Ghost Movie: ‘ದಸರಾ ವಿನ್ನರ್’; ಶಿವಣ್ಣನ ‘ಘೋಸ್ಟ್’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

|

Updated on: Oct 19, 2023 | 7:10 AM

Ghost Movie Twitter Review: ಅಕ್ಟೋಬರ್ 18ರ ಮಧ್ಯರಾತ್ರಿಯೇ ಅಭಿಮಾನಿಗಳಿಗೆ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಇದನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ನೋಡಿದ ಕೆಲವರು ಸೀಕ್ವೆಲ್ ಬರಬಹುದು ಎಂದು ಊಹಿಸಿದ್ದಾರೆ.

Ghost Movie: ‘ದಸರಾ ವಿನ್ನರ್’; ಶಿವಣ್ಣನ ‘ಘೋಸ್ಟ್’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ಶಿವಣ್ಣ
Follow us on

ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ (Ghost Reveiew) ಇಂದು (ಅಕ್ಟೋಬರ್ 19) ರಿಲೀಸ್ ಆಗಿದೆ. ಶಿವಣ್ಣ ಅವರು ಎರಡು ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಟ್ರೇಲರ್​ನಲ್ಲೇ ಗೊತ್ತಾಗಿತ್ತು. ಸಿನಿಮಾದಲ್ಲಿ ಅವರ ಗೆಟಪ್ ಯಾವ ರೀತಿಯಲ್ಲಿ ಮೂಡಿಬಂದಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅನುಪಮ್ ಖೇರ್, ಜಯರಾಮ್ ಮೊದಲಾದ ಸ್ಟಾರ್ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಶಿವಣ್ಣನ (Shivarajkumar) ನೋಡುವ ತವಕ ಅಭಿಮಾನಿಗಳಲ್ಲಿ ಮೂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಅಕ್ಟೋಬರ್ 18ರ ಮಧ್ಯರಾತ್ರಿಯೇ ಅಭಿಮಾನಿಗಳಿಗೆ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಇದನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ‘ಶಿವರಾಜ್​ಕುಮಾರ್ ಅವರು 61ನೇ ವಯಸ್ಸಲ್ಲೂ ಎನರ್ಜಿಟಿಕ್ ಆಗಿ ನಟಿಸಿದ್ದಾರೆ. ಅವರ ಹಳೆಯ ಲುಕ್ ಸರಿಯಾಗಿ ಹೊಂದಿಕೆ ಆಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಜಯರಾಮ್ ಅವರು ಗಮನ ಸೆಳೆದಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕ್ಲೈಮ್ಯಾಕ್ಸ್ ನೋಡಿದ ಕೆಲವರು ಸೀಕ್ವೆಲ್ ಬರಬಹುದು ಎಂದು ಊಹಿಸಿದ್ದಾರೆ.

‘ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಸಖತ್ ಆಗಿದೆ. ಶ್ರೀನಿ ಅವರ ಬಿಗಿಯಾದ ನಿರ್ದೇಶನ, ಶಿವಣ್ಣ ಅವರ ಮಾಸ್ ಲುಕ್ ಹಲವು ಬಾರಿ ಗೂಸ್​ಬಂಪ್ಸ್ ಕೊಡುತ್ತದೆ. ಘೋಸ್ಟ್​ಗೆ ಸೀಕ್ವೆಲ್ ಬರುವ ಸೂಚನೆಯನ್ನೂ ಕೊಡಲಾಗಿದೆ’ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ‘ಇದನ್ನು ನೋಡೋಕೆ ಅಮ್ಮ ಇಲ್ಲ ಅಂತ ದುಃಖವಾಯ್ತು’; ‘ಘೋಸ್ಟ್​’ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಭಾವುಕ

ಅನೇಕರು ಅರ್ಜುನ್ ಜನ್ಯ ಅವರ ಬಿಜಿಎಂನ ಹೊಗಳಿದ್ದಾರೆ. ಸಿನಿಮಾದ ಪ್ರತಿ ದೃಶ್ಯದ ತೂಕವನ್ನು ಬಿಜಿಎಂ ಹೆಚ್ಚಿಸಿದೆ ಎನ್ನುವ ಅಭಿಪ್ರಾಯ ಅನೇಕರಿಂದ ಸಿಕ್ಕಿದೆ. ದಸರಾ ಪ್ರಯುಕ್ತ ಸಾಲು ಸಾಲು ರಜೆಗಳಿವೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:09 am, Thu, 19 October 23