ಏಕಾ ಏಕಿ ‘ಬಿಗ್ ಬಾಸ್ ಹಿಂದಿ ಒಟಿಟಿ ಸೀಸನ್ 3’ ಬಗ್ಗೆ ಚರ್ಚೆಗಳು ಆರಂಭ ಆಗಿವೆ. ಇದಕ್ಕೆ ಕಾರಣ ಆಗಿರೋದು ಅರ್ಮಾನ್ ಮಲಿಕ್. ಅವರು ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ಗೆ ಬಂದಿದ್ದರು. ಈ ಪೈಕಿ ಮೊದಲ ಪತ್ನಿ ಪಾಯಲ್ ಅವರು ಎಲಿಮಿನೇಟ್ ಆದರೆ, ಎರಡನೇ ಪತ್ನಿ ಕೃತಿಕಾ ಇನ್ನೂ ಬಿಗ್ ಬಾಸ್ ಮನೆಯಲ್ಲೇ ಇದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರ್ಮಾನ್ ಹಾಗೂ ಕೃತಿಕಾ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ರೀತಿಯ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಟೀಕೆ ಹೊರ ಹಾಕಿದ್ದಾರೆ. ಆದರೆ, ಪಾಯಲ್ ಅವರು ಈ ವಿಚಾರದಲ್ಲಿ ಪತಿಯನ್ನು ಬೆಂಬಲಿಸಿದ್ದಾರೆ.
ಪಾಯಲ್ ಹೇಳೋ ಪ್ರಕಾರ ಈ ವಿಡಿಯೋನ ತಿರುಚಲಾಗಿದೆಯಂತೆ. ಈ ವಿಡಿಯೋನ ಎಡಿಟ್ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ವಿಡಿಯೋ ಮಾತ್ರ ಸಖತ್ ವೈರಲ್ ಆಗಿ ಸದ್ದು ಮಾಡುತ್ತಿದೆ. ಇದರ ಅಸಲಿಯತ್ತು ಏನು ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಬಗ್ಗೆ ವಾಹಿನಿಯವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ಯಾರ್ಯಾರು ಆ ವಿಡಿಯೋ ಶೇರ್ ಮಾಡಿ ಇದು ಅರ್ಮಾನ್ ಹಾಗೂ ಕೃತಿಕಾ ಅವರದ್ದು ಎನ್ನುತ್ತಿದ್ದೀರೋ ಅವರ ಬಳಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ಇದನ್ನು ಇಲ್ಲಿಯೇ ನಿಲ್ಲಿಸಿ. ಈ ವಿಡಿಯೋ ಎಡಿಟ್ ಮಾಡಲಾಗಿದೆ. ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದವನು. ಆ ರೀತಿಯ ಲ್ಯಾಂಪ್ ಅಲ್ಲಿ ಇಲ್ಲ. ಬ್ಲ್ಯಾಂಕೆಟ್ ಕೂಡ ಭಿನ್ನವಾಗಿದೆ. ಮನೆಯಲ್ಲಿರುವ ಯಾರಿಗಾದರೂ ಇದು ಫೇಕ್ ಎಂದು ಗೊತ್ತಾಗುತ್ತದೆ’ ಎಂದಿದ್ದಾರೆ ಅವರು.
Big boss is no more family show
Armaan Malik and kritika Malik crossed all the limits
Shut down Big boss OTT 3#ArmaanMalik #KritikaMalik #BigBossOTT3 pic.twitter.com/eevhzBspkR
— Samira (@Logical_Girll) July 17, 2024
ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿತ್ತು. ಇದು ಬಿಗ್ ಬಾಸ್ ಮನೆಯ ಒಳಗಿನ ವಿಡಿಯೋ ಎಂದು ಹೇಳಲಾಗಿತ್ತು. ಈ ವಿಡಿಯೋದಲ್ಲಿ ಅರ್ಮಾನ್ ಹಾಗೂ ಕೃತಿಕಾ ಸಖತ್ ಇಂಟಿಮೇಟ್ ಆಗಿದ್ದರು. ಅವರು ಲೈಂಗಿಕ ಕ್ರಿಯೆ ನಡೆಸಿದ ರೀತಿಯಲ್ಲಿ ಈ ವಿಡಿಯೋ ಆಗಿತ್ತು. ಈ ವಿಡಿಯೋನ ಅನೇಕರು ಟೀಕಿಸಿದ್ದರು. ಬಿಗ್ ಬಾಸ್ನಲ್ಲಿ ಈ ರೀತಿಯ ವಿಚಾರಗಳು ನಡೆಯೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇತ್ತ ಬ್ಯಾಡ್ ಕಮೆಂಟ್ಗಳನ್ನು ಎದುರಿಸುತ್ತಿರುವ ಪಾಯಲ್ ಅವರು ಅರ್ಮಾನ್ ಅವರಿಗೆ ವಿಚ್ಛೇದನ ಕೊಡೋದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ ಲೈವ್ನಲ್ಲೇ ಸೆ*; ವೈರಲ್ ವಿಡಿಯೋ ನೋಡಿ ಎಲ್ಲರೂ ಶಾಕ್
ಪ್ರತಿ ಬಾರಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿವಾದ ಎದುರಾಗುತ್ತಿದೆ. ಇತ್ತೀಚೆಗೆ ಪತಿ-ಪತ್ನಿಯರನ್ನು ಹೆಚ್ಚಾಗಿ ತರಲಾಗುತ್ತಿದೆ. ಕಳೆದ ಟಿವಿ ಸೀಸನ್ನಲ್ಲಿ ಅಂಕಿತಾ ಜೈನ್ ಹಾಗೂ ವಿಕ್ಕಿ ಜೈನ್ ದಂಪತಿ ಆಗಮಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Mon, 22 July 24