ಕಾನ್ ರೆಡ್ ಕಾರ್ಪೇಟ್​​ ಮೇಲೆ ತೆಲಂಗಾಣ ಕೈಮಗ್ಗದ ಉಡುಪು ಪ್ರದರ್ಶಿಸಿದ ಏಷ್ಯಾ ಸುಂದರಿ

Cannes 2026: ಕಾನ್ ಚಿತ್ರೋತ್ಸವ ಚಾಲ್ತಿಯಲ್ಲಿದ್ದು ಭಾರತದ ಹಲವಾರು ನಟ-ನಟಿಯರು, ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಗಳು ಹಲವಾರು ಮಂದಿ ಭಾಗವಹಿಸಿದ್ದಾರೆ. ಒಬ್ಬರಿಗಿಂತಲೂ ಒಬ್ಬರು ಭಿನ್ನವಾಗಿ, ದುಬಾರಿಯಾದ ಮತ್ತು ಆಧುನಿಕವಾದ, ಗ್ಲಾಮರಸ್ ಆದ ಬಟ್ಟೆಗಳನ್ನು ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾ ಫೋಟೊಗಳಿಗೆ ಫೋಸು ನೀಡುತ್ತಿದ್ದಾರೆ. ಆದರೆ ಏಷ್ಯಾ ಸುಂದರಿ ಎನಿಸಿಕೊಂಡಿರುವ ಭಾರತದ ರಶ್ಮಿಕಾ ಠಾಕೂರ್ ಮಾತ್ರ ಭಾರತೀಯ ಸಂಸ್ಕೃತಿಗ ಉಡುಗೆಗಳ ಪ್ರಚಾರಕ್ಕೆ ವೇದಿಕೆಯಾಗಿ ಕಾನ್ ರೆಡ್ ಕಾರ್ಪೇಟ್ ಅನ್ನು ಬಳಸಿಕೊಂಡಿದ್ದಾರೆ.

ಕಾನ್ ರೆಡ್ ಕಾರ್ಪೇಟ್​​ ಮೇಲೆ ತೆಲಂಗಾಣ ಕೈಮಗ್ಗದ ಉಡುಪು ಪ್ರದರ್ಶಿಸಿದ ಏಷ್ಯಾ ಸುಂದರಿ
Rashmi Thakur

Updated on: May 22, 2026 | 12:58 PM

ಕಾನ್ ಚಿತ್ರೋತ್ಸವ (Cannes 2026) ಚಾಲ್ತಿಯಲ್ಲಿದ್ದು ಭಾರತದ ಹಲವಾರು ನಟ-ನಟಿಯರು, ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಗಳು ಹಲವಾರು ಮಂದಿ ಭಾಗವಹಿಸಿದ್ದಾರೆ. ಒಬ್ಬರಿಗಿಂತಲೂ ಒಬ್ಬರು ಭಿನ್ನವಾಗಿ, ದುಬಾರಿಯಾದ ಮತ್ತು ಆಧುನಿಕವಾದ, ಗ್ಲಾಮರಸ್ ಆದ ಬಟ್ಟೆಗಳನ್ನು ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾ ಫೋಟೊಗಳಿಗೆ ಫೋಸು ನೀಡುತ್ತಿದ್ದಾರೆ. ಆದರೆ ಏಷ್ಯಾ ಸುಂದರಿ ಎನಿಸಿಕೊಂಡಿರುವ ಭಾರತದ ರಶ್ಮಿಕಾ ಠಾಕೂರ್ ಮಾತ್ರ ಭಾರತೀಯ ಸಂಸ್ಕೃತಿಗ ಉಡುಗೆಗಳ ಪ್ರಚಾರಕ್ಕೆ ವೇದಿಕೆಯಾಗಿ ಕಾನ್ ರೆಡ್ ಕಾರ್ಪೇಟ್ ಅನ್ನು ಬಳಸಿಕೊಂಡಿದ್ದಾರೆ.

ರೆಡ್ ಕಾರ್ಪೆಟ್ ಮೇಲೆ ತೆಲಂಗಾಣದ ಸಾಂಪ್ರದಾಯಿಕ ಪೋಚಂಪಲ್ಲಿ ಇಕ್ಕತ್ ವಸ್ತ್ರಗಳನ್ನು ತೊಟ್ಟು ರಶ್ಮಿ ಠಾಕೂರ್ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಪೋಚಂಪಲ್ಲಿ ಇಕ್ಕತ್ ವಸ್ತುಗಳಿಗೆ ಅಂತರಾಷ್ಟ್ರೀಯ ವೇದಿಕೆ ಲಭ್ಯವಾದಂತಾಗಿದೆ. ರಶ್ಮಿ ಅವರು ಮಿಸ್ ಏಷ್ಯಾ ಇಂಟರ್ನ್ಯಾಷನಲ್ ಹಾಗೂ ಇಕ್ಕತ್ ಕೈಮಗ್ಗಗಳ ರಾಯಭಾರಿ ಸಹ ಆಗಿದ್ದು, ಅವರು ಪೋಚಂಪಲ್ಲಿ ಇಕ್ಕತ್ ವಿನ್ಯಾಸದ ವಿಶೇಷ ವಸ್ತ್ರಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ರ್ಯಾಂಪ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

‘ಪೋಚಂಪಲ್ಲಿ ಟು ಕಾನ್’ ಎಂಬ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ಉಡುಪಿನಲ್ಲಿ ತೆಲಂಗಾಣದ ಕೈಮಗ್ಗ ವೈಭವ, ಭಾರತೀಯ ಹಸ್ತಕಲೆಯ ಪ್ರತಿಭೆ, ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಸಮ್ಮಿಲನ ಇದೆಯೆಂದು ರಶ್ಮಿ ಅವರು ಹೇಳಿದ್ದಾರೆ. ಭಾರತ ಸರ್ಕಾರದ ಜವಳಿ ಸಚಿವಾಲಯ ಹಾಗೂ ಸ್ಥಳೀಯ ನೇಯ್ಗೆಗಾರರು ನೂರಾರು ಗಂಟೆಗಳ ಕಾಲ ಶ್ರಮಿಸಿ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ:ರಹಸ್ಯವಾಗಿ ಮದುವೆಯಾದರೇ ನಟಿ ಕಂಗನಾ ರಣಾವತ್? ವೈರಲ್ ವಿಡಿಯೋದ ಅಸಲಿಯತ್ತೇನು?

ರಶ್ಮಿ ಠಾಕೂರ್ ಅವರು ಈ ಕೈಮಗ್ಗದ ಉಡುಪಿಗೆ ಜೊತೆಯಾಗಿ ಹೈದರಾಬಾದ್‌ನ ಪ್ರಸಿದ್ಧ ಮುತ್ತುಗಳ ಆಭರಣಗಳನ್ನು ಧರಿಸಿದ್ದರು. ನಿಜಾಮರ ಕಾಲದ ಪರಂಪರೆಯನ್ನು ನೆನಪಿಸುವ ಈ ಮುತ್ತುಗಳು ಇಕ್ಕತ್ ವಿನ್ಯಾಸಗಳೊಂದಿಗೆ ಜೊತೆಯಾಗಿ ಎದ್ದು ಕಾಣುತ್ತಿದ್ದವು. ಕಾನ್ ರೆಡ್ ಕಾರ್ಪೆಟ್ ಮೇಲೆ ಇಕ್ಕತ್ ವಸ್ತ್ರಗಳನ್ನು ಧರಿಸಿ ಹೆಜ್ಜೆ ಹಾಕಿದ ಬಗ್ಗೆ ರಶ್ಮಿ ಠಾಕೂರ್ ತೀವ್ರ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದು, ‘ಇದು ಕೇವಲ ನನ್ನ ವೈಯಕ್ತಿಕ ಪಾದಾರ್ಪಣೆಯಲ್ಲ, ಬದಲಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತೆಲಂಗಾಣದ ಕೈಮಗ್ಗ ಕಲೆಯ ಪಾದಾರ್ಪಣೆಯಾಗಿದೆ. 200 ವರ್ಷಗಳ ಸುದೀರ್ಘ ಇತಿಹಾಸ ಮತ್ತು ಕಠಿಣ ಶ್ರಮವನ್ನು ತಮ್ಮ ದಾರಗಳಲ್ಲಿ ಪೋಣಿಸಿದ ಪೋಚಂಪಲ್ಲಿಯ ನೇತಾರರ ಕಲಾ ವೈಭವಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಕಲೆ ಈಗ ಜಾಗತಿಕ ಕಲೆಯಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Fri, 22 May 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us