ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾಗೆ 155 ಕೋಟಿ ರೂಪಾಯಿ ಒಟಿಟಿ ಡೀಲ್​?

|

Updated on: Jan 18, 2024 | 11:29 AM

‘ಆರ್​ಆರ್​ಆರ್​’ ಸಿನಿಮಾದಿಂದ ಜೂನಿಯರ್​ ಎನ್​ಟಿಆರ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೆಚ್ಚಿತು. ಹಾಗಾಗಿ ಅವರು ನಟಿಸುತ್ತಿರುವ ಮುಂದಿನ ಸಿನಿಮಾದ ಮೇಲೆ ಭಾರಿ ಕೌತುಕ ಮೂಡಿದೆ. ‘ದೇವರ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ಸಂಸ್ಥೆ ಭಾರಿ ಮೊತ್ತಕ್ಕೆ ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾಗೆ 155 ಕೋಟಿ ರೂಪಾಯಿ ಒಟಿಟಿ ಡೀಲ್​?
ಜಾನ್ವಿ ಕಪೂರ್​, ಜೂನಿಯರ್​ ಎನ್​ಟಿಆರ್​
Follow us on

ನಟ ಜೂನಿಯರ್​ ಎನ್​ಟಿಆರ್​ (Jr NTR) ಅವರು ಈಗ ‘ದೇವರ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವು ಕಾರಣದಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಸದ್ಯಕ್ಕೆ ಈ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಅಷ್ಟರಲ್ಲಾಗಲೇ ಒಟಿಟಿ (OTT) ಪ್ಲಾಟ್​ಫಾರ್ಮ್​ಗಳ ಕಡೆಯಿಂದ ಬೇಡಿಕೆ ಬಂದಿದೆ. ಒಂದು ಮಾಹಿತಿಯ ಪ್ರಕಾರ ಬರೋಬ್ಬರಿ 155 ಕೋಟಿ ರೂಪಾಯಿಗೆ ದೇವರ’ (Devara) ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಆದರೂ ಕೂಡ ಕೆಲವು ಮಾಧ್ಯಮಗಳು ಹೀಗೊಂದು ಸುದ್ದಿ ಪ್ರಕಟ ಮಾಡಿದೆ.

‘ಆರ್​ಆರ್​ಆರ್​’ ಸಿನಿಮಾದಿಂದ ಜೂನಿಯರ್​ ಎನ್​ಟಿಆರ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೆಚ್ಚಿತು. ಅವರು ಹೆಜ್ಜೆ ಹಾಕಿದ ‘ನಾಟು ನಾಟು..’ ಹಾಡು ಆಸ್ಕರ್ ಕೂಡ ಗೆದ್ದಿತು. ಈ ಎಲ್ಲ ಕಾರಣದಿಂದಾಗಿ ಜೂನಿಯರ್​ ಎನ್​ಟಿಆರ್​ ನಟಿಸುತ್ತಿರುವ ಮುಂದಿನ ಸಿನಿಮಾದ ಮೇಲೆ ಭಾರಿ ಕೌತುಕ ಮೂಡಿದೆ. ‘ದೇವರ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ಸಂಸ್ಥೆ ಖರೀದಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಕ್ತದ ಸಮುದ್ರದಲ್ಲಿ ಆಯುಧ ತೊಳೆದ ಜೂನಿಯರ್​ ಎನ್​ಟಿಆರ್​; ಹೇಗಿದೆ ‘ದೇವರ’ ಗ್ಲಿಂಪ್ಸ್​?

‘ದೇವರ’ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿದೆ. ತೆಲುಗಿನ ಜೊತೆ ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಈ ಎಲ್ಲ ಭಾಷೆಯ ಪ್ರಸಾರ ಹಕ್ಕುಗಳನ್ನು ಸೇರಿ ಒಟ್ಟು 155 ಕೋಟಿ ರೂಪಾಯಿಗೆ ಡೀಲ್​ ನಡೆದಿದೆ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತಕ್ಕೆ ವ್ಯವಹಾರ ಕುದುರಿರುವುದು ನಿಜವೇ ಆಗಿದ್ದರೆ ನಿರ್ಮಾಪಕರು ಚಿತ್ರದ ಬಿಡುಗಡೆಗೂ ಮುನ್ನವೇ ಸೇಫ್​ ಆದಂತೆ ಆಗಲಿದೆ.

ಇದನ್ನೂ ಓದಿ: ‘ನಾನು ಸುರಕ್ಷಿತವಾಗಿ ಮರಳಿದ್ದೇನೆ’; ಜಪಾನ್​ನಿಂದ ಹಿಂದಿರುಗಿ ಟ್ವೀಟ್ ಮಾಡಿದ ಜೂ. ಎನ್​ಟಿಆರ್

ಒಟಿಟಿ ವ್ಯವಹಾರ ಮುಗಿದಿದೆ ಎಂದಮಾತ್ರಕ್ಕೆ ‘ದೇವರ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆ ಎಂಬ ಅರ್ಥವಲ್ಲ. ಈ ಚಿತ್ರ ಏಪ್ರಿಲ್​ 5ರಂದು ಥಿಯೇಟರ್​ನಲ್ಲಿ ತೆರೆಕಾಣಲಿದೆ. ಬಳಿಕ 56 ದಿನಗಳು ಕಳೆದ ನಂತರವೇ ಒಟಿಟಿಯಲ್ಲಿ ಪ್ರಸಾರ ಮಾಡಬೇಕು ಎಂಬ ನಿಯಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆಯಂತೆ. ಈ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್​ ನಟಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಇದರ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ