ಒಟಿಟಿ ವ್ಯಾಪ್ತಿ ಹಿರಿದಾಗುತ್ತಿದೆ. ಇದಕ್ಕೆ ಯಾವುದೇ ಸೆನ್ಸಾರ್ (Sensor Board) ಪ್ರಕ್ರಿಯೆ ಇಲ್ಲದಿರುವುದರಿಂದ ಅಡಲ್ಟ್ ಕಂಟೆಂಟ್ಗಳ ಪ್ರಸಾರ ಕಾಣುತ್ತಿವೆ. ಹಲವು ಅಡಲ್ಟ್ ವೆಬ್ ಸೀರಿಸ್ಗಳು ವೀಕ್ಷಣೆಗೆ ಲಭ್ಯವಿದೆ. ಈ ರೀತಿ ನಟಿಸಿ ಫೇಮಸ್ ಆದ ಅನೇಕರಿದ್ದಾರೆ. ಕೆಲವರು ಬೋಲ್ಡ್ ಅವತಾರ ತಾಳೋಕೆ ಮಡಿವಂತಿಕೆ ತೋರಿಸುತ್ತಾರೆ. ಆದರೆ, ಕೆಲ ಹೀರೋಯಿನ್ಗಳು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆ ನಟಿಯರ ಬಗ್ಗೆ ಇಲ್ಲಿದೆ ವಿವರ.
‘ಗಂದಿ ಬಾತ್’ ‘ಹೂ ಈಸ್ ಯೂ ಡ್ಯಾಡಿ’ ಮೊದಲಾದ ವೆಬ್ ಸೀರಿಸ್ಗಳಲ್ಲಿ ನಟಿಸಿ ಅನ್ವೇಶಿ ಜೈನ್ ಫೇಮಸ್ ಆಗಿದ್ದಾರೆ. ಇವರನ್ನು ಸೋಶಿಯಲ್ ಮೀಡಿಯಾದಲ್ಲಿ 62 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಇವರ ಅಭಿಮಾನಿ ಬಳಗ ಹಿರಿದಾಗುತ್ತಿದೆ.
ಶಿಖಾ ಸಿನ್ಹಾ ಅವರು ಶಿಖಾ ಕುಮಾರಿ ಎಂದೂ ಫೇಮಸ್ ಆಗಿದ್ದಾರೆ. ‘ಯು ಟರ್ನ್’, ‘ಹಾಟ್ಸ್ಪಾಟ್’ ಮೊದಲಾದ ವೆಬ್ ಸೀರಿಸ್ಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಅವರು ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ.
ಏಕ್ತಾ ಕಪೂರ್ ನಿರ್ಮಾಣದ ‘XXX: ಅನ್ಸೆನ್ಸಾರ್ಡ್’ ವೆಬ್ ಸೀರಿಸ್ನಲ್ಲಿ ಥಿಯಾ ನಟಿಸಿದ್ದಾರೆ. ಇದು ಅತ್ಯಂತ ಬೋಲ್ಡ್ ವೆಬ್ ಸೀರಿಸ್ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ‘ರಾಗಿಣಿ ಎಂಎಂಎಸ್ ರಿಟರ್ನ್’ ಸೀರಿಸ್ನಲ್ಲೂ ಅವರು ನಟಿಸಿದ್ದಾರೆ.
ಅನುಪಮಾ ಪ್ರಕಾಶ್ ಅವರು ‘ರೀತಿ ರಿವಾಜ್’ ವೆಬ್ ಸರಣಿಯಲ್ಲಿ ತಾರಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ‘ಮೋಹಿನಿ’ ಸರಣಿಯಲ್ಲಿ ಮೋಹಿನಿ ಪಾತ್ರ ಮಾಡಿದರು. ಅಡಲ್ಟ್ ವೆಬ್ ಸೀರಿಸ್ ಲೋಕದಲ್ಲಿ ಇವರ ಹೆಸರು ಚಾಲ್ತಿಯಲ್ಲಿದೆ.
ಉಲ್ಲು ಆ್ಯಪ್ನ ಅತ್ಯಂತ ಬೋಲ್ಡ್ ವೆಬ್ ಸೀರಿಸ್ಗಳಲ್ಲಿ ಅಂಕಿತಾ ನಟಿಸಿದ್ದಾರೆ. ಎಕ್ಸ್ ರೇಟೆಡ್ ಶೋಗಳಲ್ಲಿ ಅಂಕಿತಾ ಕಾಣಿಸಿಕೊಂಡಿದ್ದಾರೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 50 ಲಕ್ಷ ಮಂದಿ ಹಿಂಬಾಲಿಸುತ್ತಾರೆ.
‘ಗಂದಿ ಬಾತ್’ ಸೀರಿಸ್ನಲ್ಲಿ ನೇಹಲ್ ವಡೋಲಿಯಾ ಅವರು ಬಣ್ಣ ಹಚ್ಚಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.
‘ಗಂದಿ ಬಾತ್’, ‘ವರ್ಜಿನ್ ಭಾಸ್ಕರ್’, ‘ಚರ್ಮ್ಸುಖ್’ ಮೊದಲಾದ ವೆಬ್ ಸೀರಿಸ್ಗಳಲ್ಲಿ ನಟಿಸಿ ರೂಬಿ ಭಾರಜ್ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ.
ಇದನ್ನೂ ಓದಿ: ದಕ್ಷಿಣದ ಈ ಟಾಪ್ ಹೀರೋಯಿನ್ಗಳು ಪಡೆದ ಶಿಕ್ಷಣದ ಬಗ್ಗೆ ಇಲ್ಲಿದೆ ಮಾಹಿತಿ..
ಲಿರಾ ಸೋನಿ ಅಡಲ್ಟ್ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟು ಸಾಕಷ್ಟನ್ನು ಕಳೆದುಕೊಂಡಿದ್ದಾರೆ. 2021ರಲ್ಲಿ ಅವರು ಬೋಲ್ಡ್ ವೆಬ್ ಸೀರಿಸ್ ಒಂದರಲ್ಲಿ ನಟಿಸಿದ್ದರು. ಇದರಿಂದ ಅವರ ಕುಟುಂಬಕ್ಕೆ ಬೇಸರ ಆಯಿತು. ಬಾಯ್ಫ್ರೆಂಡ್ ಬಿಟ್ಟು ಹೋದರು. ಅವರನ್ನು ಪೋರ್ನ್ಸ್ಟಾರ್ ಎಂದು ಅನೇಕರು ಬಣ್ಣಿಸಿದರು. ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು.
ಮಾನ್ವಿ ಅವರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಯೇ ಹೇ ಮೊಹಾಬತ್ತೇ’, ‘ದೇವ್ ಆನಂದ್’, ‘ಚಂದ್ರಕಾಂತ್’ ಮೊದಲಾದ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಚರ್ಮ್ಸುಖ್’ ವೆಬ್ ಸೀರಿಸ್ನಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡರು.
ನಟಿ ಹಾಗೂ ಮಾಡೆಲ್ ಕಸ್ತೂರಿ ಚೆತ್ರಿ ‘ಚರ್ಮ್ಸುಖ್’, ‘ಲವ್ ಒಕೆ ಪ್ಲೀಸ್’ ಮೊದಲಾದ ಸರಣಿಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ