ಕನ್ನಡಿಗರೇ ಮಾಡಿದ ಸಸ್ಪೆನ್ಸ್ ಥ್ರಿಲ್ಲರ್ ಸರಣಿಯನ್ನು ಮಿಸ್ ಮಾಡಲೇಬೇಡಿ; ಪ್ರತಿ ಹಂತದಲ್ಲೂ ಟ್ವಿಸ್ಟ್

ಕನ್ನಡದವರೇ ನಿರ್ಮಿಸಿದ 'ಪೋಚಮ್ಮ' ತೆಲುಗು ವೆಬ್ ಸರಣಿ ಸಸ್ಪೆನ್ಸ್ ಥ್ರಿಲ್ಲರ್ ಪ್ರಿಯರಿಗೆ ಹೊಸ ಅನುಭವ ನೀಡಿದೆ. ಗ್ರಾಮದೇವತೆ ಪೋಚಮ್ಮ ಸುತ್ತ ಹೆಣೆದ ರೋಮಾಂಚಕ ಕಥೆ, ವೇಗದ ನಿರೂಪಣೆ ಇದರ ವಿಶೇಷತೆ. ರಮೇಶ್ ಇಂದಿರಾ ನಿರ್ದೇಶನದ ಈ ಸರಣಿ ಕೇವಲ ಐದು ಸಂಚಿಕೆಗಳಲ್ಲಿ ರೋಚಕ ಅಂತ್ಯ ತಲುಪುತ್ತದೆ.

ಕನ್ನಡಿಗರೇ ಮಾಡಿದ ಸಸ್ಪೆನ್ಸ್ ಥ್ರಿಲ್ಲರ್ ಸರಣಿಯನ್ನು ಮಿಸ್ ಮಾಡಲೇಬೇಡಿ; ಪ್ರತಿ ಹಂತದಲ್ಲೂ ಟ್ವಿಸ್ಟ್
ಪೋಚಮ್ಮ

Updated on: Apr 27, 2026 | 7:57 AM

ಒಟಿಟಿ ವ್ಯಾಪ್ತಿ ಹೆಚ್ಚಿದ ಬಳಿಕ ವೆಬ್ ಸೀರಿಸ್​ಗಳ ನಿರ್ಮಾಣ ಹೆಚ್ಚಿದೆ. ಹೊಸ ಹೊಸ ಸೀರಿಸ್​​ಗಳನ್ನು ಪ್ರೇಕ್ಷಕರ ಎದುರು ತರಲಾಗುತ್ತಿದೆ. ಸಸ್ಪೆನ್ಸ್​, ಥ್ರಿಲ್ಲರ್, ರೊಮ್ಯಾಂಟಿಕ್ ಸೇರಿದಂತೆ ಅನೇಕ ವೆಬ್​ ಸೀರಿಸ್​​ಗಳ ನಿರ್ಮಾಣ ಆಗಿದೆ. ಈಗ ‘ಅಯ್ಯನ ಮನೆ’ ತಂಡದವರು ತೆಲುಗಿನಲ್ಲಿ ‘ಪೋಚಮ್ಮ’ ಹೆಸರಿನ ವೆಬ್ ಸೀರಿಸ್ ಮಾಡಿದ್ದಾರೆ. ಈ ಸೀರಿಸ್ ಗಮನ ಸೆಳೆದಿದೆ. ಇದರ ಬಗ್ಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ.

ಪೋಚಮ್ಮ ಎಂದರೆ ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಆರಾಧಿಸುವ ಗ್ರಾಮದೇವತೆ. ಇಡೀ ಸರಣಿ ಇದರ ಸುತ್ತವೇ ಸಾಗುತ್ತದೆ. ಈ ಸರಣಿಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದರೆ ರಮೇಶ್ ಇಂದಿರ ನಿರ್ದೇಶನ ಮಾಡಿದ್ದಾರೆ. ರಮೇಶ್ ಇಂದಿರ, ಅರ್ಜುನ್, ಸ್ನೇಹಲ್ ಕಾಮತ್, ಅಚ್ಯುತ್ ಕುಮಾರ್ ಮೊದಲಾದವರು ಇದರಲ್ಲಿ ನಟಿಸಿದ್ದಾರೆ.

ಅದೊಂದು ದೊಡ್ಡದಾದ ಎಸ್ಟೇಟ್. ಕಾಫಿ ಗಿಡಗಳ ಮಧ್ಯೆ ಭವ್ಯವಾದ ಮನೆ. ಇದನ್ನು ಫ್ರೆಡ್ರಿಕ್ (ರಮೇಶ್ ಇಂದಿರ) ಖರೀದಿ ಮಾಡುತ್ತಾನೆ. ಆತ ಕ್ರೈಸ್ತ ಧರ್ಮಕ್ಕೆ ಸೇರಿದವನು. ಹೀಗಾಗಿ, ಮನೆಯ ಎದುರು ಇರುವ ಪೋಚಮ್ಮ ದೇವರ ಮೂರ್ತಿಯನ್ನು ಕಿತ್ತೆಸೆಯುತ್ತಾನೆ. ಇದನ್ನು ರಘುಪತಿ (ಅಚ್ಯುತ್ ಕುಮಾರ್) ತಡೆಯಲು ಪ್ರಯತ್ನಿಸುತ್ತಾನೆ. ಆ ಬಳಿಕ ಶುರುವಾಗುತ್ತದೆ ನೋಡಿ ತೊಂದರೆಗಳು. ಫ್ರೆಡ್ರಿಕ್ ಮಗಳು ಜೆಸ್ಸಿ (ಸ್ನೇಹಲ್ ಕಾಮತ್) ಸಾಯುತ್ತಾಳೆ. ಈ ರೀತಿಯ ಅನೇಕ ಸಮಸ್ಯೆ ಎದುರಾಗುತ್ತದೆ.

ಈ ವೆಬ್ ಸೀರಿಸ್​ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಕಥೆ ಸಾಗುವ ವೇಗ. ನಿರ್ದೇಶಕ ರಮೇಶ್ ಇಂದಿರಾ ಅವರು ಕಥೆಯನ್ನು ಆರಂಭದಿಂದಲೇ ಬಿಗಿಯಾಗಿ ಮತ್ತು ಆಸಕ್ತಿದಾಯಕವಾಗಿ ಹೇಳುತ್ತಾ ಹೋಗುತ್ತಾರೆ. ಅನಗತ್ಯ ನಿರೂಪಣೆ ಇಲ್ಲದೆ ಸರಣಿ ಸಾಗುತ್ತದೆ. ಕೆಲವು ವೆಬ್​ ಸೀರಿಸ್​​ಗಳಲ್ಲಿ ವೆಬ್ ಸರಣಿಯ ಅವಧಿ ಹೆಚ್ಚಿಸುವ ಉದ್ದೇಶದಿಂದ ಕಥೆಯನ್ನು ಎಳೆಯಲಾಗುತ್ತದೆ. ಆದರೆ, ಇಲ್ಲಿ ಅದಕ್ಕೆ ಜಾಗ ಇಲ್ಲ. 20-25 ನಿಮಿಷಗಳ ಕೇವಲ 5 ಎಪಿಸೋಡ್​​ಗಳು ಇದರಲ್ಲಿವೆ. ಇದು ಸರಣಿಯ ದೊಡ್ಡ ಪ್ಲಸ್ ಪಾಯಿಂಟ್. ಕೊನೆಯವರೆಗೂ ಕೌತುಕ ಹಾಗೆಯೇ ಇರುತ್ತದೆ. ಚಿತ್ರದ ಕೆಲವು ತಿರುವುಗಳನ್ನು ಸುಲಭವಾಗಿ ಊಹಿಸಬಹುದು. ಕೆಲವು ದೃಶ್ಯಗಳಿಗೆ ಸರಿಯಾದ ಸಮರ್ಥನೆ ಕೊಟ್ಟಿಲ್ಲ ಎನಿಸುತ್ತದೆ.

ಇದನ್ನೂ ಓದಿ: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್

ಅಂತಿಮವಾಗಿ ತಪ್ಪಿತಸ್ಥ ಯಾರು? ಈ ಪ್ರಕರಣದ ಕ್ಲೈಮ್ಯಾಕ್ಸ್​​ನಲ್ಲಿ ಏನಾಗುತ್ತದೆ ಎಂಬುದನ್ನು ನೋಡಲು ‘ಪೋಚಮ್ಮ’ ಸರಣಿ ನೋಡಿ. ‘ಆಹ’ ಒಟಿಟಿಯಲ್ಲಿ ಈ ಸರಣಿ ವೀಕ್ಷಣೆಗೆ ಲಭ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:52 am, Mon, 27 April 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us