Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮತ್ತೆ ಮದುವೆ’ ಆದ ಬಳಿಕ ಮನೆ ಎದುರು ರಂಗೋಲಿ ಹಾಕುತ್ತಾ ಕುಳಿತ ಪವಿತ್ರಾ ಲೋಕೇಶ್

ಇತ್ತೀಚೆಗೆ ನರೇಶ್ ಅವರು ಟ್ವಿಟರ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಪವಿತ್ರಾ ಲೋಕೇಶ್​ಗೆ ನರೇಶ್ ತಾಳಿಕಟ್ಟುತ್ತಿರುವುದು ವಿಡಿಯೋದಲ್ಲಿ ಇತ್ತು.

‘ಮತ್ತೆ ಮದುವೆ’ ಆದ ಬಳಿಕ ಮನೆ ಎದುರು ರಂಗೋಲಿ ಹಾಕುತ್ತಾ ಕುಳಿತ ಪವಿತ್ರಾ ಲೋಕೇಶ್
ಪವಿತ್ರಾ ಲೋಕೇಶ್-ನರೇಶ್
Follow us
ರಾಜೇಶ್ ದುಗ್ಗುಮನೆ
|

Updated on: Mar 24, 2023 | 11:57 AM

ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನಟ ನರೇಶ್ ಬಾಬು ಮದುವೆ ಆಗಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಹೊಸ ಬದುಕು ಆರಂಭಿಸುತ್ತಿರುವುದಾಗಿ ಈ ಜೋಡಿ ಹೇಳಿಕೊಂಡಿತ್ತು. ಮದುವೆ ವಿಡಿಯೋ ಸಾಕಷ್ಟು ಸಿನಿಮೀಯ ರೀತಿಯಲ್ಲಿ ಇದ್ದಿದ್ದರಿಂದ ಅಭಿಮಾನಿಗಳಿಗೆ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಪವಿತ್ರಾ ಲೋಕೇಶ್ ಅವರು ಮನೆ ಎದುರು ರಂಗೋಲಿ ಹಾಕುತ್ತಿದ್ದಾರೆ. ನರೇಶ್ ಬಾಬು ಅಲ್ಲಿಯೇ ನಿಂತು ಇದನ್ನು ನೋಡುತ್ತಿದ್ದಾರೆ. ಅಂದಹಾಗೆ, ಈಗ ವೈರಲ್ ಆಗಿರೋ ವಿಡಿಯೋ ‘ಮತ್ತೆ ಮದುವೆ’ ಸಿನಿಮಾದ ಕ್ಲಿಪ್. ಇದನ್ನು ನೋಡಿದ ನಂತರದಲ್ಲಿ ನರೇಶ್ ಹಂಚಿಕೊಂಡಿದ್ದ ವಿಡಿಯೋ ಬಗ್ಗೆ ಇದ್ದ ಅನುಮಾನ ಮತ್ತಷ್ಟು ಬಲವಾಗಿದೆ.

ಇತ್ತೀಚೆಗೆ ನರೇಶ್ ಅವರು ಟ್ವಿಟರ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಪವಿತ್ರಾ ಲೋಕೇಶ್​ಗೆ ನರೇಶ್ ತಾಳಿಕಟ್ಟುತ್ತಿರುವುದು ವಿಡಿಯೋದಲ್ಲಿ ಇತ್ತು. ‘ಹೊಸ ಬಾಳು ಆರಂಭಿಸುತ್ತಿದ್ದೇವೆ, ನಿಮ್ಮ ಆಶೀರ್ವಾದ ಇರಲಿ’ ಎಂದು ನರೇಶ್ ಕ್ಯಾಪ್ಶನ್ ನೀಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ಪವಿತ್ರಾ ಲೋಕೇಶ್ ಅವರು ರಂಗೋಲಿ ಹಾಕುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಂದಹಾಗೆ ಇದು ‘ಮತ್ತೆ ಮದುವೆ’ ಸಿನಿಮಾದ ಕ್ಲಿಪ್. ಈ ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ನಟಿಸುತ್ತಿದ್ದಾರೆ. ಈ ಮೊದಲು ಹಂಚಿಕೊಂಡಿದ್ದ ಮದುವೆ ವಿಡಿಯೋ ಕೂಡ ಪ್ರಚಾರದ ಗಿಮಿಕ್ ಎಂದು ಅನೇಕರು ಊಹಿಸುತ್ತಿದ್ದಾರೆ.

ಇದನ್ನೂ ಓದಿ: Naresh-Pavithra: ಮದುವೆ ಮುಗಿದ ಕೂಡಲೇ ದುಬೈಗೆ ಹಾರಿದ ನರೇಶ್-ಪವಿತ್ರಾ ಲೋಕೇಶ್ ಜೋಡಿ

ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ, ನರೇಶ್ ನಿರ್ಮಾಣ ಮಾಡಿರುವ ‘ಮತ್ತೆ ಮದುವೆ’ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಮೊದಲಾದವರು ತಾರಾ ಬಳಗದಲ್ಲಿ ಇದ್ದಾರೆ.

ಇದನ್ನೂ ಓದಿ: ನಾಲ್ಕನೇ ಮದುವೆ ಆದ ನರೇಶ್; ನಟಿ ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ಹೀರೋ

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ