ರಣ್​ಬೀರ್ ಕಪೂರ್-ಅಲ್ಲು ಅರ್ಜುನ್​ಗೆ ಆರು ತಿಂಗಳ ಗಡುವು ನೀಡಿದ ಬಾಲಕೃಷ್ಣ

Nandamuri Balakrishna: ತೆಲುಗು ಚಿತ್ರರಂಗದ ಸ್ಟಾರ್ ನಟ, ನಂದಮೂರಿ ಬಾಲಕೃಷ್ಣ, ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಅವರುಗಳಿಗೆ ಬರೋಬ್ಬರಿ ಆರು ತಿಂಗಳ ಕಾಲಾವಕಾಶ ನೀಡಿದ್ದಾರೆ.

ರಣ್​ಬೀರ್ ಕಪೂರ್-ಅಲ್ಲು ಅರ್ಜುನ್​ಗೆ ಆರು ತಿಂಗಳ ಗಡುವು ನೀಡಿದ ಬಾಲಕೃಷ್ಣ

Updated on: Nov 16, 2024 | 5:23 PM

ಬಾಲಿವುಡ್​ ಸ್ಟಾರ್ ನಟ ರಣ್​ಬೀರ್ ಕಪೂರ್, ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಇಬ್ಬರಿಗೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಆರು ತಿಂಗಳ ಗಡುವು ನೀಡಿದ್ದಾರೆ. ಇತ್ತೀಚೆಗಷ್ಟೆ ಆಹಾ ಒಟಿಟಿಯ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಟಾಕ್ ಶೋಗೆ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರ್ಜುನ್​ ಜೊತೆ ಮಾತನಾಡುತ್ತಾ ನಂದಮೂರಿ ಬಾಲಕೃಷ್ಣ ಈ ಗಡುವು ನೀಡಿದ್ದು, ಅಲ್ಲು ಅರ್ಜುನ್ ನಗುತ್ತಲೇ ಸ್ವೀಕಾರ ಮಾಡಿದ್ದಾರೆ.

ಆಗಿದ್ದಿಷ್ಟು, ಟಾಕ್ ಶೋಗೆ ಬಂದಿದ್ದ ಅಲ್ಲು ಅರ್ಜುನ್​ಗೆ ವಿವಿಧ ನಟರ ಫೋಟೊ ತೋರಿಸುತ್ತಾ ಅವರ ಬಗ್ಗೆ ಅಭಿಪ್ರಾಯಗಳನ್ನು ಹೇಳುವಂತೆ ಕೇಳಿದರು. ರಣ್​ಬೀರ್ ಕಪೂರ್ ಫೋಟೊ ತೋರಿಸಿದಾಗ ಮಾತನಾಡಿದ ಅಲ್ಲು ಅರ್ಜುನ್, ‘ರಣ್​ಬೀರ್ ಕಪೂರ್ ಭಾರತದ ಅತ್ಯುತ್ತಮ ನಟ. ಅವರಂಥಹಾ ನಟರು ಬಹಳ ಕಡಿಮೆ, ನಾನು ಅವರ ಅಭಿಮಾನಿ’ ಎಂದರು. ಅದಕ್ಕೆ ಹೌದೆಂದು ಬಾಲಕೃಷ್ಣ ಇಬ್ಬರಿಗೂ ಒಂದು ಟಾಸ್ಕ್​ ಕೊಟ್ಟರು, ಅದಕ್ಕೆ ಆರು ತಿಂಗಳ ಗಡುವು ನೀಡಿದರು.

‘ರಣ್​ಬೀರ್ ಕಪೂರ್ ಹಾಗೂ ಅಲ್ಲು ಅರ್ಜುನ್ ಅಂಥಹಾ ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸಿದರೆ ಹೇಗಿರುತ್ತದೆ? ಪ್ರೇಕ್ಷಕರಿಗೆ ಹಬ್ಬವೇ ಸರಿ, ಇನ್ನು ಆರು ತಿಂಗಳ ಒಳಗೆ ನೀವಿಬ್ಬರೂ ಒಟ್ಟಿಗೆ ಒಂದು ಸಿನಿಮಾದಲ್ಲಿ ನಟಿಸಬೇಕು, ನಿಮಗೆ ಆರು ತಿಂಗಳು ಮಾತ್ರವೇ ಕಾಲಾವಕಾಶ ಇದೆ. ಯಾರಾದರೂ ಕತೆ ಬರೆಯುವ ಹಾಗಿದ್ದರೆ ಬರೆಯಿರಿ. ಇಲ್ಲವಾದರೆ ನಾನೇ ಕತೆ ಬರೆಯುತ್ತೀನಿ, ನಾನೇ ನಿರ್ದೇಶನವನ್ನೂ ಮಾಡುತ್ತೇನೆ’ ಎಂದರು.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಅದಕ್ಕೆ ಅಲ್ಲು ಅರ್ಜುನ್ ‘ನೀವೇ ನಿರ್ಮಾಣವನ್ನು ಮಾಡಿಬಿಡಿ’ ಎಂದರು. ಜಾಣತನದಿಂದ ಉತ್ತರ ನೀಡಿದ ಬಾಲಕೃಷ್ಣ, ‘ನಿಮ್ಮ ತಂದೆಯೇ ಇದ್ದಾರಲ್ಲ, ಜಿಪುಣ, ಅವರನ್ನೇ ನಿರ್ಮಾಪಕರನ್ನಾಗಿ ಮಾಡಿಬಿಡೋಣ’ ಎಂದರು. ಅದಕ್ಕೆ ಅಲ್ಲು ಅರ್ಜುನ್ ಎಸ್ ಎಂದರು. ಆದರೆ ರಣ್​ಬೀರ್ ಕಪೂರ್ ಇದಕ್ಕೆ ಒಪ್ಪುತ್ತಾರಾ? ಬಾಲಕೃಷ್ಣ ಆಸೆ ಈಡೇರುವುದು ತುಸು ಅನುಮಾನವೇ ಏಕೆಂದರೆ ಇಬ್ಬರೂ ನಟರು, ಬೇರೆ ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

ಅಲ್ಲು ಅರ್ಜುನ್ ಇತ್ತೀಚೆಗಷ್ಟೆ ‘ಪುಷ್ಪ 2’ ಸಿನಿಮಾ ಮುಗಿಸಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ರಣ್​ಬೀರ್ ಕಪೂರ್ ಪ್ರಸ್ತುತ ರಾಮಾಯಣ ಕತೆ ಆಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ 2026 ಕ್ಕೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ‘ಬ್ರಹ್ಮಾಸ್ತ್ರ 2’ ಸಿನಿಮಾನಲ್ಲಿ ರಣ್​ಬೀರ್ ಕಪೂರ್ ನಟನೆ ಮಾಡಲಿದ್ದಾರೆ. ಹಾಗಾಗಿ ಇಬ್ಬರೂ ನಟರು ಕನಿಷ್ಟ ಎರಡು ವರ್ಷ ಬ್ಯುಸಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us