
ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಅದನ್ನು ಖರೀದಿಸಲು ಒಟಿಟಿ ಸಂಸ್ಥೆಗಳು ರೆಡಿ ಇರುತ್ತವೆ. ಆದರೆ, ಸಣ್ಣ ಬಜೆಟ್ ಚಿತ್ರಗಳು ಎಂದರೆ ಒಟಿಟಿ ಸಂಸ್ಥೆಗಳು ನಿರ್ಲಕ್ಷ್ಯ ತೋರಿಸುತ್ತವೆ. ‘ತೀರ್ಥ ರೂಪ ತಂದೆಯವರಿಗೆ’ (Theertharoopa Tandeyavarige) ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗಿ ವಿಮರ್ಶೆಯಲ್ಲಿ ಗೆದ್ದಿದೆ. ಹಾಗಂತ ದೊಡ್ಡ ಮೊತ್ತ ಕೊಟ್ಟು ಚಿತ್ರವನ್ನು ಒಟಿಟಿಯವರು ಖರೀದಿ ಮಾಡಿದರು ಎಂದುಕೊಳ್ಳಬೇಡಿ. ಈ ಚಿತ್ರಕ್ಕೆ ಸಿಗ್ತಿರೋದು ತುಂಬಾನೇ ಸಣ್ಣ ಮೊತ್ತ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ರಿವೀಲ್ ಮಾಡಿದ್ದಾರೆ.
‘ತೀರ್ಥ ರೂಪ ತಂದೆಯವರಿಗೆ’ ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ ಅವರು ನಿರ್ದೇಶನ ಮಾಡಿದ್ದಾರೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಇದನ್ನು ನಿರ್ಮಾಣ ಮಾಡಿದೆ. ನಿಹಾರ್ ಮುಕೇಶ್, ರಚನಾ ಇಂದರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಥಿಯೇಟರ್ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಒಟಿಟಿಗೆ ಕಾಲಿಟ್ಟಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: ‘ತೀರ್ಥರೂಪ ತಂದೆಯವರಿಗೆ’ ವಿಮರ್ಶೆ: ಭಾವನೆಗಳ ಪಯಣದಲಿ ‘ಹೊಂದಿಸಿ ಬರೆಯಿರಿ’ ಆಟ
ಈ ಚಿತ್ರವನ್ನು ಒಟಿಟಿಯಲ್ಲೇ ನೋಡುವಂತೆ ರಾಮೇನಹಳ್ಳಿ ಜಗನ್ನಾಥ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಚಿತ್ರವನ್ನು ಪ್ರೈಮ್ ಸಂಸ್ಥೆಯವರು ದುಡ್ಡು ಕೊಟ್ಟು ಖರೀದಿ ಮಾಡಿಲ್ಲ. ಬದಲಿಗೆ ವೀವ್ಸ್ ಆಧಾರದ ಮೇಲೆ ಪೇಮೆಂಟ್ ಮಾಡುವ ಆಯ್ಕೆ ಮೂಲಕ ಖರೀದಿ ಮಾಡಿದ್ದಾರೆ. ಸಿನಿಮಾನ ಒಂದು ಗಂಟೆ ವೀಕ್ಷಿಸಿದರೆ ತಂಡದವರಿಗೆ ಸಿಗೋದು ನಾಲ್ಕು ರೂಪಾಯಿ! ಅಂದರೆ, ‘ತೀರ್ಥ ರೂಪ ತಂದೆಯವರಿಗೆ’ ಸಿನಿಮಾ ಅವಧಿ 2 ಗಂಟೆ 30 ನಿಮಿಷ. ಈ ಸಿನಿಮಾನ ಸಂಪೂರ್ಣವಾಗಿ ಒಮ್ಮೆ ವೀಕ್ಷಿಸಿದರೆ ತಂಡದವರಿಗೆ 10 ರೂಪಾಯಿ ಸಿಗಲಿದೆ!
A small request to everyone.🙏
If you are watching our film “Theertharoopa Thandeyavarige” Please watch it only on Amazon Prime.
Kind request please don’t watch or share pirated links. When you watch on Prime, we earn about ₹4 per hour of streaming. That is our main revenue…— Ramenahalli Jagannatha (@Jagannatha_RN) March 1, 2026
Yes, For our film if a viewer watches it completely, we receive about ₹10 in revenue.
— Ramenahalli Jagannatha (@Jagannatha_RN) March 1, 2026
ಒಂದು ಚಿತ್ರವನ್ನು ಥಿಯೇಟರ್ನಲ್ಲಿ ವೀಕ್ಷಣೆ ಮಾಡಿದರೆ ಸಿನಿಮಾದ ಟಿಕೆಟ್ ಬೆಲೆ ಕನಿಷ್ಠ 200 ರೂಪಾಯಿ ಇರುತ್ತದೆ. ಓರ್ವ ಸಿನಿಮಾ ನೋಡಿದರೆ ಟ್ಯಾಕ್ಸ್, ಶೇರು ಎಲ್ಲವನ್ನೂ ಕಳೆದರೆ ಅಂದಾಜು 100 ರೂಪಾಯಿ ತಂಡದ ಕೈ ಸೇರುತ್ತದೆ. ಆದರೆ, ಒಟಿಟಿಯಲ್ಲಿ ಇಡೀ ಕುಟುಂಬದವರು ಒಮ್ಮೆಲೇ ಸಿನಿಮಾ ನೋಡಿದರೂ ತಂಡದವರಿಗೆ ಸಿಗೋದು ಕೇವಲ 10 ರೂಪಾಯಿ ಮಾತ್ರ!
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:26 am, Mon, 2 March 26