Brahmastra: ಸೂಪರ್​ ಹಿಟ್​ ಆದ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ?

| Updated By: ಮದನ್​ ಕುಮಾರ್​

Updated on: Sep 29, 2022 | 8:32 AM

Brahmastra OTT Release Date: ‘ಬ್ರಹ್ಮಾಸ್ತ್ರ’ ಚಿತ್ರದ ಒಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ದಸರಾ ಹಬ್ಬದ ಈ ಸಮಯದಲ್ಲಿ ನಿರ್ಮಾಪಕರ ಪ್ಲ್ಯಾನ್​ ಬೇರೆಯೇ ಇದೆ.

Brahmastra: ಸೂಪರ್​ ಹಿಟ್​ ಆದ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ?
ರಣಬೀರ್
Follow us on

ಬಾಲಿವುಡ್​ ಸಿನಿಮಾಗಳು ಸತತ ಸೋಲು ಕಾಣುತ್ತಿರುವಾಗ ‘ಬ್ರಹ್ಮಾಸ್ತ್ರ’ (Brahmastra) ಚಿತ್ರ ಮ್ಯಾಜಿಕ್ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್​ ಆಗಿದೆ. ರಣಬೀರ್​ ಕಪೂರ್ (Ranbir Kapoor)​ ಅವರ ವೃತ್ತಿಜೀವನಕ್ಕೆ ಮತ್ತೊಂದು ಸೂಪರ್​ ಹಿಟ್​ ಚಿತ್ರ ಸೇರ್ಪಡೆ ಆದಂತೆ ಆಗಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಆಲಿಯಾ ಭಟ್​ (Alia Bhatt) ನಟಿಸಿದ್ದಾರೆ. ರಿಯಲ್​ ಲೈಫ್​ನಲ್ಲಿ ಪತಿ-ಪತ್ನಿ ಆಗಿರುವ ಅವರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಎಂಬ ಕಾರಣಕ್ಕೂ ಅಭಿಮಾನಿಗಳು ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪ್ರೀತಿ ತೋರಿಸಿದ್ದಾರೆ. ಥಿಯೇಟರ್​ನಲ್ಲಿ ಭಾರಿ ಯಶಸ್ಸು ಕಂಡು ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗುವುದು ಯಾವಾಗ ಎಂದು ಸಿನಿಪ್ರಿಯರು ಕೇಳುತ್ತಿದ್ದಾರೆ. ಮೂಲಗಳ ಪ್ರಕಾರ ಅಕ್ಟೋಬರ್​ 2ನೇ ವಾರದಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಗೆ ಕಾಲಿಡಲಿದೆ.

ಈ ಸಿನಿಮಾಗೆ ಅಯಾನ್​ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಫ್ಯಾಂಟಸಿ ಕಥೆ ಇರುವ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಕಳಪೆ ಗ್ರಾಫಿಕ್ಸ್ ಇದೆ ಎಂಬ ಟೀಕೆ ಕೂಡ ಎದುರಾಯ್ತು. ಹಾಗಿದ್ದರೂ ಕೂಡ ಬಾಕ್ಸ್​ ಆಫೀಸ್​ ಗಳಿಕೆಯ ಮೇಲೆ ಈ ನೆಗೆಟಿವ್​ ಅಂಶಗಳು ಪರಿಣಾಮ ಬೀರಲೇ ಇಲ್ಲ. ಎಲ್ಲ ಭಾಷೆಗಳಿಂದಲೂ ಸೇರಿ 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ.

ಒಂದು ವರ್ಗದ ಪ್ರೇಕ್ಷಕರು ಒಟಿಟಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಕ್ಕಿಂತಲೂ ಒಟಿಟಿ ಮೂಲಕವೇ ನೋಡಿ ಎಂಜಾಯ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಥಿಯೇಟರ್​ನಲ್ಲಿ ಯಾವುದೇ ಹೊಸ ಚಿತ್ರ ರಿಲೀಸ್ ಆದರೂ ಅದು ಒಟಿಟಿಗೆ ಬಂದಾಗಲೇ ನೋಡ್ತೀವಿ ಎನ್ನುವಂತಹ ಪ್ರೇಕ್ಷಕರು ಈಗ ‘ಬ್ರಹ್ಮಾಸ್ತ್ರ’ ಚಿತ್ರದ ಒಟಿಟಿ ಸ್ಟ್ರೀಮಿಂಗ್ ಯಾವಾಗ ಎಂದು ಕೇಳುತ್ತಿದ್ದಾರೆ.

ಇದನ್ನೂ ಓದಿ
ಟಿಕೆಟ್​ ದರ ಕಡಿಮೆ ಮಾಡಿದ್ದಕ್ಕೆ ಕೋಟಿಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಸಿನಿಮಾ; ಉಳಿದ ಚಿತ್ರಗಳ ಕಥೆ ಏನು?
ಮಿತಿ ಮೀರಿದ ಬಜೆಟ್​; ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಸಂಭಾವನೆಯನ್ನೇ ಪಡೆದಿಲ್ಲ ರಣಬೀರ್ ಕಪೂರ್
ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಹಿಂದಿಕ್ಕಲಿದೆ ‘ಬ್ರಹ್ಮಾಸ್ತ್ರ’ ಸಿನಿಮಾ; ಸೈಲೆಂಟ್ ಆಯ್ತು ಬಾಯ್ಕಾಟ್ ಟ್ರೆಂಡ್
Brahmastra Box Office Collection: ಸೋಮವಾರದ ಪರೀಕ್ಷೆಯಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಪಾಸ್​ ಆಯ್ತಾ?

ಇದು ದಸರಾ ಹಬ್ಬದ ಸೀಸನ್​. ಹಬ್ಬದ ರಜೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರು ಇದ್ದಾರೆ. ಅನೇಕ ಚಿತ್ರಮಂದಿರಗಳಲ್ಲಿ ‘ಬ್ರಹ್ಮಾಸ್ತ್ರ’ ಇನ್ನೂ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಈ ಟೈಮ್​ನಲ್ಲಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕೊಂಚ ಹೆಚ್ಚಾಗುವ ನಿರೀಕ್ಷೆ ಇದೆ. ಆದ್ದರಿಂದ ಅಕ್ಟೋಬರ್​ 2ನೇ ವಾರದವರೆಗೂ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್​ ಮಾಡೋದು ಬೇಡ ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, ಅಕ್ಕಿನೇನಿ ನಾಗಾರ್ಜುನ ಅವರಂತಹ ಹಿರಿಯ ಕಲಾವಿದರು ನಟಿಸಿದ್ದಾರೆ. ಮೌನಿ ರಾಯ್​ ಅವರು ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಮಾಡಿರುವ ಅತಿಥಿ ಪಾತ್ರ ಕೂಡ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:32 am, Thu, 29 September 22