Aryan Khan: ಆರ್ಯನ್ ಖಾನ್ ವೆಬ್ ಸರಣಿಯಲ್ಲಿ ಸ್ಟಾರ್​ಗಳ ದಂಡು; ಸಿನಿಮಾ ಇಂಡಸ್ಟ್ರಿ ಬಗ್ಗೆಯೇ ಇರಲಿದೆ ಕಥೆ

‘ಸ್ಟಾರ್​ಡಂ’ನಲ್ಲಿ ರಣವೀರ್ ಸಿಂಗ್ ಹಾಗೂ ಶಾರುಖ್ ಖಾನ್ ಅತಿಥಿ ಪಾತ್ರ ಮಾಡುತ್ತಿದ್ದಾರಂತೆ. ರಾಮ್ ಕಪೂರ್ ಪತ್ನಿ ಗೌತಮಿ ಕಪೂರ್ ಅವರು ಇದರಲ್ಲಿ ನಟಿಸಿದ್ದಾರೆ.

Aryan Khan: ಆರ್ಯನ್ ಖಾನ್ ವೆಬ್ ಸರಣಿಯಲ್ಲಿ ಸ್ಟಾರ್​ಗಳ ದಂಡು; ಸಿನಿಮಾ ಇಂಡಸ್ಟ್ರಿ ಬಗ್ಗೆಯೇ ಇರಲಿದೆ ಕಥೆ
ರಣವೀರ್​,ಶಾರುಖ್, ಆರ್ಯನ್

Updated on: May 22, 2023 | 8:55 AM

ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಅವರು ನಟನೆಯಲ್ಲಿ ತೊಡಗಿಕೊಳ್ಳದೆ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಮರೆತು ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಹೊಸ ವೆಬ್​ ಸೀರಿಸ್  ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಬಗ್ಗೆಯೇ ಈ ವೆಬ್ ಸರಣಿ ಸಿದ್ಧಗೊಳ್ಳಲಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಸರಣಿಯಲ್ಲಿ ಸ್ಟಾರ್​ಗಳ ದಂಡೇ ಇರಲಿದೆ ಎನ್ನಲಾಗುತ್ತಿದೆ. ಈ ಸರಣಿಗೆ ಸದ್ಯ ‘ಸ್ಟಾರ್​ಡಂ’ ಎಂದು ಶೀರ್ಷಿಕೆ ಇಡಲಾಗಿದೆ.

‘ಸ್ಟಾರ್​ಡಂ’ನಲ್ಲಿ ಆರು ಎಪಿಸೋಡ್​ಗಳು ಇರಲಿವೆಯಂತೆ. ಪ್ರತಿ ಎಪಿಸೋಡ್ 45 ನಿಮಿಷ ಇರಲಿದೆ ಎನ್ನಲಾಗುತ್ತಿದೆ. ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಅವರು ಹಲವು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸಿನಿಮಾ ರಂಗದ ಒಳ ಮತ್ತು ಹೊರ ಗೊತ್ತಿದೆ. ಹೀಗಾಗಿ ಸಿನಿಮಾ ರಂಗದ ವಿಚಾರ ಇಟ್ಟುಕೊಂಡೇ ಅವರು ವೆಬ್ ಸೀರಿಸ್​ ಮಾಡುತ್ತಿದ್ದಾರೆ.

‘ಸ್ಟಾರ್​ಡಂ’ನಲ್ಲಿ ರಣವೀರ್ ಸಿಂಗ್ ಹಾಗೂ ಶಾರುಖ್ ಖಾನ್ ಅತಿಥಿ ಪಾತ್ರ ಮಾಡುತ್ತಿದ್ದಾರಂತೆ. ರಾಮ್ ಕಪೂರ್ ಪತ್ನಿ ಗೌತಮಿ ಕಪೂರ್ ಅವರು ಇದರಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ ರಣವೀರ್ ಹಾಗೂ ಶಾರುಖ್ ಖಾನ್ ಬೇರೆಬೇರೆ ಎಪಿಸೋಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಉಳಿದ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ₹25 ಕೋಟಿ ನೀಡದಿದ್ದರೆ ಆರ್ಯನ್ ಖಾನ್​​ನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ: ಅಧಿಕಾರಿ ವಿರುದ್ಧ ಸಿಬಿಐ ಕೇಸ್

ಆರ್ಯನ್ ಖಾನ್ ಅವರು ಡ್ರಗ್ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಇದರಿಂದ ಅವರು ಜೈಲು ಕೂಡ ಸೇರಿದರು. ಈ ಸಂದರ್ಭದಲ್ಲಿ ಶಾರುಖ್ ಖಾನ್ ಹೆಚ್ಚು ಚಿಂತೆಗೆ ಒಳಗಾದರು. ಬಳಿಕ ಆರ್ಯನ್ ಖಾನ್ ತಪ್ಪಿಲ್ಲ ಅನ್ನೋದು ಸಾಬೀತಾಯಿತು. ಅವರು ಕ್ಲೀನ್​ಚಿಟ್ ಪಡೆದು ಹೊರ ಬಂದರು. ಸೆಲೆಬ್ರಿಟಿ ಮಕ್ಕಳು ಸಾಮಾನ್ಯವಾಗಿ ಹೀರೋ ಆಗೋಕೆ ಬಯಸುತ್ತಾರೆ. ಆದರೆ, ಆರ್ಯನ್ ಖಾನ್ ನಿರ್ದೇಶನದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅವರು ಬಟ್ಟೆ ವ್ಯಾಪಾರ ಕೂಡ ಶುರು ಮಾಡಿದ್ದಾರೆ. ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ