AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಖುಷಿ’ ಚಿತ್ರದ ಬೆಡ್​ ರೂಮ್​ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್​ ಏನು?

‘ಖುಷಿ’ ಸಿನಿಮಾದಲ್ಲಿನ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರ ನಟನೆಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್​ ಸಿಕ್ಕಿದೆ. ಇವರಿಬ್ಬರಿಗೆ ಇದು ಸ್ಪೆಷಲ್​ ಸಿನಿಮಾ. ಸೆ.1ರಂದು ಈ ಚಿತ್ರದ ರಿಲೀಸ್​ ಆಗಿದ್ದು, ಇದರಲ್ಲಿನ ಒಂದು ದೃಶ್ಯ ವೈರಲ್ ಆಗಿದೆ. ಅದನ್ನು ನೋಡಿದ ಅಭಿಮಾನಿಗಳು ‘ಸಖತ್ ಕ್ಯೂಟ್ ಜೋಡಿ’ ಎಂದಿದ್ದಾರೆ.

‘ಖುಷಿ’ ಚಿತ್ರದ ಬೆಡ್​ ರೂಮ್​ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್​ ಏನು?
ವಿಜಯ್​ ದೇವರಕೊಂಡ, ಸಮಂತಾ ರುತ್​ ಪ್ರಭು
TV9 Web
| Edited By: |

Updated on: Sep 03, 2023 | 1:24 PM

Share

ಟಾಲಿವುಡ್​ನ ಬಹುನೀರಿಕ್ಷಿತ ಚಿತ್ರ ‘ಖುಷಿ’ (Kushi Movie) ಸೆಪ್ಟೆಂಬರ್ 1ರಂದು ಬಿಡುಗಡೆ ಆಗಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ನಡುವಿನ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಮತ್ತು ಆ್ಯಂಗ್ರಿ ಯಂಗ್​ ಮ್ಯಾನ್​ ಆಗಿ ಕಾಣಿಸಿಕೊಂಡಿದ್ದ ವಿಜಯ್ ದೇವಕೊಂಡ (Vijay Devarakonda) ಅವರು ಈ ಬಾರಿ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಂಡ ವಿಜಯ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮಂತಾ-ವಿಜಯ್ ಜೋಡಿಗೆ ಜನರು ಕ್ಯೂಟ್ ಕಪಲ್ ಎಂದಿದ್ದಾರೆ. ‘ಖುಷಿ’ ಸಿನಿಮಾ ಬಿಡುಗಡೆ ಆದ ಬಳಿಕ ಒಂದು ವಿಡಿಯೋ ವೈರಲ್​ ಆಗಿದೆ.

‘ಖುಷಿ’ ಸಿನಿಮಾದ ಹಾಡುಗಳು ಬಿಡುಗಡೆ ಆದಾಗಲೇ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ರಿಲೀಸ್ ಆದ ಬಳಿಕವೂ ಈ ಮೆಚ್ಚುಗೆ ಮುಂದುವರಿದಿದೆ. ಈಗ ಸಿನಿಮಾದ ಒಂದು ಸೀನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಮೂಲಕ ಭಾರಿ ಸದ್ದು ಮಾಡಿದೆ. ವೈರಲ್​ ಆಗಿರುವ ಈ ದೃಶ್ಯದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಅವರು ಇಂಟಿಮೇಟ್​ ಆಗಿ ನಟಿಸಿದ್ದಾರೆ. ಈ ಬೆಡ್ ರೂಮ್ ದೃಶ್ಯದ ತುಣುಕು ಟ್ವಿಟರ್​ನಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಹಲವರು, ‘ಈ ಜೋಡಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದೆ’ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ‘ಖುಷಿ’ ಪ್ರಚಾರಕ್ಕೆ ಚಕ್ಕರ್​ ಹಾಕಿ, ಹಾಲಿವುಡ್​ ಚಿತ್ರಕ್ಕೆ ಆಡಿಷನ್​ ನೀಡುತ್ತಿದ್ದಾರಾ ಸಮಂತಾ?

ಈ ಸಿನಿಮಾದಲ್ಲಿ ಒಂದು ಕ್ಯೂಟ್ ಲವ್​ಸ್ಟೋರಿ ಇದೆ. ಆದ್ದರಿಂದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಥೆಯ ನಾಯಕ-ನಾಯಕಿ ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಕೌಟುಂಬಿಕ ವೈರುಧ್ಯಗಳಿಂದ ಅವರು ಹೇಗೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಟಾಲಿವುಡ್​ನಲ್ಲಿ ಸಮಂತಾ ಮತ್ತು ವಿಜಯ್​ ಮೋಡಿ ಮಾಡಿದ್ದಾರೆ. ಇವರಿಬ್ಬರು ಬೆಸ್ಟ್ ಆನ್​ಸ್ಕ್ರೀನ್ ಕಪಲ್ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ಈ ಹಿಂದೆ ‘ಮಹಾನಟಿ’ ಸಿನಿಮಾದಲ್ಲೂ ಅವರಿಬ್ಬರು ತೆರೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ‘ಖುಷಿ’ ಚಿತ್ರಕ್ಕೆ ವಿಜಯ್​ ದೇವರಕೊಂಡ-ಸಮಂತಾ ಪಡೆದ ಸಂಭಾವನೆ ಎಷ್ಟು? ಇಬ್ಬರ ಸಂಬಳದ ನಡುವೆ ಇದೆ ದೊಡ್ಡ ಅಂತರ

ಈ ಮೊದಲು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತ ಗೋವಿಂದಂ’ ಸಿನಿಮಾ ಬಿಡುಗಡೆ ಆದಾಗಲೂ ಒಂದು ಕಿಸ್ಸಿಂಗ್ ಸೀನ್ ವೈರಲ್ ಆಗಿ ಭಾರಿ ಸುದ್ದಿಯಾಗಿತ್ತು. ಆ ಸಿನಿಮಾದಲ್ಲಿ ನಟಿಸಿದ ಬಳಿಕ ರಶ್ಮಿಕಾ ಹಾಗೂ ವಿಜಯ್​ ನಡುವಿನ ಆಪ್ತತೆ ಹೆಚ್ಚಾಯಿತು. ಅದೇ ರೀತಿ ಈಗ ‘ಖುಷಿ’ ಚಿತ್ರದಿಂದಾಗಿ ಸಮಂತಾ ಹಾಗೂ ವಿಜಯ್ ಅವರು ರಿಯಲ್ ಲೈಫ್​ನಲ್ಲಿಯೂ ಜೋಡಿ ಆಗುತ್ತಾರಾ ಎಂಬ ಗುಮಾನಿ ಮೂಡಿದೆ. ಅದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ