Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

ಅಂತೆಯೇ ಈ ವಾರ ಸಂಪೂರ್ಣ ಭಿನ್ನವಾಗಿ ಮೂಡಿ ಬಂದಿತ್ತು. ಅಲ್ಲದೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಧ್ವನಿ ಕೇಳಿದೆ.

Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!
ಬಿಗ್ ಬಾಸ್ ಕನ್ನಡ

Updated on: Apr 18, 2021 | 11:21 PM

ಕನ್ನಡ ಬಿಗ್​ ಬಾಸ್​ನ 7 ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಿಚ್ಚ ಸುದೀಪ್​ 8ನೇ ಸೀಸನ್​ಗೆ ಕಾಲಿಟ್ಟಿದ್ದಾರೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಕೂಡ. ಒಂದೇ ಒಂದು ವಾರ ಕೂಡ ಅವರು ಬಿಗ್​ ಬಾಸ್​ ತಪ್ಪಿಸಿರಲಿಲ್ಲ. ಆದರೆ,ಎಂಟನೇ ಸೀಸನ್​ನ ಏಳನೆವಾರ ಬಿಗ್​ ಬಾಸ್​ನಿಂದ ದೂರ ಉಳಿದಿದ್ದಾರೆ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಸುದೀಪ್​ ಧ್ವನಿ ಕೇಳಿದೆ! ಈ ಮೂಲಕ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಸಿಕ್ಕಿದೆ.

ಈ ವಾರ ಬಿಗ್​ ಬಾಸ್​ ನಡೆಸಿಕೊಡುವುದಿಲ್ಲ ಎಂದು ಹೇಳಿದ್ದ ಸುದೀಪ್​, ನನಗೆ ಅನಾರೋಗ್ಯ ಕಾಡುತ್ತಿದೆ. ಈ ವಾರಾಂತ್ಯಕ್ಕೆ ನಾನು ಗುಣಮುಖನಾಗುವ ನಿರೀಕ್ಷೆ ಇದೆ. ಆದರೆ, ವೈದ್ಯರ ಸೂಚನೆಯಂತೆ ನಾನು ಕೆಲ ದಿನ ರೆಸ್ಟ್​ ಮಾಡುತ್ತಿದ್ದೇನೆ. ಹೀಗಾಗಿ, ಈ ವಾರದ ಬಿಗ್​ ಬಾಸ್​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಈ ವಾರದ ಎಲಿಮಿನೇಷನ್​ಗೆ ಯಾವ ಪ್ಲ್ಯಾನ್​ ಮೂಲಕ ತಂಡ ಬರುತ್ತದೆ ಎನ್ನುವ ಕುತೂಹಲ ನನ್ನದು ಎಂದು ಸುದೀಪ್ ಹೇಳಿದ್ದರು.

ಅಂತೆಯೇ ಈ ವಾರ ಸಂಪೂರ್ಣ ಭಿನ್ನವಾಗಿ ಮೂಡಿ ಬಂದಿತ್ತು. ಅಲ್ಲದೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಧ್ವನಿ ಕೇಳಿದೆ. ನೀವು ಬರೆದ ಲೆಟರ್​ ಓದಿದೆ. ಎಲ್ಲಾ ಶಬ್ದಗಳು ಮನಸ್ಸಿಗೆ ಮುಟ್ಟುವಂತಿದೆ. ಚೇತರಿಸಿಕೊಂಡು ಬೇಗ ಬರ್ತೀನಿ. ನೀವು ಮಾಡಿ ಕಳಿಸಿದ ಅಡುಗೆಯನ್ನು ಸವಿದೆ. ನೀವು ನನ್ನ ಮೇಲಿಟ್ಟಿರುವ ಪ್ರೀತಿ ಬಗ್ಗೆ ಖುಷಿ ಇದೆ. ನಾನು ಮಾಡಿದ್ದು ಸಾರ್ಥಕ ಅನಿಸುತ್ತದೆ ಎಂದು ಸುದೀಪ್​ ಹೇಳಿದರು.

ವೀಕೆಂಡ್​ ಮಿಸ್​ ಮಾಡಿಕೊಳ್ಳೋಕೆ ಇಷ್ಟ ಎಂದಿರುವ ಸುದೀಪ್​, ವೀಕೆಂಡ್​ನ ಮಿಸ್​ ಮಾಡಿಕೊಳ್ಳುವುದಕ್ಕೆ ನನಗೂ ಇಷ್ಟ ಇಲ್ಲ. ವೈದ್ಯರ ಸಲಹೆಯಂತೆ ನಾನು ರೆಸ್ಟ್​ ಮಾಡುತ್ತಿದ್ದೇನೆ. ನೀವು ಬರೆದ ಪತ್ರ ಹಾಗೂ ಕಳುಹಿಸಿದ ಊಟಕ್ಕೆ ಥ್ಯಾಂಕ್ಸ್ ಎಂದರು ಸುದೀಪ್​.

ಇದನ್ನೂ ಒದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?

Published On - 10:25 pm, Sun, 18 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us