ಶಾರುಖ್​ ಖಾನ್​ ಜತೆ ಬೀಡಿ ಸೇದಿದ ದಿನಗಳನ್ನು ನೆನಪಿಸಿಕೊಂಡ ಮನೋಜ್​ ಬಾಜಪೇಯಿ

ಯಶ್ ಚೋಪ್ರಾ ನಿರ್ದೇಶನದ ವೀರ್ ಜಾರಾ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ.

ಶಾರುಖ್​ ಖಾನ್​ ಜತೆ ಬೀಡಿ ಸೇದಿದ ದಿನಗಳನ್ನು ನೆನಪಿಸಿಕೊಂಡ ಮನೋಜ್​ ಬಾಜಪೇಯಿ
ಶಾರುಖ್​ ಖಾನ್​ ಮನೋಜ್​ ಬಾಜಪೇಯಿ

Updated on: May 22, 2021 | 6:16 PM

ಮನೋಜ್​ ಬಾಜಪೇಯಿ ನಟನೆಯ ‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ಜೂನ್​ 4ರಂದು ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಮನೋಜ್​ ಬಾಜಪೇಯಿ ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಬಾಲಿವುಡ್​ ಕಿಂಗ್​ಖಾನ್​ ಶಾರುಖ್​ ಖಾನ್​ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. ಅಂದಿನ ಕಾಲದಲ್ಲಿ ಇಬ್ಬರೂ ಬೀಡಿ ಹಂಚಿಕೊಂಡು ಸೇದುತ್ತಿದ್ದರಂತೆ.

ಮನೋಜ್ ಅವರನ್ನು ದೆಹಲಿಯಲ್ಲಿ ಮೊದಲ ಬಾರಿಗೆ ಶಾರುಖ್​ ಖಾನ್​ ಡಿಸ್ಕೋಥೆಕ್​ಗೆ ಕರೆದೊಯ್ದಿದ್ದರಂತೆ. ಇವರಿಬ್ಬರು ದೆಹಲಿಯ ಬ್ಯಾರಿ ಜಾನ್ ಥಿಯೇಟರ್​ನಲ್ಲಿ ಒಟ್ಟಿಗೆ ಕಲಿತಿದ್ದರು. ಯಶ್ ಚೋಪ್ರಾ ನಿರ್ದೇಶನದ ವೀರ್ ಜಾರಾ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ.

ಅಂದು ಶಾರುಖ್​ ಖಾನ್​ ಮಾರುತಿ ವ್ಯಾನ್​ನಲ್ಲಿ ಬರುತ್ತಿದ್ದರು. ನಮ್ಮ ಗುಂಪಿನಲ್ಲಿ ಮಾರುತಿ ವ್ಯಾನ್​ನಲ್ಲಿ ಓಡಾಡುವ ಏಕೈಕ ವ್ಯಕ್ತಿ ಅವರಾಗಿದ್ದರು. ತಾಜ್​ ಹೋಟೆಲ್​ನಲ್ಲಿರುವ ಡಿಸ್ಕೋಥೆಕ್​ಗೆ ನನ್ನನ್ನು ಕರೆದೊಯ್ದಿದ್ದರು. ನಾವು ಸಿಗರೇಟ್​ ಹಾಗೂ ಬೀಡಿಯನ್ನು ಶೇರ್​ ಮಾಡಿಕೊಳ್ಳುತ್ತಿದ್ದೆವು. ಹುಡುಗಿಯರ ಗುಂಪಿನಲ್ಲಿ ಶಾರುಖ್​ ತುಂಬಾನೇ ಫೇಮಸ್​ ಆಗಿದ್ದರು ಎಂದಿದ್ದಾರೆ ಮನೋಜ್.

‘ದಿ ಫ್ಯಾಮಿಲಿ ಮ್ಯಾನ್’​ ಮೊದಲ ಸೀಸನ್​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಸೀಸನ್​-2 ಜೂನ್​ 4ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗುತ್ತಿದೆ. ಈ ವೆಬ್​ ಸೀರಿಸ್​ನ ನಿರ್ದೇಶನ ಜವಾಬ್ದಾರಿಯನ್ನು ರಾಜ್​ ಮತ್ತು​ ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್​ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್​ಮೇಲೆ ಹೆಚ್ಚು ನಿರೀಕ್ಷೆ ಇದೆ. ಇನ್ನು, ಇತ್ತೀಚೆಗೆ ಈ ವೆಬ್​ ಸೀರಿಸ್​ನ ಟ್ರೈಲರ್​ ರಿಲೀಸ್​ ಆಗಿತ್ತು. ಇದರಲ್ಲಿ ತಮಿಳು ಜನರನ್ನು ಟೆರರಿಸ್ಟ್​ಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಹೀಗಾಗಿ, ಇದರ ಟ್ರೇಲರ್​ ಎಡಿಟ್​ ಮಾಡಲಾಗಿದೆ.

ಇದನ್ನೂ ಓದಿ: ಮತ್ತೆ ವಿವಾದ ಮಾಡಿಕೊಳ್ಳಲಿದೆಯೇ ಅಮೇಜಾನ್​ ಪ್ರೈಮ್​? ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ಗೆ ವಿಘ್ನ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us