ಶೂಟಿಂಗ್​ಗೂ ಮೊದಲೇ ನಡೆಯಿತು ‘ಕಾಂತಾರ: ಅಧ್ಯಾಯ 1’ ಒಟಿಟಿ ಬಿಸ್ನೆಸ್; ಮಾಹಿತಿ ನೀಡಿದ ಪ್ರೈಮ್ ವಿಡಿಯೋ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಸಣ್ಣ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ.

ಶೂಟಿಂಗ್​ಗೂ ಮೊದಲೇ ನಡೆಯಿತು ‘ಕಾಂತಾರ: ಅಧ್ಯಾಯ 1’ ಒಟಿಟಿ ಬಿಸ್ನೆಸ್; ಮಾಹಿತಿ ನೀಡಿದ ಪ್ರೈಮ್ ವಿಡಿಯೋ
ರಿಷಬ್
Follow us
ರಾಜೇಶ್ ದುಗ್ಗುಮನೆ
|

Updated on: Mar 21, 2024 | 12:25 PM

ಅಮೇಜಾನ್ ಪ್ರೈಮ್ (Amazon Prime Video) ವಿಡಿಯೋ ಇತ್ತೀಚೆಗೆ ದೊಡ್ಡ ಈವೆಂಟ್ ಒಂದನ್ನು ನಡೆಸಿದೆ. ಈ ಕಾರ್ಯಕ್ರಮದಲ್ಲಿ ಮುಂಬರುವ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ವೇಳೆ ‘ಕಾಂತಾರ: ಚಾಪ್ಟರ್ 1’ ಬಗ್ಗೆಯೂ ಮಾಹಿತಿ ನೀಡಲಾಯಿತು. ಈ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ವೇದಿಕೆ ಏರಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಈ ಚಿತ್ರದ ಶೂಟ್ ಆರಂಭಕ್ಕೂ ಮೊದಲೇ ಸಿನಿಮಾದ ಒಟಿಟಿ ಬಿಸ್ನೆಸ್ ನಡೆದಿದೆ ಎನ್ನಲಾಗುತ್ತಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಸಣ್ಣ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಒಟಿಟಿಯಲ್ಲೂ ಸಿನಿಮಾ ದಾಖಲೆ ಬರೆದಿದೆ. ಈಗ ‘ಕಾಂತಾರ: ಚಾಪ್ಟರ್ 1’ ಕೂಡ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗುವ ಬಗ್ಗೆ ಮಾಹಿತಿ ಸಿಕ್ಕಿದೆ.

ಅಮೇಜಾನ್ ಪ್ರೈಮ್ ವಿಡಿಯೋ

ಅಮೇಜಾನ್ ಪ್ರೈಮ್ ವಿಡಿಯೋ ಈವೆಂಟ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟರ್ ಹಂಚಿಕೊಂಡಿರುವ ಅಮೇಜಾನ್ ಪ್ರೈಮ್ ವಿಡಿಯೋದವರು, ‘ಥಿಯೇಟರ್​ನಲ್ಲಿ ರಿಲೀಸ್ ಆದ ಬಳಿಕ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಪಕ್ಕಾ ರಿಲೀಸ್ ಡೇಟ್ ತಿಳಿಸಿಲ್ಲ.

ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನೀವು ನಟಿಸಬಹುದು; ಅವಕಾಶದ ಬಾಗಿಲು ತೆರೆದ ಹೊಂಬಾಳೆ

‘ಕಾಂತಾರ: ಅಧ್ಯಾಯ 1’ರ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ. ಆಗಲೇ ಸಿನಿಮಾದ ಒಟಿಟಿಯಲ್ಲಿ ಬಿಸ್ನೆಸ್ ಮಾಡಿದೆ. ಅಮೇಜಾನ್ ಪ್ರೈಮ್ ವಿಡಿಯೋದವರು ಪಾತ್ರವರ್ಗದಲ್ಲಿ ರಿಷಬ್ ಜೊತೆ ಕಿಶೋರ್ ಕುಮಾರ್ ಹಾಗೂ ಅಚ್ಯುತ್ ಕುಮಾರ್ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಅವರು ನಟಿಸುತ್ತಿರುವ ವಿಚಾರ ಖಚಿತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ