‘ನಾನು ಫ್ರಾಡ್ ಇರಬಹುದು, ಆದರೆ ನನ್ನದು ಶುದ್ಧ ಪ್ರೀತಿ’: ನವಾಜುದ್ದೀನ್ ಸಿದ್ದಿಕಿ

‘ನಾನು ಫ್ರಾಡ್ ಇರಬಹುದು. ನಾನು ಅನೇಕ ಬಾರಿ ಸುಳ್ಳುಗಳನ್ನು ಹೇಳಿರಬಹುದು. ಆದರೆ, ನನ್ನ ಪ್ರೀತಿ ಯಾವಾಗಲೂ ಶುದ್ಧ. ಕಣ್ಣುಗಳ ಮಧ್ಯೆ ಅರಳೋದು ಪ್ರೀತಿ’ ಎಂದಿದ್ದಾರೆ ನವಾಜುದ್ದೀನ್.

‘ನಾನು ಫ್ರಾಡ್ ಇರಬಹುದು, ಆದರೆ ನನ್ನದು ಶುದ್ಧ ಪ್ರೀತಿ’: ನವಾಜುದ್ದೀನ್ ಸಿದ್ದಿಕಿ
ನವಾಜುದ್ದೀನ್-ಶೆಹನಾಜ್ ಗಿಲ್

Updated on: May 22, 2023 | 8:16 AM

ನವಾಜುದ್ದೀನ್ ಸಿದ್ದಿಕಿ ಅವರು ನಟನೆ ಮೂಲಕ ಜನಮನ ಗೆದ್ದಿದ್ದಾರೆ. ಇದರಜೊತೆ ಅವರು ವಿವಾದಗಳ ಮೂಲಕ ಹೆಚ್ಚು ಸುದ್ದಿ ಆಗುತ್ತಿರುತ್ತಾರೆ. ಈಗ ನವಾಜುದ್ದೀನ್ ಸಿದ್ದಿಕಿ ಅವರು ಶೆಹನಾಜ್ ಗಿಲ್ (Shehnaaz Gill) ಅವರ ‘ದೇಸಿ ವೈಬ್ಸ್​’ ಶೋನಲ್ಲಿ ಭಾಗಿ ಆಗಿದ್ದಾರೆ. ಈ ಶೋನಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಪ್ರೀತಿ ವಿಚಾರದಲ್ಲಿ ಅವರು ಎಂದಿಗೂ ಮೋಸ ಮಾಡಿಲ್ಲವಂತೆ. ನವಾಜುದ್ದೀನ್ ಪತ್ನಿ ಇತ್ತೀಚೆಗೆ ಅವರ ವಿರುದ್ಧ ಕಿರುಕುಳದ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

‘ನಾನು ಫ್ರಾಡ್ ಇರಬಹುದು. ನಾನು ಅನೇಕ ಬಾರಿ ಸುಳ್ಳುಗಳನ್ನು ಹೇಳಿರಬಹುದು. ಆದರೆ, ನನ್ನ ಪ್ರೀತಿ ಯಾವಾಗಲೂ ಶುದ್ಧ. ಕಣ್ಣುಗಳ ಮಧ್ಯೆ ಅರಳೋದು ಪ್ರೀತಿ’ ಎಂದಿದ್ದಾರೆ ನವಾಜುದ್ದೀನ್. ಸದ್ಯ ಪ್ರೋಮೋ ಬಿಡುಗಡೆ ಆಗಿದ್ದು, ಅವರು ಆಡಿದ ಮಾತು ಗಮನ ಸೆಳೆಯುತ್ತಿದೆ.

‘ಸಾಕಷ್ಟು ದೂರ ಸಾಗಬೇಕು ಎಂದರೆ ಗಿಮಿಕ್ ಮಾಡಬಾರದು. ಬದಲಿಗೆ ಕಷ್ಟಪಡಬೇಕು. ನಾನು ಸ್ವಲ್ಪ ಗಿಮಿಕ್ ಮಾಡಿದ್ದೇನೆ’ ಎಂದು ನವಾಜುದ್ದೀನ್ ಒಪ್ಪಿಕೊಂಡಿದ್ದಾರೆ. ‘ನೀವು ಜೀವನದಲ್ಲಿ ಏನಾಗಬೇಕು ಎಂದುಕೊಂಡಿದ್ದೀರಿ’ ಎಂದು ನವಾಜುದ್ದೀನ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿರುವ ಶೆಹನಾಜ್​, ‘ಗಾಯನ, ನಟನೆ, ಫ್ಯಾಷನ್. ಇದೆಲ್ಲವನ್ನೂ ಮಿಕ್ಸ್​ ಮಾಡಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ಟಾಲಿವುಡ್​ಗೆ ನವಾಜುದ್ದೀನ್ ಸಿದ್ದಿಕಿ ಎಂಟ್ರಿ: ಲುಕ್ ಬಿಡುಗಡೆ ಮಾಡಿದ ಚಿತ್ರತಂಡ

ಸದ್ಯ ಈ ಪ್ರೋಮೋ ವೈರಲ್ ಆಗಿದೆ. ಶೆಹನಾಜ್ ಅಭಿಮಾನಿಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಪೂರ್ತಿ ಎಪಿಸೋಡ್ ನೋಡಲು ಕಾದಿದ್ದಾರೆ. ಶೆಹನಾಜ್ ಅವರು ‘ಬಿಗ್ ಬಾಸ್’ ಮೂಲಕ ಫೇಮಸ್ ಆದವರು. ಅವರು ಸಿದ್ದಾರ್ಥ್ ಶುಕ್ಲಾ ಜೊತೆ ಪ್ರೀತಿಯಲ್ಲಿದ್ದರು. ಆದರೆ, ಸಿದ್ದಾರ್ಥ್ ಹೃದಯಾಘಾತದಿಂದ ನಿಧನ ಹೊಂದಿದರು. ಆ ಬಳಿಕ ಶೆಹನಾಜ್ ತುಂಬಾನೇ ನೊಂದುಕೊಂಡಿದ್ದರು. ಈಗ ಅವರು ಕೆಲಸಕ್ಕೆ ಮರಳಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಅವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Mon, 22 May 23