ಈ ಫೋಟೋದಿಂದ ಸ್ಪಷ್ಟವಾಯ್ತು ದಳಪತಿ ವಿಜಯ್​ ಕುಟುಂಬದ ಒಳಗಿನ ಅಸಲಿ ವಿಚಾರ

ಎಸ್​.ಎ. ಚಂದ್ರಶೇಖರ್​ ಅವರಿಗೆ ಸಣ್ಣ ಸರ್ಜರಿ ಆಗಿದೆ. ಈಗ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅತ್ತ ದಳಪತಿ ವಿಜಯ್​ ಅವರು ತಮ್ಮ 68ನೇ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮುಗಿಸಿಕೊಟ್ಟು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಂದ ನೇರವಾಗಿ ಬಂದು ಅವರು ತಂದೆಯನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್​ ಆಗಿದೆ.

ಈ ಫೋಟೋದಿಂದ ಸ್ಪಷ್ಟವಾಯ್ತು ದಳಪತಿ ವಿಜಯ್​ ಕುಟುಂಬದ ಒಳಗಿನ ಅಸಲಿ ವಿಚಾರ
ತಂದೆ-ತಾಯಿ ಜೊತೆ ದಳಪತಿ ವಿಜಯ್​

Updated on: Sep 15, 2023 | 4:09 PM

ನಟ ದಳಪತಿ ವಿಜಯ್​ (Thalapathy Vijay) ಅವರು ‘ಲಿಯೋ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರ ನಡುವೆ ಅವರು ವೈಯಕ್ತಿಕ ಕಾರಣದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ಅವರ ಕುಟುಂಬದ (Thalapathy Vijay Family) ಬಗ್ಗೆ ಇಷ್ಟು ದಿನ ಒಂದು ಗಾಸಿಪ್​ ಹರಿದಾಡುತ್ತಿತ್ತು. ರಾಜಕೀಯದ ಕಾರಣದಿಂದ ತಂದೆ ಎಸ್​.ಎ. ಚಂದ್ರಶೇಖರ್​ ಜೊತೆ ವಿಜಯ್​ ಅವರು ಕಿರಿಕ್​ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಇಬ್ಬರೂ ಪರಸ್ಪರ ಮಾತನಾಡುತ್ತಿಲ್ಲ ಎಂಬ ಸುದ್ದಿ ಕೂಡ ಕೇಳಿಬಂದಿತ್ತು. ಆ ವಿಚಾರದ ಬಗ್ಗೆ ದಳಪತಿ ವಿಜಯ್​ ಅವರು ಮೌನ ಮುರಿದಿರಲಿಲ್ಲ. ಈಗ ಅವರ ಕುಟುಂಬದ ಒಂದು ಫೋಟೋ ವೈರಲ್​ ಆಗಿದೆ. ಆ ಮೂಲಕ ಎಲ್ಲ ಗಾಸಿಪ್​ಗಳಿಗೂ ವಿಜಯ್​ ಅವರು ಫುಲ್​ ಸ್ಟಾಪ್​ ಇಟ್ಟಂತಾಗಿದೆ. ತಂದೆ ಎಸ್​.ಎ. ಚಂದ್ರಶೇಖರ್​ (SA Chandrasekhar) ಜೊತೆ ಅವರು ಯಾವುದೇ ಮನಸ್ತಾಪ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರುವುದು ಕಾಮನ್​. ದಳಪತಿ ವಿಜಯ್​ ಕೂಡ ಪೊಲಿಟಿಕಲ್​ ಎಂಟ್ರಿ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಹಳ ದಿನಗಳ ಹಿಂದೆಯೇ ಎಸ್​.ಎ. ಚಂದ್ರಶೇಖರ್​ ಅವರು ಮಗನ ಹೆಸರು ಮುಂದಿಟ್ಟುಕೊಂಡು ಒಂದು ರಾಜಕೀಯ ಪಕ್ಷ ಶುರುಮಾಡಿದ್ದರು. ವಿಜಯ್​ ಗಮನಕ್ಕೆ ಬಾರದಂತೆ ಅವರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದರು. ಆ ಕಾರಣದಿಂದ ತಂದೆಯ ಮೇಲೆ ದಳಪತಿ ವಿಜಯ್​ ಸಿಟ್ಟಾಗಿದ್ದರು ಎನ್ನಲಾಗಿದೆ. ಆದರೆ ಈ ಕುಟುಂಬದಲ್ಲಿ ಆ ರೀತಿ ಯಾವುದೇ ಕಿರಿಕ್​ ಆಗಿಲ್ಲ ಎಂಬುದಕ್ಕೆ ಈ ಫೋಟೋ ಸಾಕ್ಷಿ ಒದಗಿಸುತ್ತಿದೆ.

ಇದನ್ನೂ ಓದಿ: ದಳಪತಿ ವಿಜಯ್​ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್​’ ನಿರ್ದೇಶಕ ಅಟ್ಲಿ

ವರದಿಗಳ ಪ್ರಕಾರ, ಎಸ್​.ಎ. ಚಂದ್ರಶೇಖರ್​ ಅವರಿಗೆ ಸಣ್ಣ ಸರ್ಜರಿ ಆಗಿದೆ. ಈಗ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅತ್ತ ದಳಪತಿ ವಿಜಯ್​ ಅವರು ತಮ್ಮ 68ನೇ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮುಗಿಸಿಕೊಟ್ಟು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಂದ ನೇರವಾಗಿ ಬಂದು ಅವರು ತಂದೆಯನ್ನು ಭೇಟಿ ಮಾಡಿದ್ದಾರೆ. ಅಪ್ಪನ ಆರೋಗ್ಯ ವಿಚಾರಿಸಿ, ಜೊತೆಯಲ್ಲೇ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫ್ರೇಮ್​ನಲ್ಲಿ ಅವರ ತಾಯಿ ಶೋಭಾ ಕೂಡ ಇದ್ದಾರೆ. ಎಲ್ಲರೂ ಒಟ್ಟಾಗಿ ಇರುವುದನ್ನು ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಹೊಂದಿರುವ ದಳಪತಿ ವಿಜಯ್​ ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಅದಕ್ಕಾಗಿ ಅವರು ತಮಿಳುನಾಡಿನಾದ್ಯಂತ ಪಾದಯಾತ್ರೆ ಮಾಡಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಅವರು ನಟಿಸಿರುವ ‘ಲಿಯೋ’ ಸಿನಿಮಾ ಅಕ್ಟೋಬರ್​ 19ರಂದು ಬಿಡುಗಡೆ ಆಗಲಿದೆ. ಆ ನಂತರ ಅವರ 68ನೇ ಸಿನಿಮಾ ತೆರೆಕಾಣಲಿದೆ. ಆ ಬಳಿಕ ಮೂರು ವರ್ಷಗಳ ಕಾಲ ಸಿನಿಮಾದಿಂದ ಅವರು ಬ್ರೇಕ್​ ತೆಗೆದುಕೊಂಡು ಸಂಪೂರ್ಣ ರಾಜಕೀಯದತ್ತ ಗಮನ ಹರಿಸುತ್ತಾರೆ ಎಂಬ ಗಾಸಿಪ್​ ಇದೆ. ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us