AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಕ್ಕೆ ಎಂಟ್ರಿ ಕೊಡೋದಕ್ಕೂ ಮೊದಲೇ ಮದುವೆಯಾದ ನಟಿ ಮೆಹ್ರೀನ್ ಫಿರ್ಜಾದಾ

ನಟಿ ಮೆಹ್ರೀನ್ ಫಿರ್ಜಾದಾ ಟಾಲಿವುಡ್​​ನಲ್ಲಿ ತುಂಬಾನೇ ಫೇಮಸ್ ಆದವರು. ಅವರು ನಾನಿ ನಟಿಸಿದ ‘ಕೃಷ್ಣಗಡಿ ವೀರ ಪ್ರೇಮಗಾಥ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಾದ ನಂತರ, ಅವರು ಅನೇಕ ತೆಲುಗು ಚಿತ್ರಗಳಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದರು. ಅವರು ಕನ್ನಡಕ್ಕೂ ಕಾಲಿಡುವವರಿದ್ದಾರೆ. ಅವರು ಈಗ ವಿವಾಹ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Apr 27, 2026 | 7:11 AM

Share
ಜನಪ್ರಿಯ ತೆಲುಗು ನಟಿ ಮೆಹ್ರೀನ್ ಫಿರ್ಜಾದಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ಸಮಯದಿಂದ ಸಿನಿಮಾಗಳಿಂದ ದೂರವಿದ್ದ ಈ ನಟಿ, ಖಾಸಗಿ ಸಮಾರಂಭದಲ್ಲಿ ವಿವಾಹವಾಗುವ ಮೂಲಕ ತನ್ನ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1 / 8
ಮೆಹ್ರೀನ್ ವಿವಾಹವಾದ ವ್ಯಕ್ತಿಯ ಹೆಸರು ಅರ್ಶ್ ಔಲಾಖ್. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಅರ್ಶ್ ಓರ್ವ ಉದ್ಯಮಿ ಇರಬಹುದು ಎಂದು ಅನೇಕರು ಊಹಿಸಿದ್ದಾರೆ.

2 / 8
ಮೆಹ್ರೀನ್ ಅವರ ವಿವಾಹವು ಭಾನುವಾರ ಬೆಳಿಗ್ಗೆ (ಏಪ್ರಿಲ್ 26) ಹಿಮಾಚಲ ಪ್ರದೇಶದ ಸುಂದರ ರೆಸಾರ್ಟ್‌ನಲ್ಲಿ ನಡೆದಿದೆ. ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಮೆಹ್ರೀನ್ ವಿವಾಹದ ಫೋಟೋಗಳಿಗೆ ಶುಭಾಶಯ ಹರಿದು ಬರುತ್ತಿದೆ.

3 / 8
ಮೆಹ್ರೀನ್ ವಿವಾಹವಾದ ವ್ಯಕ್ತಿಯ ಹೆಸರು ಅರ್ಶ್ ಔಲಾಖ್. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಅರ್ಶ್ ಓರ್ವ ಉದ್ಯಮಿ ಇರಬಹುದು ಎಂದು ಅನೇಕರು ಊಹಿಸಿದ್ದಾರೆ.

ಮೆಹ್ರೀನ್ ವಿವಾಹವಾದ ವ್ಯಕ್ತಿಯ ಹೆಸರು ಅರ್ಶ್ ಔಲಾಖ್. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಅರ್ಶ್ ಓರ್ವ ಉದ್ಯಮಿ ಇರಬಹುದು ಎಂದು ಅನೇಕರು ಊಹಿಸಿದ್ದಾರೆ.

4 / 8
ಮೆಹ್ರೀನ್ ಈ ಹಿಂದೆ 2021 ರಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ ಮತ್ತು ರಾಜಕಾರಣಿ ಭವ್ಯಾ ಬಿಷ್ಣೋಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಇಬ್ಬರ ನಿಶ್ಚಿತಾರ್ಥವು ತುಂಬಾ ಅದ್ಧೂರಿಯಾಗಿ ನಡೆದಿತ್ತು. ಆದರೆ, ಮೆಹ್ರೀನ್ ನಿಶ್ಚಿತಾರ್ಥವನ್ನು ರದ್ದುಗೊಳಿಸಿದರು.

5 / 8
ಪಂಜಾಬ್ ಮೂಲದ ಮೆಹ್ರೀನ್, ನಾನಿ ನಾಯಕನಾಗಿ ನಟಿಸಿದ 'ಕೃಷ್ಣಗಡಿ ವೀರಪ್ರೇಮಗಧ' ಚಿತ್ರದ ಮೂಲಕ ದೊಡ್ಡ ಪರದೆಗೆ ಕಾಲಿಟ್ಟರು. 'ಮಹಾನುಭಾವಡು', 'ರಾಜಾ ದಿ ಗ್ರೇಟ್', 'ಎಫ್2', 'ಎಫ್3' ನಂತಹ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು.

6 / 8
ತೆಲುಗು, ತಮಿಳು, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ,  ಕೈಯಲ್ಲಿ ಯಾವುದೇ ಹೊಸ ಚಿತ್ರಗಳಿಲ್ಲದ ಕಾರಣ, ಮೆಹ್ರೀನ್ ಚಲನಚಿತ್ರಗಳನ್ನು ತೊರೆದು ಕುಟುಂಬ ಜೀವನಕ್ಕೆ ಸೀಮಿತಗೊಳ್ಳಲು ನಿರ್ಧರಿಸಿದ್ದಾರೆ ಎಂಬ ಚರ್ಚೆ  ನಡೆಯುತ್ತಿದೆ.

7 / 8
ಮೆಹ್ರೀನ್ ಫಿರ್ಜಾದ ಅವರು ಶಿವರಾಜ್​ಕುಮಾರ್ ನಟನೆಯ, ರಾಮ್ ಧುಲಿಪುಡಿ ನಿರ್ದೇಶನದ ‘ನೀ ಸಿಗೋವರೆಗೂ’ ಚಿತ್ರದಲ್ಲಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾ 2021ರಲ್ಲಿ ಸೆಟ್ಟೇರಿದೆ. ಮುಹೂರ್ತಕ್ಕೆ ಸುದೀಪ್ ಬಂದು ಹಾರೈಸಿದ್ದರು. ಆ ಬಳಿಕ ಸಿನಿಮಾ ಬಗ್ಗೆ ಯಾವುದೇ ಅಪ್​​ಡೇಟ್ ಇಲ್ಲ. ಅವರ ವಿಕಿಪೀಡಿಯಾದಲ್ಲಿ ಈ ಚಿತ್ರದ ಹೆಸರಿದೆಯಾದರೂ ಈ ಬಗ್ಗೆ ಸ್ಪಷ್ಟತೆ ಇಲ್ಲ.

8 / 8
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Follow Us
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ

ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ

ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ

ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು

ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು

ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ

SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್