Vijay Devarakonda: ಮನೆಯಲ್ಲೇ ಕುಳಿತು ಓಟಿಟಿಗಾಗಿ ಮಾಸ್ಟರ್​ ಪ್ಲ್ಯಾನ್​ ಮಾಡಿದ್ರಾ ವಿಜಯ್​ ದೇವರಕೊಂಡ?

ವಿಜಯ್​ ದೇವರಕೊಂಡ ನಟಿಸಿದ್ದ ‘ವರ್ಲ್ಡ್​ ಫೇಮಸ್​ ಲವರ್​’ ಸಿನಿಮಾ 2020ರ ಆರಂಭದಲ್ಲಿ ರಿಲೀಸ್​ ಆಯಿತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಯಶಸ್ವಿ ಆಗಲಿಲ್ಲ. ತುರ್ತಾಗಿ ಅವರಿಗೆ ಒಂದು ಗೆಲುವು ಬೇಕಿದೆ.

Vijay Devarakonda: ಮನೆಯಲ್ಲೇ ಕುಳಿತು ಓಟಿಟಿಗಾಗಿ ಮಾಸ್ಟರ್​ ಪ್ಲ್ಯಾನ್​ ಮಾಡಿದ್ರಾ ವಿಜಯ್​ ದೇವರಕೊಂಡ?
ವಿಜಯ್​ ದೇವರಕೊಂಡ

Updated on: Jun 13, 2021 | 1:18 PM

ಸಿನಿಮಾಗಳಿಗಿಂತಲೂ ಈಗ ವೆಬ್​ ಸಿರೀಸ್​ಗಳೇ ಹೆಚ್ಚು ಸೌಂಡು ಮಾಡುತ್ತಿವೆ. ಅದರಲ್ಲೂ ಈ ಲಾಕ್​ಡೌನ್​ ಕಾಲದಲ್ಲಿ ಚಿತ್ರಮಂದಿರಗಳು ಮುಚ್ಚಿರುವುದರಿಂದ ಅನೇಕರು ಓಟಿಟಿ ಪ್ಲಾಟ್​ಫಾರ್ಮ್​ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಮೊದಲೆಲ್ಲ ಚಿಕ್ಕ ಬಜೆಟ್​ನ ಸಿನಿಮಾಗಳಿಗೆ ಓಟಿಟಿ ಸೂಕ್ತ ಎಂದು ಹೇಳುವ ಕಾಲವಿತ್ತು. ಆದರೆ ಈಗ ಸಲ್ಮಾನ್​ ಖಾನ್​ ರೀತಿಯ ಸ್ಟಾರ್​ ನಟರೇ ತಮ್ಮ ಸಿನಿಮಾವನ್ನು ನೇರವಾಗಿ ಆನ್​ಲೈನ್​ ಮೂಲಕ ಬಿಡುಗಡೆ ಮಾಡುವ ಮೂಲಕ ಹೊಸ ದಾರಿ ತುಳಿದಿದ್ದಾರೆ. ಟಾಲಿವುಡ್​ ನಟ ವಿಜಯ್​ ದೇವರಕೊಂಡ ಕೂಡ ಓಟಿಟಿಗಾಗಿ ಒಂದು ಪ್ಲ್ಯಾನ್​ ಮಾಡುತ್ತಿದ್ದಾರೆ ಎಂಬ ಮಾತು ಹೇಳಿಬಂದಿದೆ.

‘ಅರ್ಜುನ್​ ರೆಡ್ಡಿ’ ಸಿನಿಮಾ ನಂತರ ವಿಜಯ್​ ದೇವರಕೊಂಡ ಅವರಿಗೆ ದೊಡ್ಡ ಮಟ್ಟದ ಫ್ಯಾನ್​ ಫಾಲೋಯಿಂಗ್​ ಶುರು ಆಯಿತು. ‘ಗೀತಾ ಗೋವಿಂದಂ’ ಹಾಗೂ ‘ಡಿಯರ್​ ಕಾಮ್ರೇಡ್’​ ಸಿನಿಮಾಗಳಲ್ಲಿ ಅವರು ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಂಡರು. ಈಗ ‘ಲೈಗರ್​’ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಆ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ನಡುವೆ ಓಟಿಟಿ ಸಲುವಾಗಿಯೂ ವಿಜಯ್​ ದೇವರಕೊಂಡ ಅನೇಕ ಕಥೆಗಳನ್ನು ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಓಟಿಟಿಯಲ್ಲಿ ಸಿನಿಮಾಗಳಿಗಿಂತಲೂ ವೆಬ್​ ಸಿರೀಸ್​ಗಳು ಹೆಚ್ಚು ಮಿಂಚುತ್ತಿವೆ. ಅದನ್ನೇ ಗಮನದಲ್ಲಿ ಇಟ್ಟುಕೊಂಡು ತಾವು ಕೂಡ ಓಟಿಟಿಗೆ ಎಂಟ್ರಿ ನೀಡಬೇಕು ಎಂದು ವಿಜಯ್​ ದೇವರಕೊಂಡ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸದ್ಯ ಲಾಕ್​ಡೌನ್​ನಿಂದಾಗಿ ಯಾವುದೇ ಶೂಟಿಂಗ್​ ಇಲ್ಲದೇ ಮನೆಯಲ್ಲೇ ಕಾಲಕಳೆಯುತ್ತಿರುವ ಅವರು ಹಲವು ಕಥೆಗಳನ್ನು ಕೇಳಿದ್ದು, ಆ ಪೈಕಿ ಒಂದನ್ನು ಫೈನಲ್​ ಮಾಡಿದ್ದಾರೆ. ಅದರಲ್ಲಿ ಅವರೇ ನಟಿಸುತ್ತಾರೋ ಅಥವಾ ಬರೀ ನಿರ್ಮಾಣ ಮಾಡುತ್ತಾರೋ ಎಂಬುದು ಇನ್ನೂ ತಿಳಿದುಬಂದಿಲ್ಲ.

ವಿಜಯ್​ ದೇವರಕೊಂಡ ನಟಿಸಿದ್ದ ‘ವರ್ಲ್ಡ್​ ಫೇಮಸ್​ ಲವರ್​’ ಸಿನಿಮಾ 2020ರ ಆರಂಭದಲ್ಲಿ ರಿಲೀಸ್​ ಆಯಿತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಚಿತ್ರ ಯಶಸ್ವಿ ಆಗಲಿಲ್ಲ. ಆ ಬಳಿಕ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ತುರ್ತಾಗಿ ಅವರಿಗೆ ಒಂದು ಗೆಲುವು ಬೇಕಿದೆ. ಲೈಗರ್​ ಮೂಲಕ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ಎಂಬುದು ನಿಜವಾದರೂ ಆ ಚಿತ್ರ ಸಿದ್ಧವಾಗಿ ಬಿಡುಗಡೆ ಆಗಲು ಸಾಕಷ್ಟು ಸಮಯ ಹಿಡಿಯಲಿದೆ. ಅಷ್ಟರೊಳಗೆ ಓಟಿಟಿಯಲ್ಲಿ ಏನಾದರೂ ಮಾಡಬೇಕು ಎಂದು ವಿಜಯ್​ ದೇವರಕೊಂಡ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಏನನ್ನೂ ಹೇಳಿಕೊಂಡಿಲ್ಲ.

ಇದನ್ನೂ ಓದಿ:

Rashmika Mandanna: ವಿಜಯ್​ ದೇವರಕೊಂಡಗೆ ಆ ಒಂದು ಪದ ಬಳಸಿ ವಿಶ್​ ಮಾಡಿದ ರಶ್ಮಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Rashmika Mandanna: ವಿಜಯ್​ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್​ಫ್ರೆಂಡ್​ ಯಾರು ಅಂತ ಹೇಳಿದ ರಶ್ಮಿಕಾ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us