ಚಿತ್ರರಂಗಕ್ಕೆ ಮತ್ತೆ ಕೊರೊನಾ ಭಯ; ಆಸ್ಕರ್ ವಿಜೇತ ಕೀರವಾಣಿ ಸೇರಿ ಅನೇಕರಿಗೆ ಕೊವಿಡ್ ಪಾಸಿಟಿವ್

ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸೇರಿ ಅನೇಕರಿಗೆ ಕೊವಿಡ್ ಪಾಸಿಟಿವ್ ಆಗಿದ್ದು, ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ಅವರೆಲ್ಲ ಬೇಗ ಚೇತರಿಕೆ ಕಾಣಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಚಿತ್ರರಂಗಕ್ಕೆ ಮತ್ತೆ ಕೊರೊನಾ ಭಯ; ಆಸ್ಕರ್ ವಿಜೇತ ಕೀರವಾಣಿ ಸೇರಿ ಅನೇಕರಿಗೆ ಕೊವಿಡ್ ಪಾಸಿಟಿವ್
ಕೀರವಾಣಿ-ಮಾಹಿ-ಶಿಲ್ಪಾ,ರಾಜ್ ಕುಂದ್ರಾ

Updated on: Mar 31, 2023 | 7:43 AM

ಮುಖ್ಯಾಂಶಗಳು

  • ಚಿತ್ರರಂಗಕ್ಕೆ ಮತ್ತೆ ಕಾಡಿದ ಕೊವಿಡ್ ಭಯ
  • ಚಿತ್ರರಂಗದ ಅನೇಕರಿಗೆ ಕೊರೊನಾ ಪಾಸಿಟಿವ್
  • ಎಂಎಂ ಕೀರವಾಣಿ ಸೇರಿ ಅನೇಕರಿಗೆ ಕೊವಿಡ್ ಅಂಟಿದೆ

ದೇಶದ ಕೊರೊನಾ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಾಣುತ್ತಿದೆ. ಅಲ್ಲಲ್ಲಿ ಸಾವಿನ ಪ್ರಕರಣಗಳು ಕೂಡ ವರದಿ ಆಗುತ್ತಿವೆ. ಇದು ಸಾಕಷ್ಟು ಆತಂಕ ಮೂಡಿಸಿದೆ. ಚಿತ್ರರಂಗದ ಅನೇಕರು ಕೊವಿಡ್​ಗೆ (Covid) ಒಳಗಾಗುತ್ತಿದ್ದಾರೆ. ಹೀಗೆ ಮುಂದುವರಿದರೆ ಏನು ಗತಿ ಎನ್ನುವ ಪ್ರಶ್ನೆ ಕಾಡಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Kiravani) ಸೇರಿ ಅನೇಕರಿಗೆ ಕೊವಿಡ್ ಪಾಸಿಟಿವ್ ಆಗಿದ್ದು, ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ಅವರೆಲ್ಲ ಬೇಗ ಚೇತರಿಕೆ ಕಾಣಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಎಂಎಂ ಕೀರವಾಣಿ

ಎಂಎಂ ಕೀರವಾಣಿ ಅವರು ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ಸಂಗೀತ ಸಂಯೋಜನೆ ಮಾಡಿರುವ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಇದಕ್ಕಾಗಿ ಅವರು ಅಮೆರಿಕಕ್ಕೆ ತೆರಳಿದ್ದರು. ಭಾರತಕ್ಕೆ ಬಂದ ಬಳಿಕವೂ ವಿವಿಧ ಪಾರ್ಟಿಗಳಲ್ಲಿ ಭಾಗಿ ಆಗಿದ್ದರು. ಈಗ ಅವರು ಕೊವಿಡ್​ಗೆ ಒಳಗಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕಿಶೋರ್ ಖೇರ್

ನಟಿ ಹಾಗೂ ರಾಜಕಾರಣಿ ಕಿಶೋರ್ ಖೇರ್ ಅವರಿಗೆ ಕೊವಿಡ್ ಅಂಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನನಗೆ ಕೊರೊನಾ ಪಾಸಿಟಿವ್ ಆಗಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಕೋರಿದ್ದಾರೆ.

ಪೂಜಾ ಭಟ್

ಮಹೇಶ್ ಭಟ್ ಮಗಳು ಪೂಜಾ ಭಟ್​ಗೂ ಕೊರೊನಾ ಪಾಸಿಟಿವ್ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ನಿರ್ಮಾಪಕಿ, ನಿರ್ದೇಶಕಿ ಆಗಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಜಿಸ್ಮ್​ 2’ ಸೇರಿ ಅನೇಕ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.

ಮಾಹಿ ವಿಜ್

‘ಶ್​..ಕೊಯಿ ಹೈ’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿರೋ ಮಾಹಿ ವಿಜ್​ಗೂ ಕೊರೊನಾ ಪಾಸಿಟಿವ್ ಆಗಿದೆ. ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಧನ್ಯಾ ರಾಮ್​ಕುಮಾರ್​ಗೆ ಕೊವಿಡ್​ ಪಾಸಿಟಿವ್​

ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೂ ಕೊವಿಡ್ ಅಂಟಿದೆ. ಈ ಕಾರಣಕ್ಕೆ ಇಡೀ ಕುಟುಂಬ ಹೋಂ ಕ್ವಾರಂಟೈನ್ ಆಗಿದೆ.

ಹೀಗೆ ಮುಂದುವರಿದರೆ ಕಷ್ಟವಿದೆ..

ಚಿತ್ರರಂಗದವರಿಗೆ ಹೆಚ್ಚೆಚ್ಚು ಕೊವಿಡ್ ಅಂಟಿದರೆ ಅದರಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಶೂಟಿಂಗ್ ವಿಳಂಬ ಆಗುತ್ತದೆ. ಇನ್ನು, ಒಟ್ಟಾರೆ ಪ್ರಕರಣ ಹೆಚ್ಚಳದಿಂದ ಚೇತರಿಕೆ ಕಂಡಿದ್ದ ಚಿತ್ರರಂಗ ನಷ್ಟ ಅನುಭವಿಸಲಿದೆ. ಕೊವಿಡ್​ನ ಮೂರು ಅಲೆಯಿಂದ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿತ್ತು. ಈಗ, ಸಿನಿಮಾ ರಂಗ ಚೇತರಿಕೆ ಕಂಡಿದೆ. ಹೀಗಿರುವಾಗಲೇ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವುದು ಆತಂಕ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:20 am, Fri, 31 March 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us