
ದೀಪಿಕಾ ಪಡುಕೋಣೆ (Deepika Padukone) , ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ಮೊದಲಾದವರು ನಟಿಸಿರುವ ‘ಗೆಹರಾಯಿಯಾ’ ಸಿನಿಮಾ (Gehraiyaan Movie) ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆಧುನಿಕ ಜಗತ್ತಿನ ಗೊಂದಲಮಯ ಮನಸ್ಸುಗಳ ಬಗ್ಗೆ ನಿರ್ದೇಶಕ ಶಕುನ್ ಭಾತ್ರ ಹೇಳಿದ ಕಥೆ ಅನೇಕರಿಗೆ ಇಷ್ಟವಾಗಿಲ್ಲ. ಕೆಲವರು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಅದ್ಭುತವಾಗಿದೆ ಸಿನಿಮಾ ಎಂದು ಕೊಂಡಾಡಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ಮೀಮ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೆಲವರು ಈ ಚಿತ್ರವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ವಿಚಿತ್ರ ಎಂದರೆ ಸ್ವತಃ ಧರ್ಮ ಪ್ರೊಡಕ್ಷನ್ (Dharma Production) ಅವರು ಈ ಚಿತ್ರದ ಬಗ್ಗೆ ಟೀಕೆ ಮಾಡಿದ್ದಾರೆ! ಸದ್ಯ, ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಟೀಕೆ ಮಾಡೋಕೆ ಟ್ರೋಲಿಗರಿಗೆ ಮತ್ತಷ್ಟು ಸರಕು ಸಿಕ್ಕಂತಾಗಿದೆ.ದನ್ನು ಮಾಡಿಕೊಂಡಿದೆ.
‘ಗೆಹರಾಯಿಯಾ’ ಚಿತ್ರವನ್ನು ಟೀಕಿಸಿ ಓರ್ವ ಟ್ವೀಟ್ ಒಂದನ್ನು ಮಾಡಿದ್ದ. ಸಿನಿಮಾ ನೋಡಿದ ನಂತರದಲ್ಲಿ ಮಿದುಳು ಹಾಳಾಯಿತು ಎಂಬರ್ಥ ಬರುವ ರೀತಿಯಲ್ಲಿ ಈ ಟ್ವೀಟ್ ಇತ್ತು. ಇದನ್ನು ಧರ್ಮ ಪ್ರೊಡಕ್ಷನ್ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿತ್ತು. ಅರ್ಧ ಗಂಟೆಗೂ ಅಧಿಕ ಕಾಲ ಈ ಸ್ಟೇಟಸ್ ಹಾಗೆಯೇ ಇತ್ತು. ತಪ್ಪಿನ ಅರಿವಾದ ನಂತರದಲ್ಲಿ ಇದನ್ನು ಡಿಲೀಟ್ ಮಾಡಲಾಗಿದೆ.
ಈ ಘಟನೆ ಬಳಿಕ ‘ಗೆಹರಾಯಿಯಾ’ಚಿತ್ರವನ್ನು ಮತ್ತಷ್ಟು ಟ್ರೋಲ್ ಮಾಡಲಾಗುತ್ತಿದೆ. ದೀಪಿಕಾ ಹಾಗೂ ಅನನ್ಯಾ ಅವರನ್ನು ಮಾತ್ರ ಹೈಲೈಟ್ ಮಾಡಲಾಗುತ್ತಿದೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ದೀಪಿಕಾ ಈ ಬಗ್ಗೆ ಯಾವುದೇ ನೆಗೆಟಿವ್ ಕಮೆಂಟ್ಗಳನ್ನು ಹಂಚಿಕೊಳ್ಳುತ್ತಿಲ್ಲ. ಅವರು ಈ ಸಿನಿಮಾ ಬಗ್ಗೆ ಸಂತಸ ಹೊಂದಿದ್ದಾರೆ.
ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ
‘ಬಿಗ್ ಬಾಸ್ 15’ ಫಿನಾಲೆಯಲ್ಲಿ ಶಮಿತಾ ಶೆಟ್ಟಿ; ವಿನ್ನರ್ ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿರೋದು ಯಾರೆಲ್ಲ?