ಒಟಿಟಿ ಕ್ಷೇತ್ರದಲ್ಲಿ ಇಂದು ಸ್ಪರ್ಧೆ ಜೋರಾಗಿದೆ. ಹಲವು ಪ್ಲಾಟ್ಫಾರ್ಮ್ಗಳು ಹೊಸ ಹೊಸ ಸೀರಿಸ್ ಹಾಗೂ ಸಿನಿಮಾಗಳ ಮೂಲಕ ಪ್ರೇಕ್ಷಕರ ಎದುರು ಬರುವ ಪ್ರಯತ್ನದಲ್ಲಿವೆ. ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಹಿಂದಿ ಹಾಗೂ ಇಂಗ್ಲಿಷ್ ಮಾತ್ರವಲ್ಲದೆ ದೇಶದ ಸ್ಥಳೀಯ ಭಾಷೆಯ ಸಿನಿಮಾಗಳಿಗೂ ಪ್ರಾಮುಖ್ಯತೆ ನೀಡುವ ಕೆಲಸ ಈ ಒಟಿಟಿ ಸಂಸ್ಥೆಯಿಂದ ಆಗುತ್ತಿದೆ. ಇತ್ತೀಚೆಗೆ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಿ ಬರೋಬ್ಬರಿ ಸೀರಿಸ್ ಹಾಗೂ ಸಿನಿಮಾ ಸೇರಿ 70 ಪ್ರಾಜೆಕ್ಟ್ಗಳನ್ನು ಪ್ರೈಮ್ ವಿಡಿಯೋ ಘೋಷಣೆ ಮಾಡಿದೆ.
ಮುಂದಿನ ಎರಡು ವರ್ಷಗಳಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುವ ಸೀರಿಸ್ ಹಾಗೂ ಸಿನಿಮಾಗಳ ಪಟ್ಟಿ ಬಿಡುಗಡೆ ಆಗಿದೆ. ಪ್ರಮುಖ ಸೀರಿಸ್ಗಳಾದ ‘ಪಂಚಾಯತ್ 3’, ‘ದಿ ಫ್ಯಾಮಿಲಿ ಮ್ಯಾನ್ 3’, ‘ಮಿರ್ಜಾಪುರ್ 3’ ಘೋಷಣೆ ಆಗಿವೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಕೂಡ ಥಿಯೇಟರ್ನಲ್ಲಿ ರಿಲೀಸ್ ಆದ ಬಳಿಕ ಒಟಿಟಿಗೆ ಲಗ್ಗೆ ಇಡಲಿದೆ. ಈ ಮೂಲಕ ಈಗಾಗಲೇ ಡೀಲ್ ಪೂರ್ಣಗೊಂಡಿದೆ.
70 ಪ್ರಾಜೆಕ್ಟ್ಗಳ ಪೈಕಿ 40 ಅಮೇಜಾನ್ ಒರಿಜಿನಲ್ ಸೀರಿಸ್ ಹಾಗೂ ಸಿನಿಮಾಗಳು ಇವೆ. ಉಳಿದ 29 ಸಿನಿಮಾಗಳು ಥಿಯೇಟರ್ನಲ್ಲಿ ರಿಲೀಸ್ ಆದ ಬಳಿಕ ಈ ಒಟಿಟಿ ಪ್ಲಾಟ್ಫಾರ್ಮ್ಗೆ ಬರಲಿವೆ. ಇದರಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಇದು ಒಳಗೊಂಡಿದೆ.
ಇದನ್ನೂ ಓದಿ: ಶೂಟಿಂಗ್ಗೂ ಮೊದಲೇ ನಡೆಯಿತು ‘ಕಾಂತಾರ: ಅಧ್ಯಾಯ 1’ ಒಟಿಟಿ ಬಿಸ್ನೆಸ್; ಮಾಹಿತಿ ನೀಡಿದ ಪ್ರೈಮ್ ವಿಡಿಯೋ
ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಜಗತ್ತಿನ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದೆ. ಒಳ್ಳೊಳ್ಳೆಯ ಕಂಟೆಂಟ್ಗಳನ್ನು ಇದು ನೀಡುತ್ತಿದೆ. ಸ್ಥಳೀಯ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಳೆದ ವರ್ಷ (2013) ಅಮೇಜಾನ್ ಪ್ರೈಮ್ನ ಕಂಟೆಂಟ್ಗಳನ್ನು ವಿಶ್ವದ 210 ದೇಶಗಳಲ್ಲಿ ವೀಕ್ಷಣೆ ಕಂಡಿವೆ. ವಿದೇಶದ ಕಂಟೆಂಟ್ಗಳನ್ನು ನಮ್ಮ ದೇಶದಲ್ಲಿ ಹಾಗೂ ನಮ್ಮ ದೇಶದ ಸಿನಿಮಾಗಳನ್ನು ವಿದೇಶದಲ್ಲಿ ನೋಡಲು ‘ಅಮೇಜಾನ್ ಪ್ರೈಮ್ ವಿಡಿಯೋ’ ಸಹಕಾರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ