‘ಬಡೇ ಮಿಯಾ ಚೋಟೆ ಮಿಯಾ’ ಟ್ವಿಟರ್ ವಿಮರ್ಶೆ; ಅಕ್ಷಯ್, ಟೈಗರ್​ಗಿಂತ ಪೃಥ್ವಿರಾಜ್​ಗೆ ಹೆಚ್ಚು ಅಂಕ

ಈ ಮೊದಲು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದ ಅಕ್ಷಯ್ ಕುಮಾರ್ ಅವರು ‘ನನಗಿಂತ ಪೃಥ್ವಿರಾಜ್​ ಪಾತ್ರಕ್ಕೆ ಹೆಚ್ಚು ಸಂಭಾಷಣೆ ಇದೆ’ ಎಂದು ಹೇಳಿದ್ದರು. ಈ ಮಾತು ಪ್ರೇಕ್ಷಕರಿಗೆ ನಿಜ ಎನಿಸಿದೆ. ಪೃಥ್ವಿರಾಜ್ ಪಾತ್ರಕ್ಕೆ ಹೆಚ್ಚು ತೂಕ ಇದೆ ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

‘ಬಡೇ ಮಿಯಾ ಚೋಟೆ ಮಿಯಾ’ ಟ್ವಿಟರ್ ವಿಮರ್ಶೆ; ಅಕ್ಷಯ್, ಟೈಗರ್​ಗಿಂತ ಪೃಥ್ವಿರಾಜ್​ಗೆ ಹೆಚ್ಚು ಅಂಕ
ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ತಂಡ

Updated on: Apr 11, 2024 | 11:37 AM

ಅಕ್ಷಯ್ ಕುಮಾರ್ (Akshay Kumar), ಟೈಗರ್ ಶ್ರಾಫ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಇಂದು (ಏಪ್ರಿಲ್ 11) ರಿಲೀಸ್ ಆಗಿದೆ. ರಂಜಾನ್ ಪ್ರಯುಕ್ತ ಸಿನಿಮಾ ಬಿಡುಗಡೆ ಆಗಿದ್ದು, ದೊಡ್ಡ ಮೊತ್ತದಲ್ಲಿ ಕಲೆಕ್ಷನ್ ಮಾಡೋ ಸೂಚನೆ ನೀಡಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್​ಗಿಂತ ಪೃಥ್ವಿರಾಜ್ ಪಾತ್ರ ಹೆಚ್ಚು ಇಷ್ಟ ಆಗಿದೆ ಎಂದು ಟ್ವಿಟರ್​ನಲ್ಲಿ ಫ್ಯಾನ್ಸ್ ವಿಮರ್ಶೆ ತಿಳಿಸುತ್ತಿದ್ದಾರೆ.

ಈ ಮೊದಲು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದ ಅಕ್ಷಯ್ ಕುಮಾರ್ ಅವರು ‘ನನಗಿಂತ ಪೃಥ್ವಿರಾಜ್​ ಪಾತ್ರಕ್ಕೆ ಹೆಚ್ಚು ಸಂಭಾಷಣೆ ಇದೆ’ ಎಂದು ಹೇಳಿದ್ದರು. ಈ ಮಾತು ಪ್ರೇಕ್ಷಕರಿಗೆ ನಿಜ ಎನಿಸಿದೆ. ಪೃಥ್ವಿರಾಜ್ ಪಾತ್ರಕ್ಕೆ ಹೆಚ್ಚು ತೂಕ ಇದೆ ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ‘ಭರ್ಜರಿ ಆ್ಯಕ್ಷನ್ ಸಿನಿಮಾ. ಆ್ಯಕ್ಷನ್ ಪ್ರಿಯರಿಗೆ ಇಷ್ಟ ಆಗಲಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಸಿನಿಮಾ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಕೇವಲ ಆ್ಯಕ್ಷನ್ ಪ್ರಿಯರಿಗೆ ಮಾತ್ರ ಸಿನಿಮಾ ಇಷ್ಟ ಆಗಲಿದೆ ಎಂದಿದ್ದಾರೆ.


ಇದನ್ನೂ ಓದಿ: ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್

ಅಲ್ಲಿ ಅಬ್ಬಾಸ್ ಜಫರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಟ್ವಿಸ್ಟ್​ಗಳನ್ನು ಪ್ರೇಕ್ಷಕರು ಸುಲಭದಲ್ಲಿ ಊಹಿಸಬಹುದು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಹೊಸ ರೀತಿಯ ಆ್ಯಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಇವೆ ಎಂದು ಅನೇಕರು ಹೇಳಿದ್ದಾರೆ. ವಿಲನ್ ಆಗಿ ಪೃಥ್ವಿರಾಜ್ ಅವರು ಇಷ್ಟ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:32 am, Thu, 11 April 24