MM Keeravani: ‘ನನಗೆ ಆಸ್ಕರ್​ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ

Naatu Naatu Song | Oscar Awards: ‘ನನ್ನ ಪಾಲಿಗೆ ಇದು ಎರಡನೇ ಆಸ್ಕರ್​ ಪ್ರಶಸ್ತಿ’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

MM Keeravani: ‘ನನಗೆ ಆಸ್ಕರ್​ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ
ಎಂಎಂ ಕೀರವಾಣಿ
Follow us
|

Updated on:Mar 26, 2023 | 2:30 PM

ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಈಗ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಅವರು ಸಂಗೀತ ಸಂಯೋಜಿಸಿದ ‘ನಾಟು ನಾಟು..’ ಹಾಡು (Naatu Naatu Song) ಸೂಪರ್​ ಹಿಟ್​ ಆಗಿದ್ದೂ ಅಲ್ಲದೇ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಪಡೆದು ಬೀಗಿದೆ. ಆ ಮೂಲಕ ಭಾರತಕ್ಕೆ ಮೊದಲ ಆಸ್ಕರ್​ ಪ್ರಶಸ್ತಿ (Oscar Award) ತಂದುಕೊಡುವಲ್ಲಿ ಈ ಸಾಂಗ್​ ಯಶಸ್ವಿ ಆಗಿದೆ. ಇಂಥ ಸಾಧನೆ ಮಾಡಿದ್ದಕ್ಕಾಗಿ ಕೀರವಾಣಿ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಎಲ್ಲ ಕಡೆಗಳಿಂದ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಅಚ್ಚರಿ ಏನೆಂದರೆ, ಎಂಎಂ ಕೀರವಾಣಿ ಅವರಿಗೆ ಆಸ್ಕರ್​ ಸಿಕ್ಕಿರುವುದು ಇದೇ ಮೊದಲೇನೂ ಅಲ್ಲವಂತೆ. ‘ನನ್ನ ಪಾಲಿಗೆ ಇದು ಎರಡನೇ ಆಸ್ಕರ್​ ಪ್ರಶಸ್ತಿ’ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

ಅಕಾಡೆಮಿ ಅವಾರ್ಡ್​ ಗೆದ್ದು ಬಂದಿರುವ ಎಂಎಂ ಕೀರವಾಣಿ ಅವರು ಕೆಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು 30 ವರ್ಷಗಳ ಹಿಂದಿನ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ಗಲಾಟಾ ಪ್ಲಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾಗೆ ಕೀರವಾಣಿ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ
Image
Ram Charan: ‘ನಮ್ಮನ್ನು ಆಸ್ಕರ್​ ವೇದಿಕೆಗೆ ಕರೆಯಲಿಲ್ಲ, ಆ ಬಗ್ಗೆ ಈಗ ಮಾತು ಬೇಡ’: ರಾಮ್​ ಚರಣ್​
Image
MM Keeravani: ಆಸ್ಕರ್ ಗೆದ್ದ ಖುಷಿಯಲ್ಲಿ ರಾಜಮೌಳಿ, ಕೀರವಾಣಿ ಮಾಡಿದ್ದೇನು ನೋಡಿ
Image
MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ
Image
MM Keeravani: ಕನ್ನಡ ಚಿತ್ರರಂಗಕ್ಕೂ ಇದೆ ಎಂಎಂ ಕೀರವಾಣಿ ಕೊಡುಗೆ; ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕನಿಗೆ ಕರುನಾಡ ನಂಟು

MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ

‘ರಾಮ್​ ಗೋಪಾಲ್​ ವರ್ಮಾ ಅವರೇ ನನ್ನ ಪಾಲಿನ ಮೊದಲ ಆಸ್ಕರ್​. 2023ರಲ್ಲಿ ಪಡೆದಿರುವುದು ನನ್ನ ಎರಡನೇ ಆಸ್ಕರ್​ ಪ್ರಶಸ್ತಿ. ಯಾಕೆಂದರೆ, ಆರಂಭದ ದಿನಗಳಲ್ಲಿ ಸುಮಾರು 51 ಮಂದಿ ನನ್ನ ಆಡಿಯೋ ಕ್ಯಾಸೆಟ್​ ಅನ್ನು ಕಸದ ಬುಟ್ಟಿಗೆ ಎಸೆದಿದ್ದರು. ನನ್ನ ಹಾಡುಗಳನ್ನು ಯಾರೂ ಕೇಳಲೇ ಇಲ್ಲ. ಒಬ್ಬ ಹೊಸಬ ಬಂದಾಗ ಯಾರು ಗಮನಿಸ್ತಾರೆ? ಕೆಲವರಿಗೆ ನನ್ನ ಟ್ಯೂನ್​ ಇಷ್ಟ ಆಗಿದ್ದರೂ ಕೂಡ ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸಲಿಲ್ಲ’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ. ಆ ಕಷ್ಟದ ಸಂದರ್ಭದಲ್ಲಿ ಕೀರವಾಣಿಗೆ ಅವಕಾಶ ನೀಡಿದ್ದೇ ರಾಮ್​ ಗೋಪಾಲ್​ ವರ್ಮಾ.

MM Keeravani: ಕನ್ನಡ ಚಿತ್ರರಂಗಕ್ಕೂ ಇದೆ ಎಂಎಂ ಕೀರವಾಣಿ ಕೊಡುಗೆ; ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕನಿಗೆ ಕರುನಾಡ ನಂಟು

‘ನನಗೆ ‘ಕ್ಷಣ ಕ್ಷಣಂ’ ಸಿನಿಮಾದಲ್ಲಿ ಕೆಲಸ ಮಾಡಲು ರಾಮ್​ ಗೋಪಾಲ್​ ವರ್ಮಾ ಅವಕಾಶ ನೀಡಿದರು. ಆ ಸಮಯದಲ್ಲಿ ‘ಶಿವ’ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅವರ ಪಾಲಿಗೆ ‘ಶಿವ’ ಚಿತ್ರವೇ ಆಸ್ಕರ್​. ನನ್ನ ಪಾಲಿಗೆ ರಾಮ್​ ಗೋಪಾಲ್​ ವರ್ಮಾ ಅವರೇ ಆಸ್ಕರ್​. ಅವರು ನನಗೆ ಅವಕಾಶ ಕೊಟ್ಟ ನಂತರ ಬೇರೆ ಬೇರೆ ನಿರ್ಮಾಪಕರು ಕೂಡ ನನ್ನನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದರು’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ.

ಈ ಸಂದರ್ಶನದ ವಿಡಿಯೋ ಕ್ಲಿಪ್​ ವೈರಲ್​ ಆಗಿದೆ. ಅದನ್ನು ಶೇರ್​ ಮಾಡಿಕೊಂಡಿರುವ ರಾಮ್​ ಗೋಪಾಲ್​ ವರ್ಮಾ ಅವರು, ‘ಹೇ ಕೀರವಾಣಿ.. ನನಗೆ ಸತ್ತಂತೆ ಫೀಲ್​ ಆಗುತ್ತಿದೆ. ಯಾಕೆಂದರೆ ಕೇವಲ ಸತ್ತವರನ್ನು ಮಾತ್ರ ಈ ರೀತಿ ಹೊಗಳಲಾಗುತ್ತದೆ’ ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:30 pm, Sun, 26 March 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ