Naresh-Pavithra: ಮದುವೆ ಮುಗಿದ ಕೂಡಲೇ ದುಬೈಗೆ ಹಾರಿದ ನರೇಶ್-ಪವಿತ್ರಾ ಲೋಕೇಶ್ ಜೋಡಿ

ವಿವಾದಗಳ ನಡುವೆ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಮಾರ್ಚ್ 10 ರಂದು ವಿವಾಹವಾಗಿದ್ದು ಅದರ ಮರುದಿನವೇ ಹನಿಮೂನ್​ಗೆಂದು ದುಬೈಗೆ ಹಾರಿದ್ದಾರೆ.

Naresh-Pavithra: ಮದುವೆ ಮುಗಿದ ಕೂಡಲೇ ದುಬೈಗೆ ಹಾರಿದ ನರೇಶ್-ಪವಿತ್ರಾ ಲೋಕೇಶ್ ಜೋಡಿ
ನರೇಶ್-ಪವಿತ್ರಾ ಲೋಕೇಶ್
Follow us
ಮಂಜುನಾಥ ಸಿ.
|

Updated on: Mar 11, 2023 | 5:56 PM

ತೆಲುಗು ಚಿತ್ರರಂಗದ ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಸಂಬಂಧ ಕಳೆದ ಕೆಲ ತಿಂಗಳಿನಿಂದಲೂ ಚರ್ಚೆಯಲ್ಲಿತ್ತು. ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿಯ ವಿರೋಧ, ಪ್ರತಿಭಟನೆಗಳಿಂದಾಗಿ ಇವರಿಬ್ಬರ ಸಂಬಂಧದ ಸುದ್ದಿ ವಿವಾದಕ್ಕೆ ಸಿಲುಕಿತ್ತು. ಕೊನೆಗೂ ನರೇಶ್ ಹಾಗೂ ಪವಿತ್ರಾ ಮಾರ್ಚ್ 10 ರಂದು ವಿವಾಹವಾಗಿದ್ದು ಅದರ ಮರುದಿನವೇ ಹನಿಮೂನ್​ಗೆಂದು ದುಬೈಗೆ (Dubai) ಹಾರಿದ್ದಾರೆ.

ನರೇಶ್ ಹಾಗೂ ಪವಿತ್ರಾ ಪ್ರಸ್ತುತ ದುಬೈನಲ್ಲಿದ್ದು ತಮ್ಮ ಹನಿಮೂನ್ (Honeymoon) ಎಂಜಾಯ್ ಮಾಡುತ್ತಿದ್ದಾರೆ. ನರೇಶ್ ಹಾಗೂ ಪವಿತ್ರಾ ಕೈ-ಕೈ ಹಿಡಿದುಕೊಂಡು ದುಬೈನ ಬೀದಿಗಳಲ್ಲಿ, ಮರುಭೂಮಿಯಲ್ಲಿ ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮಾರ್ಚ್ 10 ರಂದು ತಮ್ಮ ವಿವಾಹದ ವಿಡಿಯೋ ತುಣುಕು ಹಂಚಿಕೊಂಡಿದ್ದ ನರೇಶ್, ‘ಹೊಸ ಪಯಣ. ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ನಿಮ್ಮ ಆಶೀರ್ವಾದ ಇರಲಿ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು, ನಿಮ್ಮ ಆಶೀರ್ವಾದವನ್ನು ಕೋರಿ. ನಿಮ್ಮ ಪವಿತ್ರಾ ನರೇಶ್​’ ಎಂದು ಟ್ವೀಟ್ ಮಾಡಿದ್ದರು.

62 ವರ್ಷದ ನಟ ನರೇಶ್​ಗೆ ಇದು ನಾಲ್ಕನೇ ಮದುವೆಯಾದರೆ ಪವಿತ್ರಾ ಲೋಕೇಶ್​ಗೆ ಇದು ಮೂರನೇಯ ಮದುವೆ. ನರೇಶ್, ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಚೇದನ ನೀಡುವ ಮೊದಲೇ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನರೇಶ್-ಪವಿತ್ರಾರ ಮದುವೆ ಬಗ್ಗೆ ರಮ್ಯಾ ರಘುಪತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಹತ್ತಿರವಾಗುತ್ತಲೇ ನರೇಶ್​ರ ಮೂರನೇ ಪತ್ನಿ ರಮ್ಯಾ ರಘಪತಿ ಮಾಧ್ಯಮಗಳ ಮುಂದೆ ಬಂದು ತಮಗೆ ನರೇಶ್ ಅನ್ಯಾಯ ಮಾಡಿದ್ದಾರೆಂದು ಅವಲತ್ತುಕೊಂಡಿದ್ದರು. ಬಳಿಕ ನರೇಶ್ ಸಹ ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ರಮ್ಯಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಬಳಿಕ ನರೇಶ್ ಹಾಗೂ ಪವಿತ್ರ ಉಳಿದುಕೊಂಡಿದ್ದ ಮೈಸೂರಿನ ಹೋಟೆಲ್​ಗೆ ತೆರಳಿ ರಮ್ಯಾ ರಘುಪತಿ ನೇರವಾಗಿ ನರೇಶ್ ಅನ್ನು ಅಡ್ಡಹಾಕಿ ಬೈಗುಳಗಳ ಸುರಿಮಳೆ ಮಾಡಿದ್ದರಲ್ಲದೆ ಚಪ್ಪಲಿ ಪ್ರದರ್ಶಿಸಿ ಹೈಡ್ರಾಮಾ ಸೃಷ್ಟಿಸಿದ್ದರು.

ಎಲ್ಲ ವಿವಾದಗಳ ಬಳಿಕ ಇದೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿದ್ದಾರೆ. ಇದೀಗ ದುಬೈಗೆ ತೆರಳಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ