Gargi Twitter Review: ಹೇಗಿದೆ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರ? ಫಸ್ಟ್​ ಡೇ ಫಸ್ಟ್​ ಶೋ ನೋಡಿದವರ ವಿಮರ್ಶೆ ಇಲ್ಲಿದೆ..

Gargi Review: ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ‘ಗಾರ್ಗಿ’ ಸಿನಿಮಾ ತೆರೆಕಂಡಿದೆ. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

Gargi Twitter Review: ಹೇಗಿದೆ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರ? ಫಸ್ಟ್​ ಡೇ ಫಸ್ಟ್​ ಶೋ ನೋಡಿದವರ ವಿಮರ್ಶೆ ಇಲ್ಲಿದೆ..
ಸಾಯಿ ಪಲ್ಲವಿ
Edited By:

Updated on: Jul 15, 2022 | 11:15 AM

ನಟಿ ಸಾಯಿ ಪಲ್ಲವಿ (Sai Pallavi) ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ. ಅದಕ್ಕೆ ಕಾರಣ ‘ಗಾರ್ಗಿ’ ಸಿನಿಮಾಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ. ಹೌದು, ಇಂದು (ಜುಲೈ 15) ಈ ಚಿತ್ರ ಬಿಡುಗಡೆ ಆಗಿದೆ. ತಮಿಳು, ತೆಲುಗು ಮತ್ತು ಕನ್ನಡದಲ್ಲಿ ‘ಗಾರ್ಗಿ’ (Gargi Movie) ತೆರೆಕಂಡಿದೆ. ಈ ಮೂರು ಭಾಷೆಗಳಿಗೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್​ ಮಾಡಿದ್ದಾರೆ. ಸಾಯಿ ಪಲ್ಲವಿ ಅವರಿಗೆ ತಮಿಳು ಮತ್ತು ತೆಲುಗು ಹೊಸದಲ್ಲ. ಆದರೆ ಕನ್ನಡದಲ್ಲಿ ಅವರು ಡಬ್​ ಮಾಡಿದ್ದು ಇದೇ ಮೊದಲು. ತುಂಬ ಕಷ್ಟಪಟ್ಟು ಅವರು ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಆ ಕಾರಣದಿಂದಲೂ ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಬಹುತೇಕರು ಸೂಪರ್​ ಎನ್ನುತ್ತಿದ್ದಾರೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ವೀಕ್ಷಕರು ಟ್ವಿಟರ್​ ಮೂಲಕ ವಿಮರ್ಶೆ (Gargi Twitter Review) ಹಂಚಿಕೊಂಡಿದ್ದಾರೆ. ಅನೇಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ.

ಯಾವಾಗಲೂ ವಿಶೇಷವಾದ ಕಥಾಹಂದರ ಆಯ್ಕೆ ಮಾಡಿಕೊಳ್ಳುವ ಕಾರಣದಿಂದಲೇ ಸಾಯಿ ಪಲ್ಲವಿ ಅವರು ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಈ ಬಾರಿ ‘ಗಾರ್ಗಿ’ ಸಿನಿಮಾದಲ್ಲೂ ಅದು ಮರುಕಳಿಸಿದೆ. ಉತ್ತಮವಾದ ಕಥೆ, ಪ್ರತಿಭಾವಂತ ಕಲಾವಿದರ ನಟನೆ, ಬಿಗಿಯಾದ ಚಿತ್ರಕಥೆ ಇರುವುದರಿಂದ ಈ ಸಿನಿಮಾ ತಮಗೆ ಇಷ್ಟವಾಗಿದೆ ಎಂದು ಪ್ರೇಕ್ಷಕರು ಟ್ವೀಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Virata Parvam OTT Release: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?
Sai Pallavi: ಥಿಯೇಟರ್​ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್​ ಸ್ಟಾರ್​’ ಬಿರುದು ಈಗೇನಾಯ್ತು?
Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಜೂನ್​ 17ರಂದು ತೆರೆಕಂಡಿತ್ತು. ಚಿತ್ರಮಂದಿರದಲ್ಲಿ ಆ ಸಿನಿಮಾಗೆ ನಿರೀಕ್ಷಿತ ಮಟ್ಟದ ಗೆಲುವು ಸಿಗಲಿಲ್ಲ. ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್​ ಆಗಲಿಲ್ಲ. ಆದರೆ ನಂತರ ಒಟಿಟಿಯಲ್ಲಿ ರಿಲೀಸ್​ ಆಗಿ ಧೂಳೆಬ್ಬಿಸಿತು. ಈಗ ‘ಗಾರ್ಗಿ’ ಸಿನಿಮಾ ಚಿತ್ರಮಂದಿರದಲ್ಲೇ ಗೆಲ್ಲುವ ಸೂಚನೆ ಸಿಕ್ಕಿದೆ. ವಿಮರ್ಶಕರಿಂದಲೂ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

‘ಪ್ರತಿ ಬಾರಿಯೂ ಸಾಯಿ ಪಲ್ಲವಿ ಅವರು ತಮ್ಮ ಪಾತ್ರ ಮತ್ತು ಸ್ಕ್ರಿಪ್ಟ್​ನಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರನ್ನು ದೂಷಿಸುವವರಿಗೆ ‘ಗಾರ್ಗಿ’ ಚಿತ್ರವೇ ಸೂಕ್ತ ಪ್ರತಿಕ್ರಿಯೆ. ಈ ಸಿನಿಮಾವನ್ನು ಪ್ರೇಕ್ಷಕರು ಸೆಲೆಬ್ರೇಟ್​ ಮಾಡಬೇಕು’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ಕೋರ್ಟ್​ ರೂಮ್​ ಡ್ರಾಮಾ ಈ ಚಿತ್ರದಲ್ಲಿ ಇದೆ. ತಂದೆ-ಮಗಳ ಬಾಂಧವ್ಯದ ಕಥೆ ಚೆನ್ನಾಗಿದೆ. ಸಾಯಿ ಪಲ್ಲವಿ ನಟನೆ ಇಷ್ಟವಾಗುತ್ತದೆ. ನಿಧಾನಗತಿಯ ನಿರೂಪಣೆ ಇದ್ದರೂ ಚಿತ್ರಕಥೆ ಉತ್ತಮವಾಗಿದೆ’ ಎಂದು ಕೂಡ ಪ್ರೇಕ್ಷಕರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us