ನಾಗಾರ್ಜುನ ಫಿಟ್‌ನೆಸ್ ರಹಸ್ಯ: 35 ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸುತ್ತಿರುವ ರೂಲ್ಸ್ ಇದು

ಅರವತ್ತರ ಹರೆಯದಲ್ಲೂ ಯುವಕರಿಗೆ ಸವಾಲು ಹಾಕುವಂತೆ ಕಾಣುವ ಟಾಲಿವುಡ್ 'ಮನ್ಮಥ' ಅಕ್ಕಿನೇನಿ ನಾಗಾರ್ಜುನ ಅವರ ಫಿಟ್‌ನೆಸ್ ರಹಸ್ಯ ಇಲ್ಲಿದೆ. ಕ್ರ್ಯಾಶ್ ಡಯಟ್ ಮಾಡದೆ ಸಮತೋಲಿತ ಆಹಾರ ತಿನ್ನುವ, ಸಂಜೆ 7ರೊಳಗೆ ಡಿನ್ನರ್ ಮುಗಿಸುವ ಹಾಗೂ ಮೆಟಬಾಲಿಸಂ ಹೆಚ್ಚಿಸುವ ಇವರ ಸೂತ್ರಗಳು ನಿಜಕ್ಕೂ ಅದ್ಭುತ. ಕಳೆದ 35 ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸುತ್ತಿರುವ ಇವರ ಈ ಆರೋಗ್ಯಕರ ಲೈಫ್‌ಸ್ಟೈಲ್ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.

ನಾಗಾರ್ಜುನ ಫಿಟ್‌ನೆಸ್ ರಹಸ್ಯ: 35 ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸುತ್ತಿರುವ ರೂಲ್ಸ್ ಇದು
ನಾಗಾರ್ಜುನ
Edited By:

Updated on: Jul 13, 2026 | 7:55 AM

ಮುಖ್ಯಾಂಶಗಳು

  • ಕ್ರ್ಯಾಶ್ ಡಯಟ್‌ಗೆ ನೋ ಎಂದ ನಾಗಾರ್ಜುನ
  • ಇಲ್ಲಿದೆ ಹೊಟ್ಟೆ ತುಂಬುವ ಆಹಾರದ ಅಸಲಿ ರಹಸ್ಯ
  • ಸಂಜೆ 7 ಗಂಟೆಗೆ ಡಿನ್ನರ್ ಕ್ಲೋಸ್

ಟಾಲಿವುಡ್‌ನ ನಟ ಅಕ್ಕಿನೇನಿ ನಾಗಾರ್ಜುನ ಅವರ ಫಿಟ್‌ನೆಸ್ ಮತ್ತು ಎವರ್‌ಗ್ರೀನ್ ಲುಕ್ ಯಾವಾಗಲೂ ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ. ಅರವತ್ತರ ಹರೆಯದಲ್ಲೂ ಯುವಕರಿಗೂ ಪೈಪೋಟಿ ನೀಡುವಂತೆ ಕಾಣುವ ಅವರ ಸೌಂದರ್ಯದ ರಹಸ್ಯ ಮಾತ್ರ ಅದ್ಭುತ. ಹಿಂದೆ ತಮ್ಮ ‘ನಾ ಸಾಮಿ ರಂಗ’ ಸಿನಿಮಾದ ಪ್ರಚಾರದ ವೇಳೆ ನಾಗಾರ್ಜುನ ಅವರು ಹಂಚಿಕೊಂಡಿದ್ದ ಫಿಟ್‌ನೆಸ್ ಮತ್ತು ಡಯಟ್ ರಹಸ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿವೆ.

ಕೇವಲ ಸಿನಿಮಾದಲ್ಲಿ ಚೆಂದ ಕಾಣಲು ಮಾತ್ರವಲ್ಲದೆ, ದೈನಂದಿನ ಕೆಲಸಗಳನ್ನು ಸಕ್ರಿಯವಾಗಿ ಮಾಡಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ನಾಗಾರ್ಜುನ ನಂಬುತ್ತಾರೆ. ಅದಕ್ಕಾಗಿ ಅವರು ಕಳೆದ 35 ವರ್ಷಗಳಿಂದ ಪಾಲಿಸುತ್ತಿರುವ ನಿಯಮಗಳು ಇಲ್ಲಿವೆ:

ಡಯಟ್ ಹೆಸರಲ್ಲಿ ಹೊಟ್ಟೆ ಹಸಿದುಕೊಳ್ಳಲ್ಲ

ತಮ್ಮ ಆಹಾರ ಪದ್ಧತಿಯ ಬಗ್ಗೆ ಮಾತನಾಡಿರುವ ನಾಗಾರ್ಜುನ, ‘ನಾನು ಡಯಟ್ ಹೆಸರಿನಲ್ಲಿ ಎಂದಿಗೂ ಉಪವಾಸ ಇರಲ್ಲ. ಹೊಟ್ಟೆ ತುಂಬುವಷ್ಟು ಚೆನ್ನಾಗಿ ಊಟ ಮಾಡುತ್ತೇನೆ. ಆದರೆ ನಾನು ತಿನ್ನುವ ಆಹಾರ ಸಮತೋಲಿತವಾಗಿರುತ್ತದೆ’ ಎಂದಿದ್ದಾರೆ. ಅವರ ಮಧ್ಯಾಹ್ನದ ಊಟದಲ್ಲಿ ಬಿಳಿ ಅನ್ನದ ಬದಲು ಬ್ರೌನ್ ರೈಸ್ , ಸ್ವಲ್ಪ ತುಪ್ಪ, ಮೂರು ಬಗೆಯ ತರಕಾರಿಗಳು, ಚಿಕನ್ ಅಥವಾ ಫಿಶ್, ಮೊಸರು ಮತ್ತು ಚಟ್ನಿ ಖಡ್ಡಾಯವಾಗಿ ಇರುತ್ತವೆ.

ಸಂಜೆ 7 ಗಂಟೆಗೇ ಡಿನ್ನರ್ ಮುಕ್ತಾಯ

ನಾಗಾರ್ಜುನ ಅವರ ಫಿಟ್‌ನೆಸ್‌ನ ಅತಿ ದೊಡ್ಡ ಸೂತ್ರವೆಂದರೆ ಅವರ ರಾತ್ರಿಯ ಊಟದ ಸಮಯ. ಕಳೆದ ಹಲವು ವರ್ಷಗಳಿಂದ ಅವರು ಪ್ರತಿದಿನ ಸಂಜೆ 7 ಗಂಟೆಯ ಒಳಗಾಗಿ ತಮ್ಮ ರಾತ್ರಿಯ ಭೋಜನವನ್ನು ಮುಗಿಸುತ್ತಾರೆ. ಇದು ಅವರ ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಚಯಾಪಚಯ ಕ್ರಿಯೆ ಹೆಚ್ಚಿಸುವ ಮಾರ್ಗ

ಆಹಾರದ ಜೊತೆಗೆ ನಿಯಮಿತ ವ್ಯಾಯಾಮಕ್ಕೂ ನಾಗಾರ್ಜುನ ಅಷ್ಟೇ ಮಹತ್ವ ನೀಡುತ್ತಾರೆ. ‘ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ (ಮೆಟಬಾಲಿಸಂ) ಹೆಚ್ಚುತ್ತದೆ. ಇದರಿಂದಾಗಿ ನಾವು ಸುಮ್ಮನೆ ಕುಳಿತಿದ್ದರೂ ದೇಹದಲ್ಲಿ ಕ್ಯಾಲೊರಿಗಳು ಕರಗುತ್ತಿರುತ್ತವೆ’ ಎನ್ನುತ್ತಾರೆ ನಾಗಾರ್ಜುನ. ಈ ಫಿಟ್‌ನೆಸ್ ಸೂತ್ರವನ್ನು ಅವರು ಕಳೆದ 35 ವರ್ಷಗಳಿಂದ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ.

ನಾಗಾರ್ಜುನ ಅವರಿಗಿರುವ ಆ ಒಂದು ವಿಚಿತ್ರ ಅಭ್ಯಾಸ

ಇಷ್ಟೆಲ್ಲಾ ಕಟ್ಟುನಿಟ್ಟಿನ ಡಯಟ್ ಪಾಲಿಸುವ ಕಿಂಗ್ ನಾಗಾರ್ಜುನ ಅವರಿಗೆ ಒಂದು ಕೌತುಕದ ಅಭ್ಯಾಸವೂ ಇದೆ. ರಾತ್ರಿ ಮಲಗುವ ಮುನ್ನ ಅವರಿಗೆ ಸ್ವಲ್ಪ ಸಿಹಿ ತಿನ್ನುವ ಹಂಬಲವಿರುತ್ತದೆಯಂತೆ. ‘ನನಗೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಸಿಹಿ ತಿನ್ನದಿದ್ದರೆ ನಿದ್ದೆಯೇ ಬರುವುದಿಲ್ಲ’ ಎಂದು ಅವರು ತಮ್ಮ ಈ ವಿಚಿತ್ರ ಅಭ್ಯಾಸವನ್ನು ಹಂಚಿಕೊಂಡಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಸಲಹೆಗಳು ನಟನ ಹೇಳಿಕೆ ಆಧರಿಸಿವೆ. ಪ್ರತಿಯೊಬ್ಬರ ದೇಹದ ಪ್ರಕೃತಿ ಮತ್ತು ಆರೋಗ್ಯ ಸ್ಥಿತಿ ಭಿನ್ನವಾಗಿರುತ್ತದೆ. ಹಾಗಾಗಿ, ಯಾವುದೇ ಹೊಸ ಡಯಟ್ ಅಥವಾ ಫಿಟ್‌ನೆಸ್ ನಿಯಮಗಳನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞ ವೈದ್ಯರು ಅಥವಾ ಪ್ರಮಾಣೀಕೃತ ಡಯಟೀಷಿಯನ್ ಅವರ ಸಲಹೆ ಪಡೆಯುವುದು ಕಡ್ಡಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us