ಈ ನಟ ಒಂದು ಸಿನಿಮಾಗೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 744 ಕೋಟಿ ರೂಪಾಯಿ

| Updated By: ರಾಜೇಶ್ ದುಗ್ಗುಮನೆ

Updated on: Aug 20, 2021 | 9:52 PM

ಬಾಂಡ್​ ಸಿನಿಮಾಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಡ್ಯಾನಿಯಲ್​ ಕ್ರೇಗ್​ ‘ನೈವ್ಸ್​ ಔಟ್’​ ಸೀಕ್ವೆಲ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿಯಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ನಟ ಒಂದು ಸಿನಿಮಾಗೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 744 ಕೋಟಿ ರೂಪಾಯಿ
ಈ ನಟ ಒಂದು ಸಿನಿಮಾಗೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 744 ಕೋಟಿ ರೂಪಾಯಿ!
Follow us on

ಹಾಲಿವುಡ್​ ಸಿನಿಮಾಗಳ ವ್ಯಾಪ್ತಿ ತುಂಬಾನೇ ಹಿರಿದಾಗಿದೆ. ಸ್ಟಾರ್​ ನಟರ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್​ ಮಾಡುತ್ತವೆ. ಈ ಕಾರಣಕ್ಕೆ ಸಿನಿಮಾ ಬಜೆಟ್​ ಕೂಡ ದೊಡ್ಡದಾಗಿಯೇ ಇರುತ್ತದೆ. ಈಗ ಹಾಲಿವುಡ್​ ಹೀರೋನ ಸಂಭಾವನೆ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಏಕೆಂದರೆ, ಸಿನಿಮಾವೊಂದಕ್ಕೆ ಈ ಹೀರೋ ಪಡೆದಿರುವುದು ಬರೋಬ್ಬರಿ 744 ಕೋಟಿ ರೂಪಾಯಿ!

ಹೌದು, ಬಾಂಡ್​ ಸಿನಿಮಾಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಡ್ಯಾನಿಯಲ್​ ಕ್ರೇಗ್​ ‘ನೈವ್ಸ್​ ಔಟ್’​ ಸೀಕ್ವೆಲ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿಯಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸೋಕೆ 100 ಮಿಲಿಯನ್​ ಡಾಲರ್​ ಕೇಳಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ 744 ಕೋಟಿ ರೂಪಾಯಿ ಆಗಲಿದೆ. ನೆಟ್​ಫ್ಲಿಕ್ಸ್​ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.

ಡ್ವೇನ್ ಜಾನ್ಸನ್ ಕೂಡ ಸಂಭಾವನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅವರು ಕೂಡ ದೊಡ್ಡ ಮೊತ್ತದ ಸಂಭಾವನೆ ಜೇಬಿಗೆ ಇಳಿಸಿಕೊಂಡಿದ್ದಾರೆ. ಅಮೇಜಾನ್​ ಪ್ರೈಮ್​ ನಿರ್ಮಾಣ ಮಾಡುತ್ತಿರುವ ‘ರೆಡ್​ ಒನ್​’ ಸಿನಿಮಾಗೆ ಅವರು 50 ಮಿಲಿಯನ್​ ಡಾಲರ್ ಅಂದರೆ 372 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ.

ಕೊವಿಡ್​ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ವಿಸ್ತರಣೆ ಆಗಿದೆ. ಸಾಕಷ್ಟು ಸಿನಿಮಾಗಳು ಒಟಿಟಿ ಮೊರೆ ಹೋಗುತ್ತಿವೆ. ಚಿತ್ರಮಂದಿರಗಳು ಸರಿಯಾಗಿ ತೆರೆಯದೇ ಇರುವ ಕಾರಣ, ಒಟಿಟಿ ಪ್ಲಾಟ್​ಫಾರ್ಮ್​ಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿವೆ. ಹೀಗಾಗಿ, ದೊಡ್ಡ ಬಜೆಟ್​ ಚಿತ್ರಗಳನ್ನು ಕೂಡ ನಿರ್ಮಾಣ ಮಾಡೋಕೆ ನೆಟ್​ಫ್ಲಿಕ್ಸ್​ ಹಾಗೂ ಅಮೇಜಾನ್​ ಪ್ರೈಮ್​ ಸೇರಿ ಸಾಕಷ್ಟು ಒಟಿಟಿ ಪ್ಲಾಟ್​ಫಾರ್ಮ್​ಗಳು ಮುಂದೆ ಬಂದಿವೆ.

ಇದನ್ನೂ ಓದಿ: ‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್​ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್​ ವಿಷಯಗಳು

KGF 2 ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟ; ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

Published On - 9:49 pm, Fri, 20 August 21