ನೆಟ್​ಫ್ಲಿಕ್ಸ್ ನಿರ್ಧಾರಕ್ಕೆ ಸಿನಿಪ್ರಿಯರ ಬೇಸರ; ‘ತಮ್ಮದೇನು ಇಲ್ಲ’ ಎಂದ ಒಟಿಟಿ ಪ್ಲಾಟ್​ಫಾರ್ಮ್​

‘ಲಿಯೋ’ ಸಿನಿಮಾ, ‘ಒಎಂಜಿ 2’ ಸಿನಿಮಾಗಳಲ್ಲಿ ಈ ಮೊದಲು ಕತ್ತರಿ ಹಾಕಿದ ಭಾಗಗಳನ್ನು ಸೇರ್ಪಡೆ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈಗ ಹೊಸ ಸೂಚನೆ ಮೇರೆಗೆ ನೆಟ್​ಫ್ಲಿಕ್ಸ್​ ಸೆನ್ಸಾರ್ ವರ್ಷನ್​ನ ಮಾತ್ರ ಪ್ರಸಾರ ಮಾಡಲು ಪ್ರಾರಂಭಿಸಿದೆ.   

ನೆಟ್​ಫ್ಲಿಕ್ಸ್ ನಿರ್ಧಾರಕ್ಕೆ ಸಿನಿಪ್ರಿಯರ ಬೇಸರ; ‘ತಮ್ಮದೇನು ಇಲ್ಲ’ ಎಂದ ಒಟಿಟಿ ಪ್ಲಾಟ್​ಫಾರ್ಮ್​
ನೆಟ್​ಫ್ಲಿಕ್ಸ್

Updated on: Dec 20, 2023 | 8:16 AM

ಕೊವಿಡ್ ಕಾಣಿಸಿಕೊಂಡ ಬಳಿಕ ಒಟಿಟಿ ಪ್ಲಾಟ್​ಫಾರ್ಮ್​ಗಳ ಬಳಕೆ ಹೆಚ್ಚಿದೆ. ಅಮೇಜಾನ್​ ಪ್ರೈಮ್, ನೆಟ್​ಫ್ಲಿಕ್ಸ್ (Netflix) ಸೇರಿದಂತೆ ಅನೇಕ ಒಟಿಟಿ ಪ್ಲಾಟ್​ಫಾರ್ಮ್​​ಗಳಿಗೆ ಬೇಡಿಕೆ ಹೆಚ್ಚಿದೆ. ಈಗ ನೆಟ್​ಫ್ಲಿಕ್ಸ್​ ನಿರ್ಧಾರದಿಂದ ಭಾರತದ ಸಿನಿಪ್ರಿಯರಿಗೆ ಬೇಸರ ಆಗಿದೆ. ‘ಇದು ನಾವು ತೆಗೆದುಕೊಂಡ ನಿರ್ಧಾರ ಅಲ್ಲ. ಇದರ ಹಿಂದೆ ಸೆನ್ಸಾರ್ ಮಂಡಳಿಯ ಸೂಚನೆ ಇದೆ’ ಎಂದು ಸ್ಪಷ್ಟಪಡಿಸಿದೆ. ಅಷ್ಟಕ್ಕೂ ಬದಲಾದ ನಿರ್ಧಾರ ಏನು? ಸಿನಿಪ್ರಿಯರು ಬೇಸರಗೊಂಡಿದ್ದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸೆನ್ಸಾರ್ ಆದ ಬಳಿಕವೇ ಥಿಯೇಟರ್​ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಸಿನಿಮಾದಲ್ಲಿ ಯಾವುದಾದರೂ ಹೆಚ್ಚುವರಿ ದೃಶ್ಯ ಸೇರ್ಪಡೆ ಮಾಡಿದರೆ ಮತ್ತೆ ಅದನ್ನು ಸೆನ್ಸಾರ್ ಮಂಡಳಿಯ ಎದುರು ಇಟ್ಟ ಬಳಿಕವೇ ಅದನ್ನು ಪ್ರದರ್ಶಿಸಲು ಅವಕಾಶ ಇದೆ. ಆದರೆ, ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಈ ರೀತಿಯ ನಿರ್ಬಂಧ ಇಲ್ಲ. ಅಲ್ಲಿ ಪ್ರಸಾರ ಆಗುವ ಸಿನಿಮಾಗಳಿಗೆ ಯಾವುದೇ ಸೆನ್ಸಾರ್ ಪ್ರಕ್ರಿಯೆಯ ಅಗತ್ಯವಿಲ್ಲ. ಹೀಗಾಗಿ, ಕಟ್ ಮಾಡಲ್ಪಟ್ಟ ದೃಶ್ಯಗಳನ್ನು ಸೇರಿಸಿ ಒಟಿಟಿಯಲ್ಲಿ ಸಿನಿಮಾ ಪ್ರಸಾರ ಮಾಡಲಾಗುತ್ತಿತ್ತು. ಈ ರೀತಿ ಮಾಡದಂತೆ ನೆಟ್​ಫ್ಲಿಕ್ಸ್​ಗೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.

ಸೆನ್ಸಾರ್ ಆಗದೇ ಇರುವ ವರ್ಷನ್​ನ ಪ್ರಸಾರ ಮಾಡದಂತೆ ನೆಟ್​ಫ್ಲಿಕ್ಸ್​ಗೆ ಸೆನ್ಸಾರ್ ಮಂಡಳಿ ಹೇಳಿದೆ. ಈ ಸೂಚನೆಯನ್ನು ನೆಟ್​ಫ್ಲಿಕ್ಸ್ ಪಾಲಿಸಲು ಆರಂಭಿಸಿದೆ. ‘ಭೀಡ್’ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತಿತರ ರಾಜಕೀಯ ನಾಯಕರ ಉಲ್ಲೇಖ ಇದೆ. ಇದನ್ನು ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಇದಕ್ಕೆ ಕತ್ತರಿ ಬಿದ್ದಿದೆ.

‘ಲಿಯೋ’ ಸಿನಿಮಾ, ‘ಒಎಂಜಿ 2’ ಸಿನಿಮಾಗಳಲ್ಲಿ ಈ ಮೊದಲು ಕತ್ತರಿ ಹಾಕಿದ ಭಾಗಗಳನ್ನು ಸೇರ್ಪಡೆ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈಗ ಹೊಸ ಸೂಚನೆ ಮೇರೆಗೆ ನೆಟ್​ಫ್ಲಿಕ್ಸ್​ ಸೆನ್ಸಾರ್ ವರ್ಷನ್​ನ ಮಾತ್ರ ಪ್ರಸಾರ ಮಾಡಲು ಪ್ರಾರಂಭಿಸಿದೆ.

ಇದನ್ನೂ ಓದಿ: ಇನ್ನು ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!

ಸೆನ್ಸಾರ್ ಮಂಡಳಿಯ ಸೂಚನೆಯಂತೆ ನೆಟ್​ಫ್ಲಿಕ್ಸ್ ತೆಗೆದುಕೊಂಡಿರುವ ನಿರ್ಧಾರದಿಂದ ನಿರ್ದೇಶಕರು ಹಾಗೂ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ‘ಅನಿಮಲ್’ ಹಾಗೂ ‘ಸಲಾರ್’ ಸಿನಿಮಾದ ಪರಿಸ್ಥಿತಿ ಏನಾಗಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Wed, 20 December 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us