‘ಡಿಸಿ’ ಬ್ಲಾಕ್ ಬಸ್ಟರ್: ಅಪರೂಪದ ದಾಖಲೆ ಬರೆದ ಲೋಕೇಶ್ ಕನಕರಾಜ್

Lokesh Kanagaraj movie: ಲೋಕೇಶ್ ಕನಗರಾಜ್ ತಮಿಳಿನ ಸ್ಟಾರ್ ನಿರ್ದೇಶಕ. ರಜನೀಕಾಂತ್, ಕಮಲ್ ಹಾಸನ್, ವಿಜಯ್ ಇನ್ನೂ ಹಲವು ಸ್ಟಾರ್ ನಟರುಗಳ ಜೊತೆಗೆ ಸಿನಿಮಾ ಮಾಡಿ ದೊಡ್ಡ-ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ಡಿಸಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಆ ಮೂಲಕ ದಾಖಲೆ ಬರೆದಿದ್ದಾರೆ.

‘ಡಿಸಿ’ ಬ್ಲಾಕ್ ಬಸ್ಟರ್: ಅಪರೂಪದ ದಾಖಲೆ ಬರೆದ ಲೋಕೇಶ್ ಕನಕರಾಜ್
Dc Movie

Updated on: Aug 21, 2026 | 7:06 PM

ಮುಖ್ಯಾಂಶಗಳು

  • ಲೋಕೇಶ್ ಕನಗರಾಜ್ ತಮಿಳಿನ ಸ್ಟಾರ್ ನಿರ್ದೇಶಕ
  • ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
  • ಲೋಕೇಶ್ ಅವರು ನಾಯಕನಾಗಿ ನಟಿಸಿ ದಾಖಲೆ ಬರೆದಿದ್ದಾರೆ.

ಲೋಕೇಶ್ ಕನಗರಾಜ್ (Lokesh Kangaraj), ತಮಿಳಿನ ಸ್ಟಾರ್ ನಿರ್ದೇಶಕ. ‘ವಿಕ್ರಂ’, ‘ಖೈದಿ’, ‘ಮಾಸ್ಟರ್’, ‘ಲಿಯೋ’, ‘ಕೂಲಿ’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ. ‘ಎಲ್​ಸಿಯು’ (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಸೃಷ್ಟಿಸಿ, ತಮ್ಮ ನಿರ್ದೇಶನಕ್ಕೇ ಅಭಿಮಾನಿ ವರ್ಗ ಸೃಷ್ಟಿಸಿಕೊಂಡವರು. ಆದರೆ ಅವರು ನಾಯಕನಾಗಿ ಎಂಟ್ರಿ ಕೊಡಲು ಮುಂದಾದಾಗ ಹಲವರು ಟೀಕೆ ಮಾಡಿದ್ದರು. ‘ಹೀರೋ ಮೆಟಿರಿಯಲ್ ಅಲ್ಲ’ ಎಂದು, ನಿರ್ದೇಶನ ಬಿಟ್ಟು ಹೀರೋ ಆಗುವ ಚಟ ಏಕೆ ಎಂದು. ಆದರೆ ಲೋಕೇಶ್ ಕನಗರಾಜ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಾಯಕ ಆದರು. ಈಗ ಭಾರಿ ದೊಡ್ಡ ಗೆಲುವು ಗಳಿಸಿಕೊಂಡಿದ್ದಾರೆ. ಮಾತ್ರವಲ್ಲ ಅಪರೂಪದ ದಾಖಲೆಯನ್ನೂ ಸಹ ಮಾಡಿದ್ದಾರೆ ಲೋಕೇಶ್.

ಲೋಕೇಶ್ ಕನಗರಾಜ್ ಅವರ ‘ಡಿಸಿ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದರು. ಇದೇ ತಿಂಗಳ ಆರಂಭದಲ್ಲಿ ಆ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ದೊಡ್ಡ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿಗೂ ಮೊತ್ತ ಗಳಿಕೆ ಮಾಡಿದೆ. ಈ ಮೂಲಕ ನಿರ್ದೇಶಕನೊಬ್ಬ ನಾಯಕನಾಗಿ ನಟಿಸಿದ ಮೊದಲ ಸಿನಿಮಾನಲ್ಲೇ 100 ಕೋಟಿ ಬಾಚಿ ದಾಖಲೆ ಬರೆದಿದ್ದಾರೆ. ಅದು ಮಾತ್ರವೇ ಅಲ್ಲದೆ, ‘A’ ರೇಟೆಡ್ ಸಿನಿಮಾ ಮೂಲಕ 100 ಕೋಟಿ ಬಾಚಿರುವುದು ಮತ್ತೊಂದು ದಾಖಲೆ ಎನಿಸಿಕೊಂಡಿದೆ. ಹಲವು ಟೀಕೆ, ವಿಮರ್ಶೆಗಳನ್ನು ನಿರ್ಲಕ್ಷಿಸಿ ನಾಯಕರಾದ ಲೋಕೇಶ್, ಮೊದಲ ಸಿನಿಮಾನಲ್ಲೆ ದೊಡ್ಡ ಹಿಟ್ ನೀಡಿದ್ದಾರೆ.

ಇದನ್ನೂ ಓದಿ:ಹೀರೋ ಆಗಿ ಗೆದ್ದ ನಿರ್ದೇಶಕ ಲೋಕೇಶ್ ಕನಗರಾಜ್; ಮೊದಲ ದಿನ ಭರ್ಜರಿ ಗಳಿಕೆ

‘ಡಿಸಿ’ ಸಿನಿಮಾನಲ್ಲಿ ಲೋಕೇಶ್ ಕನಗರಾಜ್ ಜೊತೆಗೆ ವಾಮಿಕಾ ಗಬ್ಬಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಕತೆಯು ದೇವದಾಸ್ ಮತ್ತು ಚಂದ್ರ ಪಾತ್ರಗಳಿಂದ ಸ್ಪೂರ್ತಿ ಪಡೆದಿದೆ. ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಒಂದಾಗಿದೆ. ಅನಿರುದ್ಧ್ ರವಿಚಂದ್ರನ್ ನೀಡಿರುವ ಸಂಗೀತ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು, ‘ರಾಗ ಆಫ್ ರಿವೇಂಜ್’ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸಿನಿಮಾದ ನಾಯಕಿ ವಾಮಿಕಾ ಅವರ ನಟನೆಗೂ ಬಹಳ ಪ್ರಶಂಸೆ ವ್ಯಕ್ತವಾಗಿದೆ.

ದೊಡ್ಡ ಮಟ್ಟದ ಪ್ರಚಾರ, ಪ್ಯಾನ್ ಇಂಡಿಯಾ ರಿಲೀಸ್ ಇದೆಲ್ಲವೂ ಇಲ್ಲದೆಯೂ ‘ಡಿಸಿ’ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಅದರಲ್ಲೂ ಸಿನಿಮಾ ಬಿಡುಗಡೆ ಆದ ಆರಂಭದ ಕೆಲ ದಿನಗಳ ಕಾಲ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಪ್ರೇಕ್ಷಕರಿಂದ ಇರಲಿಲ್ಲ. ಕೆಲ ದಿನಗಳ ಬಳಿಕ ಸಿನಿಮಾದ ಬಗ್ಗೆ ಜನರೇ ಪ್ರಚಾರ ಮಾಡಿ ಶೋಗಳು ಹೌಸ್​​ಫುಲ್ ಆಗಲು ಪ್ರಾರಂಭವಾದವು. ಅಂತಿಮವಾಗಿ ಸಿನಿಮಾ ದೊಡ್ಡ ಹಿಟ್ ಎನಿಸಿಕೊಂಡಿದೆ. ನಿರ್ದೇಶಕನಾಗಿ ಹಿಟ್ ಆಗಿದ್ದ ಲೋಕೇಶ್ ಈಗ ನಾಯಕನಾಗಿಯೂ ಹಿಟ್ ಆಗಿದ್ದಾರೆ. ಅಂದಹಾಗೆ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಅರುಣ್ ಮಟ್ಟೇಶ್ವರನ್.

ಲೋಕೇಶ್ ಕನಗರಾಜ್ ನಿರ್ದೇಶಕನಾಗಿಯೂ ಬಹಳ ಬ್ಯುಸಿ ಆಗಿದ್ದಾರೆ. ಅವರು ಅಲ್ಲು ಅರ್ಜುನ್ ಅವರಿಗಾಗಿ ಸಿನಿಮಾ ನಿರ್ದೇಶಿಸಬೇಕಿದೆ. ಅದರ ಬಳಿಕ ‘ಖೈದಿ 2’ ಸಿನಿಮಾ ಮಾಡಬೇಕಿದೆ. ‘ರೋಲೆಕ್ಸ್’ ಪಾತ್ರಕ್ಕಾಗಿ ಪ್ರತ್ಯೇಕ ಸಿನಿಮಾ ಸಹ ಮಾಡಬೇಕಿದೆ. ಇವುಗಳ ಜೊತೆಗೆ ‘ವಿಕ್ರಂ 2’ ಸಿನಿಮಾ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us