
ಇತ್ತೀಚೆಗೆ ಬಿಡುಗಡೆ ಆದ ಒಂದು ಒಳ್ಳೆಯ ಕನ್ನಡ ಸಿನಿಮಾ ‘ಮರ್ಯಾದೆ ಪ್ರಶ್ನೆ’ ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು ಇನ್ನೂ ಕೆಲವು ಪ್ರತಿಭಾವಂತ ಯುವಕರು ಒಟ್ಟಿಗೆ ನಟಿಸಿದ್ದ ಈ ಸಿನಿಮಾವನ್ನು ಆರ್ಜೆ ಪ್ರದೀಪ ನಿರ್ಮಾಣ ಮಾಡದ್ದಾರೆ.ನಾಗರಾಜ್ ಸೋಮಯ್ಯಾಜಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

‘ನಾಳೆ ರಜಾ ಕೋಳಿ ಮಜಾ’ ಎಂಬ ವಿಚಿತ್ರ ಹೆಸರಿನ ಮಕ್ಕಳ ಸಿನಿಮಾ ಸಹ ಇದೇ ವಾರ ಒಟಿಟಿಗೆ ಬಂದಿದೆ. ಸನ್ ನೆಕ್ಸ್ಟ್ನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಗಾಂಧಿ ಜಯಂತಿಯಂದು ಕೋಳಿ ಸಾರು ತಿನ್ನುವ ಬಯಕೆ ಆದ ಶಾಲಾ ಬಾಲಕಿಯ ಕತೆಯನ್ನು ಸಿನಿಮಾ ಒಳಗೊಂಡಿದೆ.

ನಟಿ ಸಮಂತಾ ನಟಿಸಿರುವ ಜೊತೆಗೆ ನಿರ್ಮಾಣವನ್ನೂ ಮಾಡಿರುವ ಮೊದಲ ಸಿನಿಮಾ ‘ಶುಭಂ’. ಧಾರಾವಾಹಿ ಕುರಿತಾದ ಹಾರರ್ ರೀತಿಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಶುಭಂ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ತೆಲುಗಿನ ಸ್ಟಾರ್ ನಟರಾದ ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ದಗ್ಗುಬಾಟಿ ಒಟ್ಟಿಗೆ ನಟಿಸಿರುವ ಹಿಂದಿ ವೆಬ್ ಸರಣಿ ‘ರಾಣಾ ನಾಯ್ಡು’ ಇದರ ಎರಡನೇ ಸೀಸನ್ ಇದೇ ವಾರ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆರಂಭ ಮಾಡಿದೆ. ರೊಮ್ಯಾನ್ಸ್, ಥ್ರಿಲ್ಲರ್, ಆಕ್ಷನ್ ಅನ್ನು ಈ ಸರಣಿ ಒಳಗೊಂಡಿದೆ.

ಅಕ್ಷಯ್ ಕುಮಾರ್, ಆರ್ ಮಾಧವನ್, ಅನನ್ಯಾ ಭಟ್ ನಟನೆಯ ‘ಕೇಸರಿ 2’ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಜಲಿಯನ್ ವಾಲಾಭಾಗ್ ಕುರಿತ ನ್ಯಾಯಿಕ ವಿಚಾರಣೆಯ ಕತೆಯನ್ನು ಇದು ಒಳಗೊಂಡಿದೆ.

ಕರಣ್ ಜೋಹರ್ ನಿರೂಪಣೆ ಮಾಡುತ್ತಿರುವ ಗ್ಲಾಮರಸ್, ರೊಮ್ಯಾಂಟಿಕ್ ರಿಯಾಲಿಟಿ ಶೋ ‘ದಿ ಟ್ರೇಟರ್ಸ್’ ರಿಯಾಲಿಟಿ ಶೋ ಇದೇ ವಾರ ಒಟಿಟಿಗೆ ಬಂದಿದೆ. ಕರಣ್ ಜೊತೆಗೆ ಇನ್ನೂ ಕೆಲವು ಸೆಲೆಬ್ರಿಟಿಗಳಿರುವ ಈ ಶೋ ಪ್ರೈಂ ವಿಡಿಯೋನಲ್ಲಿ ಪ್ರಸಾರ ಆಗಲಿದೆ.
Published On - 5:48 pm, Sat, 14 June 25