
‘ರಂಗಿತರಂಗ’ ಮೂಲಕ ದೊಡ್ಡ ಹಿಟ್ ಪಡೆದಿದ್ದ ನಿರ್ದೇಶಕ ಅನೂಪ್ ಭಂಡಾರಿ ಅವರ ಬತ್ತಳಿಕೆಯಿಂದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಮೂಡಿಬಂದಿದೆ. ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳಿಗೆ ಈ ಸಿನಿಮಾ ಸಖತ್ ಇಷ್ಟ ಆಗುತ್ತಿದೆ. ಮೊದಲ ದಿನವೇ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದು 3ಡಿ ಚಿತ್ರ ಎಂಬ ಕಾರಣಕ್ಕೆ ಹೈಪ್ ಹೆಚ್ಚಿದೆ. ಬೃಹತ್ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾದ ದೃಶ್ಯಗಳು 3ಡಿಯಲ್ಲಿ ಕಣ್ಮನ ಸೆಳೆಯುವಂತಿವೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ (Vikrant Rona Twitter Review) ಹಂಚಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಮಾತ್ರವಲ್ಲದೇ ಚಿತ್ರತಂಡದ ಅನೇಕರಿಗೆ ಮೆಚ್ಚುಗೆ ಸಿಗುತ್ತಿದೆ.
ಭಾರತ ಮಾತ್ರವಲ್ಲದೇ ಅನೇಕ ದೇಶಗಳಲ್ಲಿ ‘ವಿಕ್ರಾಂತ್ ರೋಣ’ ಬಿಡುಗಡೆ ಆಗಿದೆ. ದುಬೈನಲ್ಲಿ ಸಿನಿಮಾ ನೋಡಿದ ಅಭಿಮಾನಿಯೊಬ್ಬರು 5ಕ್ಕೆ 4.5 ಅಂಕ ನೀಡಿದ್ದಾರೆ. ಇದು ಸೂಪರ್ ಸಿನಿಮಾ ಎಂದು ಟ್ವಿಟರ್ನಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ‘3ಡಿ ಹೇಗಿದೆ’ ಎಂದು ಕೇಳಿದ್ದಾರೆ. ‘ತುಂಬ ಚೆನ್ನಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ’ ಎಂದು ಅವರು ಉತ್ತರಿಸಿದ್ದಾರೆ.
ಖಂಡಿತವಾಗಿಯೂ ‘ವಿಕ್ರಾಂತ್ ರೋಣ’ ಅತ್ಯುತ್ತಮ ಕಲೆಕ್ಷನ್ ಮಾಡಲಿದೆ ಎಂದು ಪ್ರೇಕ್ಷಕರೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ. ‘ಭಾರತದಿಂದ ಬಂದ ದಿ ಬೆಸ್ಟ್ 3ಡಿ ಸಿನಿಮಾ ಇದು. ಥ್ರಿಲ್ ಮತ್ತು ಸಸ್ಪೆನ್ಸ್ ಸೂಪರ್ ಆಗಿದೆ. ಕನ್ನಡ ಚಿತ್ರರಂಗ ಬೇರೆ ಹಂತಕ್ಕೆ ಹೋಗಿದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ’ ಎಂದು ಟ್ವೀಟ್ ಮಾಡಲಾಗಿದೆ.
‘ಇಂಟರೆಸ್ಟಿಂಗ್ ಆದ ಒಂದು ಕಥೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಸುದೀಪ್ ತುಂಬ ಚೆನ್ನಾಗಿ ನಟಿಸಿದ್ದಾರೆ. ಕೆಲವು ದೃಶ್ಯಗಳನ್ನು ಕತ್ತರಿಸಬಹುದಿತ್ತು. ಆದರೂ ಕೂಡ ಇದು ಒಂದು ಉತ್ತಮ ಸಿನಿಮಾ’ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಪರಭಾಷೆಯ ಅನೇಕ ಸೆಲೆಬ್ರಿಟಿಗಳು ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಶುಭ ಕೋರಿದ್ದಾರೆ. ರಾಜಮೌಳಿ, ಕಾರ್ತಿ ಮುಂತಾದವರು ಸುದೀಪ್ಗೆ ವಿಶ್ ಮಾಡಿದ್ದಾರೆ. ಮೊದಲ ದಿನ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ.
Published On - 10:40 am, Thu, 28 July 22