AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ನಡೆಯಲಿದೆ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಪ್ರೀ ರಿಲೀಸ್ ಇವೆಂಟ್

Leo Pre Release: ವಿಜಯ್ ನಟನೆಯ 'ಲಿಯೋ' ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನ ಅಕ್ಟೋಬರ್ 14ರಂದು ಅದ್ಧೂರಿಯಾಗಿ ವಿದೇಶದಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಲಾಗುತ್ತಿದೆ.

ವಿದೇಶದಲ್ಲಿ ನಡೆಯಲಿದೆ ವಿಜಯ್ ನಟನೆಯ 'ಲಿಯೋ' ಸಿನಿಮಾ ಪ್ರೀ ರಿಲೀಸ್ ಇವೆಂಟ್
ಲಿಯೋ
ಮಂಜುನಾಥ ಸಿ.
|

Updated on:Sep 14, 2023 | 5:07 PM

Share

ರಜನೀಕಾಂತ್ (Rajinikanth) ನಟನೆಯ ‘ಜೈಲರ್’ ದೊಡ್ಡ ಹಿಟ್ ಆಗಿದೆ, ಶಾರುಖ್ ಖಾನ್ ನಟನೆಯ ‘ಜವಾನ್’ ಸಹ ಸೂಪರ್ ಹಿಟ್ ಆಗಿದೆ. ಇವೆರಡಕ್ಕೂ ಮುನ್ನಾ ಬಿಡುಗಡೆ ಆಗಿದ್ದ ಕಮಲ್ ಹಾಸನ್​ರ ‘ವಿಕ್ರಂ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಎಲ್ಲರ ದೃಷ್ಟಿ ವಿಜಯ್ ನಟನೆಯ ‘ಲಿಯೋ‘ (Leo) ಸಿನಿಮಾದ ಮೇಲೆ ನೆಟ್ಟಿದೆ. ‘ಲಿಯೋ’ ಸಿನಿಮಾದ ಮೇಲೆ ನಿರೀಕ್ಷೆಗಳ ಭಾರ ತುಸು ಹೆಚ್ಚಿಗೇ ಇದೆ. ಅದಕ್ಕೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ನಡೆಯುತ್ತಿದ್ದು, ಪ್ರೀ ರಿಲೀಸ್ ಕಾರ್ಯಕ್ರಮವನ್ನು ವಿದೇಶದಲ್ಲಿ ಆಯೋಜನೆ ಮಾಡುತ್ತಿದೆ ಚಿತ್ರತಂಡ.

ಈಗಾಗಲೇ ‘ವಿಕ್ರಂ’ ಅಂಥಹಾ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ಲೋಕೇಶ್ ಕನಗರಾಜ್ ‘ಲಿಯೋ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಯೋಜಿಸಿದ್ದಕ್ಕಿಂತಲೂ ಬೇಗನೇ ಮುಗಿಸಿದ್ದು, ಇದೀಗ ಸಿನಿಮಾದ ಪ್ರಚಾರಕ್ಕೆ ಹೆಚ್ಚಿನ ಸಮಯ ಹಾಗೂ ಹಣವನ್ನು ಚಿತ್ರತಂಡ ವ್ಯಯಿಸುತ್ತಿದೆ. ಇದೇ ಕಾರಣಕ್ಕೆ ಭಾರಿ ಅದ್ಧೂರಿಯಾಗಿ ದೂರದ ಮಲೇಷಿಯಾದ ಕೌಲಲಂಪುರದಲ್ಲಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ನಟ ವಿಜಯ್ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ, ಇತರೆ ನಟರಂತೆ ಸರಣಿ ಸಂದರ್ಶನಗಳು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳು ಇನ್ನಿತರೆ ಪ್ರಚಾರದ ಟ್ರಿಕ್ಸ್​ಗಳನ್ನು ಬಳಸುವುದಿಲ್ಲ. ಬದಲಿಗೆ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅಥವಾ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತ್ರವೇ ಭಾಗವಹಿಸಿ ಒಮ್ಮೆ ಮಾತ್ರ ಅದ್ಧೂರಿಯಾಗಿ ಸಿನಿಮಾದ ಪ್ರಮೋಷನ್ ಮಾಡುತ್ತಾರೆ. ಹಾಗಾಗಿಯೇ ವಿಜಯ್ ಸಿನಿಮಾಗಳ ಪ್ರೀ ರಿಲೀಸ್​ ಇವೆಂಟ್​ಗಳು ಭಾರಿ ಅದ್ಧೂರಿಯಾಗಿರುತ್ತವೆ.

ಇದನ್ನೂ ಓದಿ:‘ಖುಷಿ’ ಚಿತ್ರದ ಬೆಡ್​ ರೂಮ್​ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್​ ಏನು?

ವಿಜಯ್​ರ ಈ ಹಿಂದಿನ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್​ ಅನ್ನು ಚೆನ್ನೈ ಅಥವಾ ತಮಿಳುನಾಡಿನ ಇತರೆ ಪ್ರಮುಖ ನಗರಗಳಲ್ಲಿ ಆಯೋಜನೆ ಮಾಡಲಾಗುತ್ತಿತ್ತು, ಆದರೆ ಈ ಬಾರಿ ಮಲೇಷಿಯಾನಲ್ಲಿ ಮಾಡಲಾಗುತ್ತಿದೆ. ಮಲೇಷಿಯಾನಲ್ಲಿ ತಮಿಳಿನ ದೊಡ್ಡ ಸಂಖ್ಯೆಯ ನಿವಾಸಿಗಳಿದ್ದು, ತಮಿಳು ಸಿನಿಮಾದ ದೊಡ್ಡ ಅಭಿಮಾನಿ ವರ್ಗವೇ ಅಲ್ಲಿದೆ. ಹಾಗಾಗಿ ‘ಲಿಯೋ’ ಸಿನಿಮಾದ ಪ್ರಚಾರಕ್ಕೆ ಮಲೇಷಿಯಾವನ್ನು ಆಯ್ದುಕೊಳ್ಳಲಾಗಿದೆ.

ಅಕ್ಟೋಬರ್ 14ರಂದು ಮಲೇಷಿಯಾದಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನಟ ವಿಜಯ್, ಸಂಜಯ್ ದತ್, ಅರ್ಜುನ್ ಸರ್ಜಾ, ನಟಿ ತ್ರಿಷಾ, ನಿರ್ದೇಶಕ ಲೋಕೇಶ್ ಕನಗರಾಜ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಸಿನಿಮಾದ ನಿರ್ಮಾಪಕರು ಇನ್ನೂ ಕೆಲವು ಪ್ರಮುಖ ಸದಸ್ಯರು ಭಾಗವಹಿಸಲಿದ್ದಾರೆ. ಭಾರಿ ಅದ್ಧೂರಿಯಾಗಿ ಈ ಕಾರ್ಯಕ್ರಮವನ್ನು ನಡೆಯಲು ಇಚ್ಛಿಸಿದ್ದು, ಕಾರ್ಯಕ್ರಮಕ್ಕೆ ತಯಾರಿ ಆರಂಭವಾಗಿದೆ.

‘ಲಿಯೋ’ ಸಿನಿಮಾವು ಗ್ಯಾಂಗ್​ಸ್ಟರ್ ಕತೆಯನ್ನು ಒಳಗೊಂಡಿದೆ. ಈ ಸಿನಿಮಾವು ಹಾಲಿವುಡ್ ಸಿನಿಮಾ ಒಂದರಿಂದ ಸ್ಪೂರ್ತಿ ಪಡೆದು ನಿರ್ಮಾಣ ಮಾಡಲಾಗಿರುವ ಸಿನಿಮಾ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಬಂದಿಲ್ಲ. ಸಿನಿಮಾದಲ್ಲಿ 16 ವರ್ಷದ ಬಳಿಕ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ನಟಿಸುತ್ತಿದ್ದಾರೆ. ಇದು ಇವರು ಒಟ್ಟಿಗೆ ನಟಿಸುತ್ತಿರುವ ಆರನೇ ಸಿನಿಮಾ. ಸಿನಿಮಾವು ಅಕ್ಟೋಬರ್ 19ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

Published On - 4:29 pm, Thu, 14 September 23