‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭ ಆಗಿದೆ. ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸುದೀಪ್ ಅವರು ಈ ಶೋಅನ್ನು ನಡೆಸಿಕೊಡುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ (Aryavardhan Guruji) ಅವರು ‘ಬಿಗ್ ಬಾಸ್ ಒಟಿಟಿ’ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಖ್ಯಾಶಾಸ್ತ್ರದ ಮೂಲಕ ಗಮನ ಸೆಳೆದವರು ಆರ್ಯವರ್ಧನ್ ಗುರೂಜಿ. ಅವರು ಮೊದಲ ದಿನವೇ ವೇದಿಕೆ ಏರಿದಾಗ ಗೆಲ್ಲೋರು ಯಾರು ಎಂಬುದನ್ನು ಪ್ರಿಡಿಕ್ಟ್ ಮಾಡಿ ಸುದೀಪ್ ಎದುರು ಹೇಳಿದ್ದಾರೆ. ಇದನ್ನು ಕೇಳಿ ಸುದೀಪ್ ಅಚ್ಚರಿ ಹೊರ ಹಾಕಿದ್ದಾರೆ.
ಆರ್ಯವರ್ಧನ್ ಗುರೂಜಿ ಸಾಕಷ್ಟು ಫೇಮಸ್. ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯ ಹೇಳುತ್ತಾರೆ ಆರ್ಯವರ್ಧನ್. ಅವರು ಐಪಿಎಲ್ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ತೆರಳಿ ಯಾವ ತಂಡ ಗೆಲ್ಲುತ್ತದೆ, ಯಾವ ತಂಡ ಸೋಲುತ್ತದೆ ಎಂಬುದನ್ನು ಊಹಿಸಿ ಹೇಳುತ್ತಿದ್ದರು. ಅವರ ಪ್ರಿಡಿಕ್ಷನ್ ಅನೇಕ ಬಾರಿ ತಪ್ಪಾಗಿದೆ. ಈ ವಿಚಾರ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ ಅವರು ಈಗ ಬಿಗ್ ಬಾಸ್ ಮೂಲಕ ಮನರಂಜನೆ ನೀಡಲಿದ್ದಾರೆ.
ಸುದೀಪ್ ಜತೆ ‘ಬಿಗ್ ಬಾಸ್’ ವೇದಿಕೆ ಏರಿದ ಆರ್ಯವರ್ಧನ್ ಅವರು, ಹಲವು ವಿಚಾರ ಹಂಚಿಕೊಂಡರು. ‘ನನ್ನ ಸಂಖ್ಯಾಶಾಸ್ತ್ರ ಎಂದಿಗೂ ತಪ್ಪಾಗಿಲ್ಲ. ನಾನು ಹೇಳಿದ್ದನ್ನೇ ಮಾಡುತ್ತೇನೆ, ಮಾಡಿದ್ದನ್ನೇ ಹೇಳುತ್ತೇನೆ. ನಾನು ಗೌಡ. ನನ್ನ ಹಾಗೆ ಬಿರಿಯಾನಿ ಯಾರ ಬಳಿಯೂ ಮಾಡೋಕೆ ಸಾಧ್ಯವಿಲ್ಲ’ ಎಂದರು ಆರ್ಯವರ್ಧನ್.
ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ’ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ
ಈ ಬಾರಿ ‘ಬಿಗ್ ಬಾಸ್’ ಯಾರು ಗೆಲ್ಲಲಿದ್ದಾರೆ? ಇದನ್ನು ಸಂಖ್ಯಾಶಾಸ್ತ್ರದ ಮೂಲಕ ಹೇಳಿ ಎಂಬ ಪ್ರಶ್ನೆಯನ್ನು ಸುದೀಪ್ ಅವರು ಆರ್ಯವರ್ಧನ್ ಅವರಿಗೆ ಕೇಳಿದರು. ‘6ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರುವ ವ್ಯಕ್ತಿಗೆ ಗೆಲ್ಲುವ ಸಾಧ್ಯತೆ ಹೆಚ್ಚು. 3,5ಈ ಸಂಖ್ಯೆಯವರಿಗೂ ಗೆಲ್ಲುವ ಸಾಧ್ಯತೆ ಇದೆ’ ಎಂದಿದ್ದಾರೆ ಆರ್ಯವರ್ಧನ್.