲೂ ಸದ್ದು ಮಾಡಿತ್ತು. ಅಲ್ಲಿಯೂ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿ ರಾಜಮೌಳಿ ಚಿತ್ರ ಭೇಷ್ ಎನಿಸಿಕೊಂಡಿತು. ‘ಆರ್​ಆರ್​ಆರ್​’ ಚಿತ್ರದಿಂದ ಅವರ ಜನಪ್ರಿಯತೆ ದುಪ್ಪಟ್ಟಾಯಿತು.

RRR Movie: ‘ಆರ್​ಆರ್​ಆರ್​’ ರಿಲೀಸ್ ಆಗಿ ಇಂದಿಗೆ ಒಂದು ವರ್ಷ; ರಾಜಮೌಳಿ ಸಿನಿಮಾ ಮಾಡಿದ ಸಾಧನೆಯ ವಿವರ ಇಲ್ಲಿದೆ
ಆರ್​ಆರ್​ಆರ್​
ರಾಜೇಶ್ ದುಗ್ಗುಮನೆ
|

Updated on:Mar 24, 2023 | 11:16 AM

Share

ಮುಖ್ಯಾಂಶಗಳು

  • ‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ಆಗಿ ಕಳೆಯಿತು ಒಂದು ವರ್ಷ
  • ಒಂದು ವರ್ಷದಲ್ಲಿ ಹಲವು ಸಾಧನೆ ಮಾಡಿದ ರಾಜಮೌಳಿ ಸಿನಿಮಾ
  • ಆಸ್ಕರ್ ಗೆದ್ದು ಬೀಗಿದ ‘ಆರ್​ಆರ್​ಆರ್’ ಸಿನಿಮಾ

‘ಆರ್​ಆರ್​ಆರ್​’ ಸಿನಿಮಾ (RRR Movie) ರಿಲೀಸ್ ಆಗಿ ಇಂದಿಗೆ (ಮಾರ್ಚ್​ 24) ಒಂದು ವರ್ಷ. ಎಸ್​ಎಸ್​​ ರಾಜಮೌಳಿ ನಿರ್ದೇಶನದ, ಜೂ.ಎನ್​ಟಿಆರ್​, ರಾಮ್ ಚರಣ್ (Ram Charan), ಅಜಯ್ ದೇವಗನ್, ಆಲಿಯಾ ಭಟ್ ಮೊದಲಾದವರು ನಟಿಸಿದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆದ ಒಂದು ತಿಂಗಳಿಗೆ ಸದ್ದು ಕಡಿಮೆ ಆಗಿ ಬಿಡುತ್ತದೆ. ಆದರೆ, ‘ಆರ್​ಆರ್​ಆರ್’ ಸಿನಿಮಾ ಒಂದು ವರ್ಷ ಕಳೆದರೂ ಪ್ರಚಲಿತದಲ್ಲಿದೆ. ಈ ಚಿತ್ರ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಆ ಬಗ್ಗೆ ಇಲ್ಲಿದೆ ವಿವರ.

ಭರ್ಜರಿ ಕಲೆಕ್ಷನ್

‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಮಾರ್ಚ್​ 23ರ (2022) ರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣೋಕೆ ಆರಂಭವಾಯಿತು. ಇದರಿಂದ ಚಿತ್ರಕ್ಕೆ ಮೊದಲ ದಿನ ಭರ್ಜರಿ ಕಲೆಕ್ಷನ್ ಆಯಿತು. ಮೇಕಿಂಗ್, ಗ್ರಾಫಿಕ್ಸ್, ಸಾಹಸ ದೃಶ್ಯಗಳು ಚಿತ್ರದಲ್ಲಿ ಹೈಲೈಟ್ ಆಯಿತು. ಇದರಿಂದ ಸಿನಿಮಾ ಸೂಪರ್ ಹಿಟ್ ಆಯಿತು. ಕಳೆದ ವರ್ಷ ಜಪಾನ್​ನಲ್ಲಿ ರಿಲೀಸ್ ಆಗಿ ಸಿನಿಮಾ ಗೆದ್ದಿದೆ. ಚಿತ್ರದ ಒಟ್ಟಾರೆ ಗಳಿಕೆ 1200 ಕೋಟಿ ರೂಪಾಯಿ ಸಮೀಪಿಸಿದೆ.

ಬಾಲಿವುಡ್​ನಲ್ಲೂ ಸದ್ದು ಮಾಡಿದ ಸಿನಿಮಾ

‘ಆರ್​ಆರ್​ಆರ್​’ ಸಿನಿಮಾ ಬಾಲಿವುಡ್​ನಲ್ಲೂ ಸದ್ದು ಮಾಡಿತ್ತು. ಅಲ್ಲಿಯೂ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿ ರಾಜಮೌಳಿ ಚಿತ್ರ ಭೇಷ್ ಎನಿಸಿಕೊಂಡಿತು. ‘ಬಾಹುಬಲಿ’ ಸರಣಿ ನೋಡಿ ರಾಜಮೌಳಿ ಅವರನ್ನು ಹಿಂದಿಯವರು ಮೆಚ್ಚಿಕೊಂಡಿದ್ದರು. ‘ಆರ್​ಆರ್​ಆರ್​’ ಚಿತ್ರದಿಂದ ಅವರ ಜನಪ್ರಿಯತೆ ದುಪ್ಪಟ್ಟಾಯಿತು.

ರಾಜಮೌಳಿಗೆ ಹಾಲಿವುಡ್ ಮಂದಿ ಮೆಚ್ಚುಗೆ

‘ಆರ್​ಆರ್​ಆರ್​’ ಚಿತ್ರವನ್ನು ಹಾಲಿವುಡ್ ಮಂದಿಯೂ ಮೆಚ್ಚಿಕೊಂಡಿದ್ದಾರೆ. ‘ಟೈಟಾನಿಕ್​’, ‘ಅವತಾರ್​’ ರೀತಿಯ ಸಿನಿಮಾ ನಿರ್ದೇಶನ ಮಾಡಿದ್ದ ಜೇಮ್ಸ್ ಕ್ಯಾಮೆರಾನ್ ಸೇರಿದಂತೆ ಅನೇಕರು ಚಿತ್ರವನ್ನು ನೋಡಿ ಹೊಗಳಿದರು.

‘ಆಸ್ಕರ್’ ಸಾಧನೆ

ಭಾರತದಲ್ಲೇ ಸಿದ್ಧವಾದ ಹಾಡಿಗೆ ಈವರೆಗೆ ಆಸ್ಕರ್ ಸಿಕ್ಕಿರಲಿಲ್ಲ. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡಿಗೆ ಈ ಅವಾರ್ಡ್ ಸಿಕ್ಕಿತು. ಈ ತಿಂಗಳಲ್ಲಿ ನಡೆದ ಅಕಾಡೆಮಿ ಅವಾರ್ಡ್​ನಲ್ಲಿ ಈ ಚಿತ್ರದ ಹಾಡಿಗೆ ಪ್ರಶಸ್ತಿ ಸಿಕ್ಕಿತು. ಈ ಮೂಲಕ ರಾಜಮೌಳಿ ಇತಿಹಾಸ ನಿರ್ಮಿಸಿದರು. ಇದಲ್ಲದೆ, ಗೋಲ್ಡನ್ ಗ್ಲೋಬ್ ಮೊದಲಾದ ಪ್ರಶಸ್ತಿಗಳು ಚಿತ್ರಕ್ಕೆ ಸಿಕ್ಕಿತ್ತು.

ವರ್ಷ ಪೂರ್ತಿ ಪ್ರಚಲಿತದಲ್ಲಿದ್ದ ಸಿನಿಮಾ

‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದರೂ ಪ್ರಚಲಿತದಲ್ಲೇ ಇದೆ. ಜನರು ಈ ಚಿತ್ರವನ್ನು ಆಗಾಗ ನೆನಪಿಸಿಕೊಳ್ಳುವ ಘಟನೆ ನಡೆಯುತ್ತಲೇ ಇತ್ತು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:15 am, Fri, 24 March 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More