ಹಾಲಿವುಡ್​​ಗೆ ಹೊರಟ ಬಾಲಿವುಡ್ ನಿರ್ದೇಶಕ, ಆಸ್ಕರ್ ಗೆದ್ದ ಹೀರೋ ಜೊತೆ ಸಿನಿಮಾ

Bollywood director in Hollywood: ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡಿದ ನಿರ್ದೇಶಕರುಗಳು ಹಾಲಿವುಡ್​​ಗೆ ಹೋಗಿದ್ದೇ ಇಲ್ಲ. ಆದರೆ ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕರೊಬ್ಬರು ಒಂದು ಸಿನಿಮಾ ಹಿಟ್ ನೀಡಿದ್ದೇ ತಡ ಹಾಲಿವುಡ್​​ಗೆ ಹೊರಟಿದ್ದು, ಆಸ್ಕರ್ ವಿಜೇತ ಸ್ಟಾರ್ ನಟನೊಡನೆ ಸಿನಿಮಾ ಮಾಡಲಿದ್ದಾರೆ. ಯಾರು ಆ ಸ್ಟಾರ್ ನಟ, ಯಾರು ಆ ಭಾರತದ ನಿರ್ದೇಶಕ?

ಹಾಲಿವುಡ್​​ಗೆ ಹೊರಟ ಬಾಲಿವುಡ್ ನಿರ್ದೇಶಕ, ಆಸ್ಕರ್ ಗೆದ್ದ ಹೀರೋ ಜೊತೆ ಸಿನಿಮಾ
Jamie Foxx

Updated on: Aug 06, 2026 | 6:54 PM

ಭಾರತದ ಕೆಲವಾರು ನಟ-ನಟಿಯರು ಹಾಲಿವುಡ್ (Hollywood)​​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ತಂತ್ರಜ್ಞರುಗಳಿಗೆ ಹಾಲಿವುಡ್​​ನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಎಆರ್ ರೆಹಮಾನ್ ಹೊರತಾಗಿ ಇನ್ಯಾವ ಭಾರತದ ತಂತ್ರಜ್ಞರು ಸಹ ಹಾಲಿವುಡ್​​ನಲ್ಲಿ ಕೆಲಸ ಮಾಡಿಲ್ಲವೆಂದೇ ಹೇಳಬಹುದು. ಅದರಲ್ಲೂ ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡಿದ ನಿರ್ದೇಶಕರುಗಳು ಹಾಲಿವುಡ್​​ಗೆ ಹೋಗಿದ್ದೇ ಇಲ್ಲ. ಆದರೆ ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕರೊಬ್ಬರು ಒಂದು ಸಿನಿಮಾ ಹಿಟ್ ನೀಡಿದ್ದೇ ತಡ ಹಾಲಿವುಡ್​​ಗೆ ಹೊರಟಿದ್ದು, ಆಸ್ಕರ್ ವಿಜೇತ ಸ್ಟಾರ್ ನಟನೊಡನೆ ಸಿನಿಮಾ ಮಾಡಲಿದ್ದಾರೆ.

2023 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ಹಿಂದಿ ಸಿನಿಮಾ ‘ಕಿಲ್’ನ ನಿರ್ದೇಶಕ ನಿಖಿಲ್ ನಾಗೇಶ್ ಭಟ್ ಇದೀಗ ಹಾಲಿವುಡ್​​ಗೆ ಹೊರಟಿದ್ದಾರೆ. ಅತಿಯಾದ ಹಿಂಸೆ, ಡೈಲಾಗ್​​ಗಳ ಕಾರಣಕ್ಕೆ ಹಿಟ್ ಆಗಿತ್ತು ಕಿಲ್ ಸಿನಿಮಾ. ನಿಖಿಲ್ ಅವರು ಇದೀಗ ಹಾಲಿವುಡ್​ನ ಆಸ್ಕರ್ ವಿಜೇತ ಸ್ಟಾರ್ ನಟ ಜೇಮಿ ಫಾಕ್ಸ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ‘ಡೆಡ್​​ಲಾಕ್ಡ್’ ಹೆಸರಿನ ಸಿನಿಮಾವನ್ನು ನಿಖಿಲ್ ನಿರ್ದೇಶನ ಮಾಡಲಿದ್ದು, ಆ ಸಿನಿಮಾ ಅಮೆಜಾನ್​​ನ್ಲಿ ಪ್ರದರ್ಶನವಾಗಲಿದೆ.

ನಿರ್ದೇಶಕ ನಿಖಿಲ್ ಭಟ್ ಅವರು ‘ಕಿಲ್’ ಚಿತ್ರದ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಆಗಿದ್ದಾರೆ. ಈ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತ್ತು ಮತ್ತು 2024 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮೊದಲು ದೊಡ್ಡ ಮೊತ್ತಕ್ಕೆ ಲಯನ್ಸ್‌ಗೇಟ್‌ ಸಂಸ್ಥೆಗೆ ಮಾರಾಟವಾಯಿತು. ಲಕ್ಷ್ಯ ಮತ್ತು ರಾಘವ್ ಜುರೆಲ್ ನಟಿಸಿರುವ ಈ ಚಿತ್ರವು ಭಾರತದ ಅತ್ಯಂತ ಹಿಂಸಾತ್ಮಕ ಚಲನಚಿತ್ರ ಎನ್ನಲಾಗಿತ್ತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 47 ಕೋಟಿಗೂ ಹೆಚ್ಚು ಹಣ ಗಳಿಸಿತು ಮತ್ತು ಲಕ್ಷ್ಯ ಅವರ ಅತ್ಯುತ್ತಮ ನಟನೆ ಸೇರಿದಂತೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಇದನ್ನೂ ಓದಿ:ಹಾಲಿವುಡ್‌ ಸಿನಿಮಾಗಳಿಗೆ ಶಾರುಖ್‌ ಖಾನ್‌ ಪೈಪೋಟಿ: ಬದಲಾಗಲ್ಲ ‘ಕಿಂಗ್‌’ ರಿಲೀಸ್‌ ದಿನಾಂಕ

‘ಡೆಡ್‌ಲಾಕ್ಡ್’ ಚಿತ್ರವು ಹಾಲಿವುಡ್​​ನಲ್ಲಿ ನಿಖಿಲ್ ಅವರ ಮೊದಲ ಹೆಜ್ಜೆಯಾಗಿದೆ. ‘ಕಿಲ್’ ಹೊರತುಪಡಿಸಿ, ಅವರು ‘ಅಪೂರ್ವ’ ಮತ್ತು ‘ಹರ್ದಾಂಗ್’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಹಾಗೂ ‘ರಸ್‌ಭರಿ’ ಮತ್ತು ‘ದಿ ಗೋನ್ ಗೇಮ್’ ಹೆಸರಿನ ವೆಬ್ ಸರಣಿಗಳನ್ನು ಸಹ ನಿರ್ದೇಶಿಸಿದ್ದಾರೆ.

ಜೇಮಿ ಫಾಕ್ಸ್ ಹಾಲಿವುಡ್​​ನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿದ್ದಾರೆ. ‘ರೇ’ ಸಿನಿಮಾದ ಅತ್ಯುತ್ತಮ ನಟನೆಗೆ ಆಸ್ಕರ್ ಸಹ ಗೆದ್ದಿದ್ದಾರೆ. ಕ್ವಿಂಟೆನ್ ಟ್ಯಾರೆಂಟಿನೊ ನಿರ್ದೇಶನದ ‘ಜಾಂಗೊ ಅನ್​​ಚೇನ್ಡ್’, ಟಾಮ್ ಕ್ರೂಸ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಕೊಲ್ಯಾಟರಲ್’ ಅಲ್ಲಿಯೂ ನಟಿಸಿದ್ದಾರೆ. ‘ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್’, ‘ಬೇಬಿ ಡ್ರೈವರ್’, ‘ಸ್ಪೈಡರ್ ಮ್ಯಾನ್: ಅವೇ ಫ್ರಂ ಹೋಮ್’, ‘ಸೋಲ್’, ‘ರಿಯೋ’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us