Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನೀವು ನಟಿಸಬಹುದು; ಅವಕಾಶದ ಬಾಗಿಲು ತೆರೆದ ಹೊಂಬಾಳೆ

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಪಾತ್ರ ಮಾಡುತ್ತಿದ್ದಾರೆ. ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಪಾತ್ರಗಳ ಆಯ್ಕೆ ಪ್ರಕ್ರಿಯೆಗೆ ಹೊಂಬಾಳೆ ಫಿಲ್ಮ್ಸ್ ಚಾಲನೆ ನೀಡಿದೆ.

‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನೀವು ನಟಿಸಬಹುದು; ಅವಕಾಶದ ಬಾಗಿಲು ತೆರೆದ ಹೊಂಬಾಳೆ
ರಿಷಬ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 12, 2023 | 2:01 PM

‘ಕಾಂತಾರ: ಚಾಪ್ಟರ್ 1’ (Kantara Chapter 1) ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿತ್ತು. ರಿಷಬ್ ಶೆಟ್ಟಿ ಅವತಾರ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದರು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಿಷಬ್ ಶೆಟ್ಟಿ ಈ ಮೊದಲೇ ಘೋಷಣೆ ಮಾಡಿದ್ದರು. ಅವರು ಹೇಳಿದಂತೆ ನಡೆದುಕೊಂಡಿದ್ದಾರೆ. ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸೋಕೆ ಕಲಾವಿದರ ಅವಶ್ಯಕತೆ ಇದೆ. ಈ ಕುರಿತು ಕಾಲ್​ಫಾರ್ ಮಾಡಲಾಗಿದೆ. ಈ ಅವಕಾಶವನ್ನು ಪಡೆಯಬೇಕು ಎಂದು ಇಚ್ಛಿಸಿದವರಿಗೆ ವಯಸ್ಸಿನ ಮಿತಿ ಇದೆ.

‘ಕಾಂತಾರ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಈಗ ಈ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧವಾಗುತ್ತಿದೆ. 2024ರ ಆರಂಭದಲ್ಲಿ ಸಿನಿಮಾ ಕೆಲಸ ಪ್ರಾರಂಭ ಆಗಲಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ ಪಾತ್ರ ಮಾಡುತ್ತಿದ್ದಾರೆ. ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಪಾತ್ರಗಳ ಆಯ್ಕೆ ಪ್ರಕ್ರಿಯೆಗೆ ಹೊಂಬಾಳೆ ಫಿಲ್ಮ್ಸ್ ಚಾಲನೆ ನೀಡಿದೆ.

‘ಕಲಾವಿದರು ಬೇಕಾಗಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್ ಪೋಸ್ಟರ್ ಹಂಚಿಕೊಂಡಿದೆ. ಪುರುಷರ ವಯಸ್ಸು 30ರಿಂದ 60 ವರ್ಷ ಅಂತರದಲ್ಲಿ ಹಾಗೂ ಮಹಿಳೆಯರ ವಯಸ್ಸು 18ರಿಂದ 60 ವರ್ಷ ಅಂತರದಲ್ಲಿ ಇರಬೇಕು. ನೋಂದಣಿ ಮಾಡಲು kantara.film ಗೆ ಭೇಟಿ ನೀಡಬೇಕು. 14 ಡಿಸೆಂಬರ್​ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮತ್ತೊಂದು ವಿಶೇಷ ಸೂಚನೆಯನ್ನು ಕೂಡ ನೀಡಲಾಗಿದೆ. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ವಿಡಿಯೋಗಳಿದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಕಟ್ಟುನಿಟ್ಟಾಗಿ ಹೇಳಿದೆ.

ಇದನ್ನೂ ಓದಿ: ‘ಕಾಂತಾರ’ಕ್ಕೆ ಮತ್ತೊಂದು ಪ್ರಶಸ್ತಿಯ ಗರಿ, ಗೋವಾ ಸಿನಿಮೋತ್ಸವದಲ್ಲಿ ವಿಶೇಷ ಗೌರವ

‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ರಿಷಬ್ ಶೆಟ್ಟಿ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ‘ಕಾಂತಾರ’ ಚಿತ್ರದ ಕಥೆ ನಡೆಯುವುದಕ್ಕೂ ಮೊದಲು ಏನಾಗಿತ್ತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಫಸ್ಟ್ ಪೋಸ್ಟರ್ ಸಾಕಷ್ಟು ಗಮನ ಸೆಳೆದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Tue, 12 December 23

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್