ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿಗೆ ಹೆಚ್ಚುತ್ತಿದೆ ಫ್ಯಾನ್​​ ಬೇಸ್; ವಿಫಲವಾಗಲಿದೆ ಮನೆಯವರ ತಂತ್ರ?

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಈ ವಿಚಾರ ಇಟ್ಟುಕೊಂಡು ಮನೆಯಲ್ಲಿ ಅನೇಕರು ಟೀಕೆ ಮಾಡಿದ್ದಾರೆ. ಈ ಮೂಲಕ ವೀಕ್ಷಕರಿಗೆ ಇವರ ಮೇಲೆ ಬೇರೆಯ ರೀತಿಯ ಭಾವನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿಗೆ ಹೆಚ್ಚುತ್ತಿದೆ ಫ್ಯಾನ್​​ ಬೇಸ್; ವಿಫಲವಾಗಲಿದೆ ಮನೆಯವರ ತಂತ್ರ?
ರೂಪೇಶ್
Edited By:

Updated on: Aug 23, 2022 | 8:56 PM

ರೂಪೇಶ್ ಶೆಟ್ಟಿ (Roopesh Shetty) ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಅಭಿಮಾನಿ ವರ್ಗ ದಿನ ಕಳೆದಂತೆ ಹೆಚ್ಚುತ್ತಿದೆ. ಕರಾವಳಿಯವರಾದ ಅವರು ವೃತ್ತಿಯಲ್ಲಿ ಆರ್​ಜೆ ಹಾಗೂ ಹೀರೋ. ಈಗ ರೂಪೇಶ್ ಶೆಟ್ಟಿ ಬಿಗ್ ಬಾಸ್​ಗೆ ಎಂಟ್ರಿ ಕೊಡುವ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯ ಆಗಿದ್ದಾರೆ. ಅವರ ವ್ಯಕ್ತಿತ್ವ ಅನೇಕರಿಗೆ ಇಷ್ಟವಾಗುತ್ತಿದೆ. ಮನೆಯಿಂದ ಅವರನ್ನು ಹೊರಗೆ ಕಳಿಸಲು ತಂತ್ರಗಳು ನಡೆಯುತ್ತಿವೆ. ಆದರೆ, ಅಭಿಮಾನಿ ಬಳಗ ಹೆಚ್ಚುತ್ತಿರುವುದರಿಂದ ಮನೆಯವರ ತಂತ್ರ ವಿಫಲವಾಗುವ ಸೂಚನೆ ಸಿಕ್ಕಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಈ ವಿಚಾರ ಇಟ್ಟುಕೊಂಡು ಮನೆಯಲ್ಲಿ ಅನೇಕರು ಟೀಕೆ ಮಾಡಿದ್ದಾರೆ. ಸೋಮಣ್ಣ ಮಾಚಿಮಾಡ ಅವರು ಈ ವಿಚಾರವನ್ನು ಪದೇಪದೇ ಎತ್ತುತ್ತಿದ್ದಾರೆ. ಈ ಮೂಲಕ ವೀಕ್ಷಕರಿಗೆ ಇವರ ಮೇಲೆ ಬೇರೆಯ ರೀತಿಯ ಭಾವನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ಟಾಸ್ಕ್ ವಿಚಾರದಲ್ಲೂ ರೂಪೇಶ್ ಅವರನ್ನು ಟೀಕೆ ಮಾಡಲಾಗುತ್ತಿದೆ. ರಾಕೇಶ್ ಅವರು ಕೆಲ ಟಾಸ್ಕ್​ ಗೆದ್ದಿದ್ದಾರೆ. ಆದರೆ, ಟಾಸ್ಕ್​ ಗೆದ್ದಿಲ್ಲ ಎಂಬ ವಿಚಾರವನ್ನು ಕೆಲವರು ಹೈಲೈಟ್ ಮಾಡಿದ್ದರು. ಈ ಕಾರಣಕ್ಕೆ ಈ ಬಾರಿ ರೂಪೇಶ್ ನಾಮಿನೇಟ್ ಆದರು. ‘ರೂಪೇಶ್ ಎಂಟರ್​ಟೇನ್ ಮಾಡುತ್ತಾರೆ. ಆದರೆ, ಟಾಸ್ಕ್​​ನಲ್ಲಿ ಫೇಲ್ ಆಗುತ್ತಿದ್ದಾರೆ’ ಎಂದು ಅವರನ್ನು ನಾಮಿನೇಟ್ ಮಾಡಲಾಯಿತು.

ರೂಪೇಶ್ ಅವರು ಟಾಸ್ಕ್​ ವಿಚಾರದಲ್ಲಿ ಕೊಂಚ ಡಲ್ ಇರಬಹುದು. ಆದರೆ, ಅವರು ಸಖತ್ ಆಗಿ ಎಂಟರ್​ಟೇನ್​ಮೆಂಟ್ ನೀಡುತ್ತಿದ್ದಾರೆ. ಕೆಲವರು ಅವರನ್ನು ಬಿಗ್ ಬಾಸ್ ವಿನ್ನರ್ ಶೈನ್​ ಶೆಟ್ಟಿಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೂ ಅವರಿಗೆ ಅಭಿಮಾನಿ ಬಳಗ ಹೆಚ್ಚುತ್ತಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ’: ಡೇಂಜರ್ ಜೋನ್​ನಲ್ಲಿ 7 ಮಂದಿ; ಸೋನು ಶ್ರೀನಿವಾಸ್ ಗೌಡ ಬಚಾವ್​

‘ಬಿಗ್ ಬಾಸ್ ಒಟಿಟಿ’ಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಇವರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. 12 ಸ್ಪರ್ಧಿಗಳ ಪೈಕಿ ಮೂರು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸನ್​ಗೆ ಹೋಗುತ್ತಾರೆ. ಈ ಮೂವರ ಪೈಕಿ ರೂಪೇಶ್ ಕೂಡ ಒಬ್ಬರಾಗಿರುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕಲರ್ಸ್ ಸೂಪರ್ ಟಿವಿಯಲ್ಲಿ ಹಂಚಿಕೊಳ್ಳುವ ಪ್ರೋಮೋಗಳಿಗೆ ರೂಪೇಶ್ ಅವರನ್ನು​​ ಬೆಂಬಲಿಸಿ  ಕಮೆಂಟ್​ಗಳು ಬರುತ್ತಿವೆ.

Published On - 8:52 pm, Tue, 23 August 22

TV9 Web

TV9 Kannada

Read More
Loading...
Unable to load recommendations.
Follow Us